Advertisement

War: ಯುದ್ಧ ಒಳ್ಳೆಯದೇ  ಅಥವಾ ಕೆಟ್ಟದೇ?

02:55 PM Sep 12, 2024 | Team Udayavani |

ಯುದ್ಧ ಒಳ್ಳೆಯದೇ ಅಥವಾ ಕೆಟ್ಟದೇ ಎಂಬ ಪ್ರಶ್ನೆಯನ್ನು ಕೇಳಿದಾಗ ಆದಷ್ಟ ಜನ  ಯುದ್ಧ ಕೆಟ್ಟದು ಎಂಬ ಉತ್ತರವನ್ನೇ ನೀಡುತ್ತಾರೆ.ಹೌದು, ನನ್ನ ಬಳಿ ಈ ಪ್ರಶ್ನೆ ಕೇಳಿದರೆ ನಾನು ಕೂಡ ಈ ಉತ್ತರವನ್ನೇ ನೀಡುತ್ತೇನೆ. ಯುದ್ಧದಿಂದ ಆದ ಪರಿಣಾಮ ಏನು?ಯುದ್ಧದಿಂದ ಆದಂತಹ ಪ್ರಯೋಜನ ಏನು ಎಂಬುದನ್ನು ತಿಳಿದುಕೊಳ್ಳೋಣ.

Advertisement

ಭಾರತದಲ್ಲಿ ಆದಂತಹ ಸ್ವಾತಂತ್ರ್ಯ ಹೋರಾಟಗಳೇ ಆಗಿರಬಹುದು ಅಥವಾ ಪ್ರಪಂಚದಲ್ಲಿ ನಡೆದಂತಹ ಜಾಗತಿಕ ಯುದ್ಧಗಳೇ  ಆಗಿರಬಹುದು, ಈ ಎಲ್ಲ ಯುದ್ಧಗಳಲ್ಲಿ ಪುರುಷರು ಹೋರಾಡಿ ವೀರ ಮರಣ ಹೊಂದಿದರು ಎಂಬ ವಿಷಯವನ್ನು ನಾವು ಓದಿಕೊಂಡೆ ಬಂದಿದ್ದೇವೆ, ಆದರೆ ಪುರುಷನು ಯುದ್ಧದಲ್ಲಿ ಹೋರಾಡುವಾಗ  ಮಹಿಳೆಯರ ಪರಿಸ್ಥಿತಿ ಯಾವ ರೀತಿ ಇತ್ತು ಎಂಬುದನ್ನು ನಾವು ಪ್ರಶ್ನಿಸಲು ಹೋಗುವುದಿಲ್ಲ.

ಪುರುಷ ಯುದ್ಧದ ಸಮಯದಲ್ಲಿ ಜೈಲಿಗೋ ಅಥವಾ ಮರಣ ಹೊಂದಿದರೆ, ತನ್ನ ಕುಟುಂಬದ ಜವಾಬ್ದಾರಿಯನ್ನು ಮಹಿಳೆ ತನ್ನ ತಲೆಯ ಮೇಲೆ ಹೊತ್ತು ಸಾಗಬೇಕಿತ್ತು. ಮಹಿಳೆ ಸ್ವಾವಲಂಬಿಯಾಗಿ ಇಂದು ಈ ಪ್ರಪಂಚದಲ್ಲಿ ದುಡಿಯಲು ಅವಕಾಶವನ್ನು ಕಲ್ಪಿಸಿಕೊಟ್ಟದು ಈ ಯುದ್ಧವೇ ಆಗಿದೆ. ಮಹಿಳೆಗೆ ದುಡಿಯುವ ಅನಿವಾರ್ಯತೆಯನ್ನು ಯುದ್ಧ ಹೆಚ್ಚಿಸಿತ್ತು.

ಈ ಕಾರಣದಿಂದಾಗಿ ಜಾಗತಿಕ ಮಹಾಯುದ್ಧದ ಸಂದರ್ಭದಲ್ಲಿ ನರ್ಷ್‌ ಎಂಬ ವೃತ್ತಿಯ ಪರಿಚಯವಾಯಿತು. ನರ್ಷ್‌ ಮಾತ್ರವಲ್ಲ ಯುದ್ಧ ಅನೇಕ ಸಂಶೋಧನೆಗಳಿಗೂ ಕೂಡ ಕಾರಣವಾಯಿತು. ರಕ್ತದಾನ ಎಂಬ ಪರಿಕಲ್ಪನೆ ಕೂಡ ಪ್ರಾರಂಭವಾದದ್ದು ಈ ಯುದ್ಧದಿಂದಲೇ, ಯುದ್ಧದಲ್ಲಿ ಬದುಕುಳಿದ ಹಲವು ಸೈನಿಕರಿಗೆ ರಕ್ತದ ಅನಿವಾರ್ಯತೆ ಇರುತ್ತಿತ್ತು.

ಈ ಕಾರಣದಿಂದ ವಿಜ್ಞಾನ ವಿಭಾಗದಲ್ಲಿ ಅನೇಕ ಸಂಶೋಧನೆ ನಡೆದು ಒಬ್ಬ ವ್ಯಕ್ತಿಯ ರಕ್ತವನ್ನು ಅದೇ ಗುಂಪಿನ ಇನ್ನೊಂದು ವ್ಯಕ್ತಿಗೆ ನೀಡಬಹುದು ಎಂಬ ಪರಿಕಲ್ಪನೆ ಬೆಳೆಯಿತು. ಅಷ್ಟೇ ಅಲ್ಲ ನಾವು ಇಂದು ಬಳಸುವ ಪೆನ್ನು ಕೂಡ ಯುದ್ಧದ ಸಂದರ್ಭದಲ್ಲಿ ಸೃಷ್ಟಿಯಾದ ವಸ್ತು. ಫ್ರಿಜ್‌ ಕೂಡ  ಯುದ್ಧದ ಸಂದರ್ಭದಲ್ಲಿ ರಕ್ತವನ್ನು ಹಾಳಾಗದಂತೆ ಸಂಸ್ಕರಿಸಿ ಇಡಲು ಅನ್ವೇಷಿಸಿದ ವಸ್ತು. ಹೀಗೆ ಅನೇಕ ವಸ್ತುಗಳು ಯುದ್ಧದ ಸೃಷ್ಟಿ.

Advertisement

ಯುದ್ಧ ಕೆಡುಕನ್ನು ಸೃಷ್ಟಿಸಿದೆ, ಒಳಿತನ್ನು ಸೃಷ್ಟಿಸಿದೆ. ಆದುದರಿಂದ ಈ ಪ್ರಪಂಚದಲ್ಲಿ ನಡೆಯುವ ಪ್ರತಿಯೊಂದು ಘಟನೆ, ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಸನ್ನಿವೇಶ, ಒಳಿತನ್ನು ಸೃಷ್ಟಿಸುತ್ತದೆ, ಕೆಡುಕನ್ನು ಸೃಷ್ಟಿಸುತ್ತದೆ ಎಂಬುದನ್ನು ಯುದ್ಧ ಎಂಬ ನಿದರ್ಖನದಿಂದ ನಾವು ಅರ್ಥಮಾಡಿ ಕೊಳ್ಳಬಹುದು.

ಇಷ್ಟೆಲ್ಲ ಒಳಿತುಗಳನ್ನು ಯುದ್ಧ ಸೃಷ್ಟಿಸಿದರೂ, ಯುದ್ಧಕ್ಕಿಂತ ಅಹಿಂಸೆ ಒಳ್ಳೆ ಯದು, ಅಹಿಂಸೆ ಸಾಮಾನ್ಯ ಜನರ ಜೀವ ಉಳಿಸು ತ್ತದೆ, ಒಬ್ಬಳು ತಾಯಿಗೆ ತನ್ನ ಮಗನನ್ನು, ಹೆಂಡತಿಗೆ ತನ್ನ ಗಂಡನನ್ನು, ಮಗಳಿಗೆ ತನ್ನ ತಂದೆಯನ್ನು ಉಳಿಸಿಕೊಡುವ ಶಕ್ತಿ ಅಹಿಂಸೆಗೆ ಇದೆ ಎಂಬುವುದನ್ನು ಕೂಡ ನಾವು ಮರೆಯುವಂತಿಲ್ಲ.

  - ನಿಖಿತಾ ಕಡೇಶಿವಾಲಯ

ಸರಕಾರಿ ಮಹಿಳಾ ಕಾಲೇಜು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.