Advertisement

Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್‌

10:23 PM Jan 04, 2025 | Team Udayavani |

ಬಳ್ಳಾರಿ: ವಕ್ಫ್ ವಿವಾದಕ್ಕೆ ಸಂಬಂಧಿಸಿದಂತೆ 2ನೇ ಹಂತದ “ವಕ್ಫ್ ಹಠಾವೊ ದೇಶ್‌ ಬಚಾವೊ’ ಜನಜಾಗೃತಿ ಅಭಿಯಾನಕ್ಕೆ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌, ರಮೇಶ್‌ ಜಾರಕಿಹೊಳಿ ನೇತೃತ್ವದ ತಂಡ ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ಶನಿವಾರ ಚಾಲನೆ ನೀಡಿದೆ.

Advertisement

ಕಂಪ್ಲಿಯ ಉದ್ಭವ ಮಹಾಗಣಪತಿ ದೇವಸ್ಥಾನದಿಂದ ಕೈಗೊಂಡ ಪಾದಯಾತ್ರೆ ಅಂಬೇಡ್ಕರ್‌ ವೃತ್ತದ ಮೂಲಕ ಸಣಾಪುರ ರಸ್ತೆಯಲ್ಲಿರುವ ಶಾರದಾ ಶಾಲೆ ಆವರಣಕ್ಕೆ ತಲುಪಿತು. ಬಳಿಕ ತೆರೆದ ವೇದಿಕೆಯಲ್ಲಿ ಎರಡನೇ ಹಂತದ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಬಿಜೆಪಿ ಮುಖಂಡರು ಕಾಂಗ್ರೆಸ್‌ ಪಕ್ಷ, ಸಿಎಂ ಸಿದ್ದರಾಮಯ್ಯ, ಮುಸಲ್ಮಾನರ ವಿರುದ್ಧ ಆರೋಪಗಳ ಸುರಿಮಳೆಗೈದರು.

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮಾತನಾಡಿ, ಮುಸಲ್ಮಾನರು ಯಾರನ್ನೂ ಭಾಯಿ ಭಾಯಿ ಎಂದು ಒಪ್ಪಿಕೊಳ್ಳಲ್ಲ. ನೀವು ಮಾತ್ರ ಭಾಯಿ ಭಾಯಿ ಎನ್ನುತ್ತೀರಿ. ಮತ ಹಾಕಿದ್ದ ಲಿಂಗಾಯತರು-ದಲಿತರು ಭಾಯಿ ಭಾಯಿ ಅಲ್ಲ. ಕೇವಲ ಜಮೀರ್‌ ಅಹ್ಮದ್‌ ಮಾತ್ರ ಭಾಯಿ ಭಾಯಿ ಎಂದು ವ್ಯಂಗ್ಯವಾಡಿದ ಯತ್ನಾಳ್‌, ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ ಎಂದು ಬೇಸರ ವ್ಯಕ್ತಪಡಿಸಿದರು.

ಅಡ್ಜೆಸ್ಟ್‌ಮೆಂಟ್‌ ರಾಜಕಾರಣಿಗಳೇ ತುಂಬಿದ್ದಾರೆ:
ಮಾಜಿ ಸಂಸದ ಪ್ರತಾಪ್‌ ಸಿಂಹ ಮಾತನಾಡಿ, ಸಿಎಂ ಸಿದ್ದರಾಮಯ್ಯ ಪದೇಪದೆ ತನ್ನನ್ನು ತಾನು ದೇವರಾಜ ಅರಸು ಎಂಬಂತೆ ಬಿಂಬಿಸಿಕೊಳ್ಳುತ್ತಾರೆ. ಅರಸು ಅವರು ಜನರಿಗೆ ಭೂಮಿ ನೀಡಿದರೆ, ಸಿಎಂ ಸಿದ್ದರಾಮಯ್ಯ ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಅಡ್ಜೆಸ್ಟ್‌ಮೆಂಟ್‌ ರಾಜಕಾರಣಿಗಳು ರಾಜ್ಯದಲ್ಲಿ ತುಂಬಿಕೊಂಡಿದ್ದಾರೆ. ಅಡ್ಜೆಸ್ಟ್‌ಮೆಂಟ್‌ ರಾಜಕಾರಣಿಗಳು ವಕ್ಫ್ ಹೋರಾಟ ಹಳ್ಳ ಹಿಡಿಸುತ್ತಾರೆಂದು ನಾವು ಹೋರಾಟ ಮಾಡ್ತಿದ್ದೇವೆ. ಮೊದಲ ಹಂತದ ಹೋರಾಟದ ಬಳಿಕ ಜೆಪಿಸಿ, ಕೇಂದ್ರ ಸಚಿವರ ಜೊತೆಗೆ ಮಾತನಾಡಿ ಬಂದಿದ್ದೇವೆ. ಭಾಷಣ ಕೊಡುವ ಹೋರಾಟ ನಮ್ಮದಲ್ಲ ಬಡವರಿಗೆ ನ್ಯಾಯ ಕೊಡಿಸುವ ಉದ್ದೇಶ ಮಾತ್ರವಿದೆ ಎಂದು ಹೇಳಿದರು.

ಮಾಜಿ ಶಾಸಕ ಕುಮಾರ್‌ ಬಂಗಾರಪ್ಪ, ಮಾಜಿ ಸಂಸದರಾದ ಜಿ.ಎಂ.ಸಿದ್ದೇಶ್ವರ್‌, ಬಿ.ವಿ.ನಾಯಕ್‌, ಮಾಜಿ ಶಾಸಕ ಅರವಿಂದ ಲಿಂಬಾವಳಿ ಇನ್ನಿತರರು ಭಾಗವಹಿಸಿದ್ದರು.

Advertisement

ನಮ್ಮದು 130 ಸ್ಥಾನ ತರುವ ಗುಂಪು: ಬಸನಗೌಡ ಯತ್ನಾಳ್‌
“ಭಿನ್ನಮತೀಯರ ಮೇಲೆ ಹೈಕಮಾಂಡ್‌ ಗರಂ ಆದರೆ, ಕಂಪ್ಲಿಗೆ ಏಕೆ ಬರುತ್ತೇವೆ? ನಾವೆಲ್ಲ ಬಿಜೆಪಿ ಗುಂಪು, ಮುಂದಿನ ದಿನಗಳಲ್ಲಿ 130 ಸ್ಥಾನಗಳನ್ನು ತರುವ ಗುಂಪು, ಸಿಎಂ ಆಗಿ ಲೂಟಿ ಮಾಡೋ ಗುಂಪು ಅಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು, ಪರೋಕ್ಷವಾಗಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಗುಡುಗಿದರು.

ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿ, ವಕ್ಫ್ ವಿರುದ್ಧ ಹೋರಾಟ ಮಾಡುವ ನಮ್ಮನ್ನು ಭಿನ್ನಮತೀಯರು ಎನ್ನುತ್ತಾರೆ. ಯತ್ನಾಳ್‌ ಉಚ್ಚಾಟನೆ ಎಂದು ಪ್ರಚಾರ ಮಾಡುತ್ತಾರೆ. ಅದು ಸಾಧ್ಯವೇ? ಎಂದು ಪ್ರಶ್ನಿಸಿದರು. ನಾವೆಲ್ಲ ಬಿಜೆಪಿ ಗುಂಪು. ಸಿಎಂ ಅಗಿ ಲೂಟಿ ಮಾಡೋ ಗುಂಪು ಅಲ್ಲ. ಎಷ್ಟೇ ಆಸ್ತಿ ಮಾಡಿದರೂ, ಗುಂಡಿಗೆ ಹಾಕೋದು ತಪ್ಪಲ್ಲ ಎಂದು ಹಾಡು ಹಾಡಿ ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next