Advertisement
ಕಳೆದ 2 ವರ್ಷಗಳಿಂದ ದುಃಸ್ಥಿತಿಯಲ್ಲಿರುವ ಇಲ್ಲಿನ ಮುಖ್ಯ ರಸ್ತೆಯ ಡಾಮರು ಕಾಮಗಾರಿ ನಡೆಯದಿರುವುದರಿಂದ ಈ ಮಾರ್ಗವಾಗಿ ವಾಹನದಲ್ಲಿ ಸಾಗಲು ಕಷ್ಟಸಾಧ್ಯವಾಗಿದೆ. ದ್ವಿಚಕ್ರ ವಾಹನಗಳು ಕೂಡ ಸಾಗದಷ್ಟು ಹದಗೆಟ್ಟಿದ್ದು, ಭಾರೀ ಹೊಂಡಗಳಿಂದ ಕೂಡಿದೆ. ರಾತ್ರಿ ಪ್ರಯಾಣವಂತೂ ಹೇಳತೀರದು. ಈ ಭಾಗದಲ್ಲಿ ವಾಹನ ಅಪಘಾತ ನಡೆಯುತ್ತಿದ್ದರೂ ಕೂಡ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಕೊಲ್ಲೂರು ಶ್ರೀ ಮೂಕಾಂಬಿಕ ದೇಗುಲ ಹಾಗೂ ಸಿಗಂದೂರು ದೇಗುಲಕ್ಕೆ ಸಾಗಲು ಸನಿಹದ ಮಾರ್ಗವಾಗಿರುವ ವಂಡ್ಸೆ, ಜಡ್ಕಲ್, ಹಾಲ್ಕಲ್ ಮಾರ್ಗವೂ ಸಂಪೂರ್ಣವಾಗಿ ಹದಗೆಟ್ಟಿದ್ದರೂ, ಸರಕಾರದ ಗಮನ ಸೆಳೆದರೂ ಈವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ನಿರ್ಲಕ್ಷ್ಯತನಕ್ಕೆ ಹಿಡಿದ ಕನ್ನಡಿಯಾಗಿದೆ. ನೂರಾರು ವಾಹನಗಳು ಈ ಮಾರ್ಗವಾಗಿ ಪ್ರತಿದಿನ ಸಂಚರಿಸುತ್ತಿದ್ದರೂ ಹೊಂಡ ಮಯ ರಸ್ತೆಗೆ ಮರುಡಾಮರೀಕರಣದೊಡನೆ ಸಂಪೂರ್ಣ ಪರಿಹಾರದ ಬೇಡಿಕೆ ಈಡೇರಿಕೆಗೆ ಇನ್ನೂ ಮುಹೂರ್ತ ಕೂಡಿ ಬರದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
Related Articles
ಸುಗಮ ವಾಹನ ಸಂಚಾರಕ್ಕೆ ತೊಡಕಾಗುತ್ತಿರುವ ಚಿತ್ತೂರು, ಇಡೂರು ರಾ.ಹೆದ್ದಾರಿ ಡಾಮರು ಕಾಮಗಾರಿ ಕೂಡಲೇ ಆರಂಭಿಸಬೇಕಾಗಿದೆ. ಗ್ರಾಮಸ್ಥರ ಬೇಡಿಕೆ ಈಡೇರಿಸುವಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕಾಗಿದೆ.
– ರವಿರಾಜ ಶೆಟ್ಟಿ, ಅಧ್ಯಕ್ಷರು, ಚಿತ್ತೂರು ಗ್ರಾ.ಪಂ.
Advertisement
ಜಲ್ಲಿಯಿಂದ ಇನ್ನೂ ಸಂಕಷ್ಟ!ಅಲ್ಲಲ್ಲಿ ಮುಖ್ಯ ರಸ್ತೆಯ ಹೊಂಡಗಳಿಗೆ ಜಲ್ಲಿಯ ತೇಪೆ ಹಾಕಿ ಭರ್ತಿ ಮಾಡಿದ್ದರೂ ಘನ ವಾಹನಗಳ ಸಂಚಾರದಿಂದ ಜಲ್ಲಿಗಳು ಹೊರಚೆಲ್ಲಿದ್ದು, ಮತ್ತಷ್ಟು ಗೊಂದಲಕ್ಕೆ ಎಡೆಮಾಡಿದಂತಾಗಿದೆ. ಯಾಕೆಂದರೆ ರಸ್ತೆಯುದ್ದಕ್ಕೂ ಹರಡಿದ ಜಲ್ಲಿ ವೇಗವಾಗಿ ಸಾಗುವ ವಾಹನಗಳ ಚಕ್ರದಿಂದ ಇತರ ವಾಹನಗಳ ಗಾಜಿಗೆ ತಗಲಿ ಗಾಜು ಒಡೆದು ನಷ್ಟ ಸಂಭವಿಸಿದ ಘಟನೆ ನಡೆದಿದೆ. -ಡಾ| ಸುಧಾಕರ ನಂಬಿಯಾರ್