Advertisement
ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮವೊಂದರಲ್ಲೆ ಸರಿಸುಮಾರು 130ಕ್ಕೂ ಅಧಿಕ ಮನೆಗಳು ಹಾನಿಗೀಡಾಗಿದ್ದವು. ಈ ಪೈಕಿ ಸರಕಾರದಿಂದ 121 ಮನೆಗಳು ಮಂಜೂರುಗೊಂಡಿದ್ದವು. ಆರಂಭದಲ್ಲಿ ಜಿಪಿಎಸ್ ಸಮಸ್ಯೆ ತೀವ್ರ ತಲೆದೋರಿರುವ ನಡುವೆ ಕಂತು ಹಣ ಬಾರದೆ ಮನೆ ನಿರ್ಮಾಣ ಒಂದು ವರ್ಷ ವಿಳಂಬವಾಗಿತ್ತು. ಅನೇಕ ಅಡೆತಡೆಗಳ ನಡುವೆ ಮನೆ ನಿರ್ಮಾಣ ಹಂತಕ್ಕೆ ಬಂದಾಗ ಕೆಲವಷ್ಟು ಮನೆಗಳ ವಾರಸುದಾರರು ಮೃತಪಟ್ಟಿದ್ದಾರೆ.
Related Articles
Advertisement
ಕಲ್ಲೊಲೆ ಲಿಂಗಪ್ಪ ಗೌಡ ಎಪ್ರಿಲ್ 2020ರಲ್ಲಿ ಮೃತಪಟ್ಟಿದ್ದು, 2019 ಸೆಪ್ಟಂಬರ್‌ನಿಂದ ಮೂರು ಕಂತುಗಳಲ್ಲಿ ತಲಾ 1 ಲಕ್ಷ ರೂ. ಬಂದಿದ್ದು, ಇನ್ನೆರಡು ಕಂತುಗಳು ಖಾತೆ ಸೇರಿಲ್ಲ. ಮತ್ತೂಂದೆಡೆ 2020 ಸೆಪ್ಟಂಬರ್‌ನಲ್ಲಿ ಖಾತೆಗೆ 1 ಲಕ್ಷ ರೂ. ಜಮೆ ಯಾಗಿರುವುದು ಆ್ಯಪ್‌ನಲ್ಲಿ ತೋರಿಸುತ್ತಿದ್ದು, ಖಾತೆಗೆ ಜಮೆಯಾಗಿಲ್ಲ.
ಕೊಲ್ಲಿ ಸೀತು ಗೌಡ ಮೃತಪಟ್ಟಿದ್ದು, ಅವರಿಗೆ ಈವರೆಗೆ ನಾಲ್ಕು ಕಂತುಗಳು ಖಾತೆ ಸೇರಿದ್ದು, 1 ಕಂತು ಬಾಕಿ ಉಳಿದಿದೆ. ಮನೆ ಮಂದಿ ಬೆಂಗಳೂರು ಸಹಿತ ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳನ್ನು ಭೇಟಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ವಾರಸುದಾರರ ಬದಲಾವಣೆ ವಿಚಾರವಾಗಿ ಇಲಾಖೆ ಮುಂಚೆಯೇ ಚಿಂತಿಸದೆ ಇದ್ದುದರಿಂದ ಮಧ್ಯಾಂತರದಲ್ಲಿ ಇವುಗಳ ಬದಲಾವಣೆಗೆ ಸಮಸ್ಯೆಯಾಗಿದೆ. ಈ ಕುರಿತು ಸರಕಾರದ ಮಟ್ಟದಲ್ಲಿ ಅಥವಾ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕಿದೆ.
ಮಿತ್ತಬಾಗಿಲು ಗ್ರಾ.ಪಂ.ನ ಮಲವಂತಿಗೆ ಗ್ರಾಮದ ಪಾಮಜಿ ಮನೆ ನಿವಾಸಿ ರಾಮಣ್ಣಗೌಡ, ಕಿಲ್ಲೂರುತ್ಮಿನಬೆಟ್ಟು ಅಬ್ದುಲ್ ರಫೀಕ್, ಕಲ್ಲೊಲೆ ಲಿಂಗಪ್ಪ ಗೌಡ ಸೇರಿದಂತೆ ಕೊಲ್ಲಿ ಸೀತು ಗೌಡ ಮೃತಪಟ್ಟಿದ್ದು, ಮಕ್ಕಳು ಅಥವಾ ಪತ್ನಿ ಹೆಸರಿಗೆ ಬದಲಾಯಿಸಲು ಬೆಂಗಳೂರು ರಾಜೀವ್ ಗಾಂಧಿ ವಸತಿ ನಿಗಮದ ಎಲ್ಲ ಇಲಾಖೆಗಳನ್ನು ಸುತ್ತಾಡಿದರೂ ಪ್ರಯೋಜನವಾಗಿಲ್ಲ. ಸಂಪೂರ್ಣ ದಾಖಲೆ ಒದಗಿ ಸಿದರೂ ಕಂದಾಯ ಇಲಾಖೆ ಇದಕ್ಕೆ ಸಂಬಂಧವೇ ಇಲ್ಲದಂತೆ ಕುಳಿತಿದೆ. ಪ್ರಸಕ್ತ ಮುಂದಿನ ಹಂತದ ಜಿ.ಪಿ.ಎಸ್. ಪ್ರಕ್ರಿಯೆ ನಡೆಯದಿರುವುದರಿಂದ 3 ಅಥವಾ ನಾಲ್ಕು ಕಂತುಗಳು ಬಂದಿದ್ದು, ಉಳಿದ ಕಂತು ಬಾಕಿಯಾಗಿವೆ.ಈ ಕುರಿತು ಇಲಾಖೆಗಳಲ್ಲೂ ಸ್ಪಷ್ಟ ಉತ್ತರ ದೊರೆತಿಲ್ಲ.
ವಾರಸುದಾರರ ಬದಲಾವಣೆಗೆ ಬೆಂಗಳೂರು ಅಲೆದಾಟ : ಮಿತ್ತಬಾಗಿಲು ಗ್ರಾ.ಪಂ.ನ ಮಲವಂತಿಗೆ ಗ್ರಾಮದ ಪಾಮಜಿ ಮನೆ ನಿವಾಸಿ ರಾಮಣ್ಣಗೌಡ, ಕಿಲ್ಲೂರುತ್ಮಿನಬೆಟ್ಟು ಅಬ್ದುಲ್ ರಫೀಕ್, ಕಲ್ಲೊಲೆ ಲಿಂಗಪ್ಪ ಗೌಡ ಸೇರಿದಂತೆ ಕೊಲ್ಲಿ ಸೀತು ಗೌಡ ಮೃತಪಟ್ಟಿದ್ದು, ಮಕ್ಕಳು ಅಥವಾ ಪತ್ನಿ ಹೆಸರಿಗೆ ಬದಲಾಯಿಸಲು ಬೆಂಗಳೂರು ರಾಜೀವ್ ಗಾಂಧಿ ವಸತಿ ನಿಗಮದ ಎಲ್ಲ ಇಲಾಖೆಗಳನ್ನು ಸುತ್ತಾಡಿದರೂ ಪ್ರಯೋಜನವಾಗಿಲ್ಲ. ಸಂಪೂರ್ಣ ದಾಖಲೆ ಒದಗಿ ಸಿದರೂ ಕಂದಾಯ ಇಲಾಖೆ ಇದಕ್ಕೆ ಸಂಬಂಧವೇ ಇಲ್ಲದಂತೆ ಕುಳಿತಿದೆ. ಪ್ರಸಕ್ತ ಮುಂದಿನ ಹಂತದ ಜಿ.ಪಿ.ಎಸ್. ಪ್ರಕ್ರಿಯೆ ನಡೆಯದಿರುವುದರಿಂದ 3 ಅಥವಾ ನಾಲ್ಕು ಕಂತುಗಳು ಬಂದಿದ್ದು, ಉಳಿದ ಕಂತು ಬಾಕಿಯಾಗಿವೆ.ಈ ಕುರಿತು ಇಲಾಖೆಗಳಲ್ಲೂ ಸ್ಪಷ್ಟ ಉತ್ತರ ದೊರೆತಿಲ್ಲ.
ವಾರಸುದಾರರು ಮೃತಪಟ್ಟು ಖಾತೆ ಬದಲಾವಣೆ ನಡೆಸುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಸಂಬಂಧಪಟ್ಟ ವರದಿಯನ್ನು ತರಿಸಿ, ನೆರೆ ಸಂತ್ರಸ್ತರ ಪುನರ್ವಸತಿ ಯೋಜನೆಗೆ ಸಂಬಂಧಪಟ್ಟ ಅಧಿಕಾರಿಗಳು, ಎಂಜಿನಿಯರ್‌ಗಳೊಂದಿಗೆ ಚರ್ಚಿಸಿ ತತ್‌ಕ್ಷಣ ಕ್ರಮ ಕೈಗೊಳ್ಳಲಾಗುವುದು. -ಡಾ| ಕೆ.ವಿ.ರಾಜೇಂದ್ರ, ದ.ಕ.ಜಿಲ್ಲಾಧಿಕಾರಿ
-ಚೈತ್ರೇಶ್ ಇಳಂತಿಲ