Advertisement

ಉತ್ತರ ಪ್ರದೇಶದಲ್ಲಿ 30,000 ಉದ್ಯೋಗ ಸೃಷ್ಟಿಸುವ ವಾಲ್‌ ಮಾರ್ಟ್‌

05:27 PM Jul 27, 2018 | Team Udayavani |

ಲಕ್ನೋ : ವಾಲ್‌ ಮಾರ್ಟ್‌ ಇಂಡಿಯಾ ಕಂಪೆನಿ ಉತ್ತರ ಪ್ರದೇಶದಲ್ಲಿ ತನ್ನ 15 ಸ್ಟೋರ್‌ ಗಳನ್ನು ಆರಂಭಿಸಲಿದ್ದು ಆ ಮೂಲಕ ಅದು 30,000 ಸ್ಥಳೀಯ ಉದ್ಯೋಗಗಳನ್ನು ಸೃಷ್ಟಿಸಲಿದೆ ಮತ್ತು ಉತ್ತರ ಪ್ರದೇಶವನ್ನು ಅದು ತನ್ನ ಆದ್ಯತೆಯ ಪ್ರಗತಿ ರಾಜ್ಯವೆಂದು ಪರಿಗಣಿಸಿದೆ.

Advertisement

ವಾಲ್‌ ಮಾರ್ಟ್‌ ಇಂಡಿಯಾ ಈಗಾಗಲೇ ಉತ್ತರ ಪ್ರದೇಶದಲ್ಲಿ ನಾಲ್ಕು “ಕ್ಯಾಶ್‌ ಆ್ಯಂಡ್‌ ಕ್ಯಾರಿ’ ಸ್ಟೋರ್‌ಗಳನ್ನು ಆರಂಭಿಸಿದೆಯಲ್ಲದೆ ಲಕ್ನೋದಲ್ಲಿ ಫ‌ುಲ್‌ಫಿಲ್‌ಮೆಂಟ್‌ ಸೆಂಟರ್‌ (FC) ಆರಂಭಿಸಿದೆ; ಈ ಮೂಲಕ ಅದು 1,500 ಹೊಸ ಕೌಶಲ ಉದ್ಯೋಗಗಳನ್ನು ಸೃಷ್ಟಿಸಿದೆ. 

ಈ ವರ್ಷದ ಆದಿಯಲ್ಲಿ ಉತ್ತರ ಪ್ರದೇಶ ಸರಕಾರದೊಂದಿಗಿನ ತಿಳಿವಳಿಕೆ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದ ವಾಲ್‌ ಮಾರ್ಟ್‌, 15 ಹೋಲ್‌ಸೇಲ್‌ ಕ್ಯಾಶ್‌ ಆ್ಯಂಡ್‌ ಕ್ಯಾರಿ ಸ್ಟೋರ್‌ ಗಳನ್ನು  ಈ ಒಪ್ಪಂದದಡಿ ತೆರೆಯುವುದಾಗಿ ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next