Advertisement

ಅಮೆಜಾನ್‌ಗೆ ಸೆಡ್ಡು : ಜತೆಗೂಡಿದ ವಾಲ್‌ಮಾರ್ಟ್‌, ಮೈಕ್ರೋಸಾಫ್ಟ್

07:27 PM Jul 17, 2018 | |

ವಾಷಿಂಗ್ಟನ್‌: ಅಮೆಜಾನ್‌ ವಿರುದ್ಧ ಇನ್ನೂ ಉತ್ತಮ ಸ್ಪರ್ಧೆಯನ್ನು ಸಾದರಪಡಿಸುವ ಸಲುವಾಗಿ ವಾಲ್‌ ಮಾರ್ಟ್‌ ಇಂದು ತಾನು ಮೈಕ್ರೋಸಾಫ್ಟ್ ಜತೆಗೆ ಡಿಜಿಟಲ್‌ ಟ್ರಾನ್ಸ್‌ಫಾರ್ಮೇಶನ್‌ಗಾಗಿ ವ್ಯೂಹಾತ್ಮಕ ಭಾಗೀದಾರಿಕೆಯನ್ನು ಪ್ರವೇಶಿಸುತ್ತಿರುವುದಾಗಿ ಹೇಳಿಕೊಂಡಿದೆ. 

Advertisement

ಅಮೆರಿಕ ಮತ್ತು ವಿಶ್ವಾದ್ಯಂತ ಅಮೆಜಾನ್‌ ಚಿಲ್ಲರೆ ಮಾರಾಟ ಉದ್ಯಮದಲ್ಲಿನ ತನ್ನ ಪಾಲನ್ನು ಗಮನಾರ್ಹವಾಗಿ ಹೆಚ್ಚಿಸಿಕೊಳ್ಳುತ್ತಿರುವ ಕಾರಣ ವಾಲ್‌ ಮಾರ್ಟ್‌ಗೆ ನಿರ್ಣಾಯಕ ಸ್ಪರ್ಧೆ ನೀಡುವುದು ಅಗತ್ಯವೂ ಅನಿವಾರ್ಯವೂ ಆಗಿದೆ. 

ವಾಲ್‌ ಮಾರ್ಟ್‌ ಮತ್ತು ಮೈಕ್ರೋಸಾಫ್ಟ್ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯು ಕೃತಕ ತಂತ್ರಜ್ಞಾನ ಮತ್ತು ಇತರಬಗೆಯ ತಾಂತ್ರಿಕ ಪರಿಕರಗಳನ್ನು ಪರಿಣಾಮಕಾರಿಯಾಗಿ ಬಳಸುವುದಕ್ಕೆ ವಿಶೇಷ ಮಹತ್ವ ನೀಡುತ್ತದೆ ಮತ್ತು ಆ ಮೂಲಕ ವೆಚ್ಚಗಳ ಉತ್ತಮ ನಿರ್ವಹಣೆ, ಕಾರ್ಯಾಚರಣೆ ವಿಸ್ತರಣೆ ಮತ್ತು ಅತ್ಯಂತ ವೇಗದಲ್ಲಿ ಹೊಸತನದ ಅನ್ವೇಷಣೆಯ ಅನುಷ್ಠಾನಕ್ಕೆ ಒತ್ತು ನೀಡಲಾಗುತ್ತದೆ ಎಂದು ಎರಡೂ ಕಂಪೆನಿಗಳು ಹೇಳಿಕೊಂಡಿವೆ. 

ಗ್ರಾಹಕರಿಗೆ ಅತ್ತುತ್ತಮ ಹಾಗೂ ಅನುಕೂಲಕರ ರೀತಿಯಲ್ಲಿ ಶಾಪಿಂಗ್‌ ನಡೆಸಲು ಸಾಧ್ಯವಾಗಿಸುವುದು ಮತ್ತು ಸಹವರ್ತಿ ಸಂಸ್ಥೆಗಳಿಗೆ ಇನ್ನೂ ಚೆನ್ನಾಗಿ ಕಲಸ ಮಾಡುವುದಕ್ಕೆ ಅವಕಾಶ ಕಲ್ಪಿಸುವುದಕ್ಕೆ ಅನುಕೂಲವಾಗುವ ತಂತ್ರಜ್ಞಾನವನ್ನು ಅಳವಡಿಸುವುದಕ್ಕೆ ವಾಲ್‌ ಮಾರ್ಟ್‌ ಬದ್ಧವಾಗಿದೆ ಎಂದು ಅದರ ಚೀಫ್ ಎಕ್ಸಿಕ್ಯುಟಿವ್‌ ಡಗ್‌ ಮೆಕ್‌ಮಿಲನ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next