Advertisement
ಅವಿಭಜಿತ ದ.ಕ. ಜಿಲ್ಲೆ ಐದು ಬ್ಯಾಂಕ್‌ಗಳನ್ನು ರಾಷ್ಟ್ರಕ್ಕೆ ಕೊಟ್ಟಿದೆ. ಅವುಗಳನ್ನು ಕಾಂಗ್ರೆಸ್ ಪಕ್ಷವು ರಾಷ್ಟ್ರೀಕರಣ ಮಾಡಿ ಹಳ್ಳಿ ಹಳ್ಳಿಗಳಲ್ಲಿ ಶಾಖೆಗಳನ್ನು ತೆರೆದು ಜನಸಾಮಾನ್ಯರಿಗೆ ಅನುಕೂಲ ಮಾಡಿತು. ಈಗ ಬಿಜೆಪಿ ಸರಕಾರದವರಿಂದ ಸಾವಿರಾರು ಕೋಟಿ ಅನುತ್ಪಾದಕ ಆಸ್ತಿ (ಎನ್‌ಪಿಎ) ಹೆಚ್ಚಳವಾಗಿದೆ. ಸಾವಿರಾರು ಕೋಟಿ ರೂ.ಗಳನ್ನು ವಂಚಿಸಿ ಪರಾರಿ ಯಾಗಿದ್ದಾರೆ. ರೈತರ ಸಾಲ ಮನ್ನಾ ಮಾಡಲು ನಾವು ಬೇಡಿಕೆ ಮುಂದಿಟ್ಟರೆ ಅದಕ್ಕೆ ಕೇಂದ್ರ ಸರಕಾರ ಒಪ್ಪಲಿಲ್ಲ. ಕಳೆದ ವರ್ಷ ರೈತರ 2,500 ಕೋ. ರೂ. ಸಾಲವನ್ನು ಸಿದ್ದರಾಮಯ್ಯ ಸರಕಾರ ಮನ್ನಾ ಮಾಡಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಕಳೆದ ಚುನಾವಣೆಯಲ್ಲಿ ನರೇಂದ್ರ ಮೋದಿ ಯವರು ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ 15 ಲ.ರೂ. ಜಮೆ ಮಾಡುವುದಾಗಿ ಭರವಸೆ ನೀಡಿದ್ದರು, 15 ರೂ. ಆದರೂ ಜಮೆಯಾಗಿದೆಯೇ ಎಂದು ರಾಹುಲ್ ಪ್ರಶ್ನಿಸಿದರು. ಯುವಕರಿಗೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿ ದ್ದರು, ಸರಕಾರವೇ ಹೇಳುವಂತೆ ನಾಲ್ಕು ವರ್ಷಗಳಲ್ಲಿ 1 ಲಕ್ಷ ಉದ್ಯೋಗ ಮಾತ್ರ ಸೃಷ್ಟಿಯಾಗಿದೆ. ಬಡ ರೈತರ ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗುವಂತೆ ಮಾಡು ವು ದಾಗಿ ಹೇಳಿದ್ದರು, ಬೆಂಬಲ ಕೊಟ್ಟಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು. ರಾಜ್ಯದ ಸಿದ್ದರಾಮಯ್ಯ ಸರಕಾರ ನೀರಾವರಿ ಯೋಜನೆಗೆ ಮೂರು ಪಟ್ಟು ಹೆಚ್ಚು ಹಣ ನೀಡಿದೆ. ಹುಡುಗಿಯರಿಗೆ ಉಚಿತ ಉನ್ನತ ಶಿಕ್ಷಣ ನೀಡಲಾಗುತ್ತಿದೆ. ಇಲ್ಲಿ ಭೇದ ಭಾವ ಇಲ್ಲ, ದ್ವೇಷ, ಕೋಪ ಇಲ್ಲ; ಇದುವೇ ಕಾಂಗ್ರೆಸ್‌ಗೂ ಬಿಜೆಪಿಗೂ ಇರುವ ವ್ಯತ್ಯಾಸ ಎಂದು ರಾಹುಲ್ ಹೇಳಿದರು. ಒಬ್ಬರಿಂದ ಪ್ರಗತಿ ಅಸಾಧ್ಯ!
ಮೋದಿಯವರು ಕಳೆದ 70 ವರ್ಷಗಳಲ್ಲಿ ಭಾರತ ದಲ್ಲಿ ಏನೂ ಸಾಧನೆ ಆಗಿಲ್ಲ, ಕಾಂಗ್ರೆಸ್‌ನಿಂದ ಪ್ರಗತಿ ಆಗಿಲ್ಲ ಎಂದು ಹೇಳುತ್ತಾರೆ. ರಾಷ್ಟ್ರದ ಪ್ರಗತಿ ಒಬ್ಬರಿಂದ ಅಲ್ಲ, 125 ಕೋಟಿ ಜನರಿಂದ ಮಾತ್ರ ಸಾಧ್ಯ. ಆದ್ದರಿಂದ ಮೋದಿಯವರು ಕಳೆದ 70 ವರ್ಷಗಳಲ್ಲಿ ಶ್ರಮ ಪಟ್ಟವರಿಗೆ ಮಾಡುವ ಅವಮಾನವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
Related Articles
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕಲಬುರಗಿ ಮತ್ತು ಬೆಳಗಾವಿ ವಿಭಾಗದಲ್ಲಿ ರಾಹುಲ್ ಗಾಂಧಿಯವರ ಪ್ರವಾಸ ಮುಗಿದಿದೆ. ನಿರೀಕ್ಷೆಗೂ ಮೀರಿ ಜನರು ಪ್ರೀತಿ, ಅಭಿಮಾನ ತೋರಿಸಿ ದ್ದಾರೆ. ಈಗ ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸ ಆರಂಭ ಗೊಂಡಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರ ತೋರಿದ ಸಾಧನೆಯನ್ನು ಗಮನಿಸಿ ಮತ್ತೆ ಅಧಿಕಾರಕ್ಕೆ ತರಬೇಕು ಎಂದರು.
Advertisement
ನಮೋ= ನಮಗೆ ಮೋಸಹಿಂದಿನ ಚುನಾವಣೆ ವೇಳೆ ನಮೋ ಎಂದರೆ ನರೇಂದ್ರ ಮೋದಿ ಎನ್ನುತ್ತಿದ್ದರು. ಈಗ “ನಮಗೆ ಮೋಸ’ ಎಂದು ಗೊತ್ತಾಗುತ್ತಿದೆ. ದೇಶವೀಗ ರಾಹುಲ್ ಗಾಂಧಿ ಕಡೆಗೆ ನೋಡುತ್ತಿದೆ. ವಸುಧೈವ ಕುಟುಂಬಕಮ್ ಎಂಬ ಮಾತಿನಂತೆ ನೆಹರೂ ಕಾಲದಿಂದ ಇಂದಿನ ರಾಹುಲ್ ಗಾಂಧಿಯ ವರೆಗೂ ದೇಶದ 130 ಕೋಟಿ ಜನರನ್ನು ಈ ಮನೆತನ ಒಂದಾಗಿ ಕರೆದೊಯ್ಯುತ್ತಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಶಾಸಕ ವಿನಯಕುಮಾರ ಸೊರಕೆ ಸ್ವಾಗತಿಸಿ, ಕಾಪು ಕ್ಷೇತ್ರದ ಅಭಿವೃದ್ಧಿಯನ್ನು ಉಲ್ಲೇಖೀಸಿದರು. ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್, ಡಿ.ಕೆ. ಶಿವಕುಮಾರ್, ಡಾ| ಪರಮೇಶ್ವರ್, ವಿಷ್ಣುನಾಥನ್, ವೀರಪ್ಪ ಮೊಲಿ, ಡಿ.ಕೆ. ಹರಿಪ್ರಸಾದ್, ಮುನಿಯಪ್ಪ, ಪ್ರತಾಪಚಂದ್ರ ಶೆಟ್ಟಿ, ಗೋಪಾಲ ಪೂಜಾರಿ, ಗೋಪಾಲ ಭಂಡಾರಿ, ಜನಾರ್ದನ ತೋನ್ಸೆ ಉಪಸ್ಥಿತರಿದ್ದರು. ಎಂ.ಎ. ಗಫೂರ್ ಕಾರ್ಯಕ್ರಮ ನಿರ್ವಹಿಸಿ, ನವೀನಚಂದ್ರ ಶೆಟ್ಟಿ ವಂದಿಸಿದರು. ಉಡುಪಿ ಊಟಕ್ಕೆ ಶಹಬ್ಟಾಸ್!
ಉಡುಪಿ ಊಟ ಎಲ್ಲೆಡೆ ಜನಪ್ರಿಯ. ಜಗತ್ತಿನ ವಿವಿಧೆಡೆ ಇದು ಪ್ರಸಿದ್ಧವಾಗಿದೆ.
ಭಾರತದ ತಂತ್ರಜ್ಞಾನಕ್ಕೆ ಅಮೆರಿಕದವರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ನಮ್ಮ ಯುವಶಕ್ತಿ.
ರಾಹುಲ್ ಗಾಂಧಿ ಕರಾವಳಿ ಪ್ರಯೋಗ ಶಾಲೆ
ನರೇಂದ್ರ ಮೋದಿಯವರು ನೋಟು ಅಮಾನ್ಯ ಮಾಡಿದ್ದ ರಿಂದ ಕಪ್ಪು ಹಣ ಇದ್ದವ ರಲ್ಲ, ಸಾಮಾನ್ಯ ಜನರು ನಿದ್ದೆ ಗೆಡ ಬೇಕಾ ಯಿತು. ಆರೆಸ್ಸೆಸ್, ಬಜರಂಗ ದಳ, ವಿಶ್ವ ಹಿಂದೂ ಪರಿಷದ್ ಸಂಘಟನೆ ಗಳು ಕರಾವಳಿ ಯನ್ನು ಪ್ರಯೋಗ ಶಾಲೆ ಯನ್ನಾಗಿ ಮಾಡಿ ಕೊಂಡಿವೆ. ಬಿಜೆಪಿ ಕುಟಿಲತನ ಅರ್ಥ ಮಾಡಿ ಕೊಂಡು ಸಾಮರಸ್ಯದ ಕಡೆಗೆ ಮುನ್ನಡೆಯ ಬೇಕು. ಜಾತ್ಯತೀತ ಸರಕಾರ ಸ್ಥಾಪನೆಗೆ ಪ್ರೋತ್ಸಾಹಿಸ ಬೇಕು ಎಂದು ಸಿದ್ದರಾಮಯ್ಯ ಹೇಳಿದರು.