Advertisement

ಮಲೆ ಮಾದೇಶ್ವರ ಬೆಟ್ಟಕ್ಕೆ ಪಾದಯಾತ್ರೆ

06:36 AM Jan 20, 2019 | Team Udayavani |

ಕೆಂಗೇರಿ: ಶ್ರೀ ಮಲೆ ಮಾದೇಶ್ವರ ಸ್ವಾಮಿ ಪಾದಯಾತ್ರಾ ಬಳಗ ಕೈಗೊಂಡಿರುವ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಪಾದಯಾತ್ರೆಯು ಕೆಂಗೇರಿಯ ತುಪ್ಪದ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಶನಿವಾರ ಆರಂಭವಾಯಿತು.

Advertisement

ಕೆಂಗೇರಿಯ ಡಾ.ರಾಜಕುಮಾರ್‌ ವೃತ್ತದ ಬಳಿ ಇರುವ ದೇವಾಲಯದಲ್ಲಿ ತುಪ್ಪದ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದ ಬಿಬಿಎಂಪಿ ಮಾಜಿ ಸದಸ್ಯ ರ.ಆಂಜಿನಪ್ಪ, ಪಾದಯಾತ್ರೆಗೆ ಚಾಲನೆ ನೀಡಿ, ಕೆಂಗೇರಿ ಸುತ್ತಲ ಮಹದೇಶ್ವರ ಸ್ವಾಮಿ ಭಕ್ತರು ಸತತ 19 ವರ್ಷಗಳಿಂದ ಬೆಟ್ಟಕ್ಕೆ ಪಾದಯಾತ್ರೆ ಹೋಗುತ್ತಿದ್ದಾರೆ. ಆರಂಭದಲ್ಲಿ ಬೆರಳೆಣಿಕೆಯಷ್ಟಿದ್ದ ಯಾತ್ರಿಗಳ ಸಂಖ್ಯೆ, ಇಂದು 350 ದಾಟಿದೆ ಎಂದರು.

ಬಿಜೆಪಿ ಹಿಂದುಳಿದ ವರ್ಗಗಳ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜೆ.ರಮೇಶ್‌ ಮಾತನಾಡಿ, ಆರು ದಿನಗಳ ಪಾದಯಾತ್ರೆಗೆ ಹಲವು ದಾನಿಗಳು ನೆರವು ನೀಡಿದ್ದಾರೆ. ಜ.24ರಂದು ಸ್ವಾಮಿಗೆ ಬಂಗಾರದ ರಥೋತ್ಸವ ನೆರವೇರಿಸುವ ಮೂಲಕ ಯಾತ್ರೆ ಕೊನೆಗೊಳ್ಳಲಿದೆ ಎಂದರು.

ಯಾತ್ರೆ ಅಂಗವಾಗಿ ಜ.27ರಂದು ಪಾದಯಾತ್ರಾ ಬಳಗದಿಂದ ತುಪ್ಪದ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ “ಮಹದೇಶ್ವರ ಪರ’ ಆಯೋಜಿಸಲಾಗಿದೆ ಎಂದು ಕುವೆಂಪು ಕನ್ನಡ ಯುವಕರ ಸಂಘದ ಅಧ್ಯಕ್ಷ ಎನ್‌.ಗುರುದೇವ್‌ ಹೇಳಿದರು. ಕಾಂಗ್ರೆಸ್‌ ಮುಖಂಡ ರವಿ ರಬ್ಬಣ್ಣ, ಮಹೇಶ್‌ ಬಾಬು ಮತ್ತಿತರರು ಪಾದಯಾತ್ರಿಗಳಿಗೆ ಶುಭ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next