Advertisement

ಮೈಕ್ರೋ ಫೈನಾನ್ಸ್‌ ಸಾಲಮನ್ನಾ ಮಾಡಿ

11:24 PM Feb 25, 2020 | Lakshmi GovindaRaj |

ಬೆಂಗಳೂರು: ಕಿರು ಹಣಕಾಸು ಸಾಲ(ಮೈಕ್ರೋ ಫೈನಾನ್ಸ್‌) ಕಂಪನಿಗಳಿಂದ ಮಹಿಳೆಯರು ಪಡೆದಿರುವ ಸಾಲಮನ್ನಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಋಣಮುಕ್ತ ಹೋರಾಟ ಸಮಿತಿ ವತಿಯಿಂದ ಮಂಗಳವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು.

Advertisement

ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಮಂದಿ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮೈಕ್ರೋಫೈನಾನ್ಸ್‌ ಸಂಸ್ಥೆಗಳ ದುಬಾರಿ ಬಡ್ಡಿ ಹಾಗೂ ಸಾಲದ ಸಂಕಷ್ಟದಿಂದ ಪಾರು ಮಾಡ ಬೇಕು ಎಂದು ಆಗ್ರಹಿಸಿದರು. ಸಾಲ ವಸೂ ಲಾತಿಗೆ ಬರು ವವವರು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ದೇಶದಲ್ಲಿ ಮಹಿಳೆಯರಿಗೆ ದುಡಿಯುವ ಅವಕಾಶ ಗಳು ಕಡಿಮೆಯಾಗಿದ್ದು, ಈ ನಿಟ್ಟಿನಲ್ಲಿ ಮೈಕ್ರೋಫೈನಾನ್ಸ್‌ ಕಂಪನಿಗಳ ಸಾಲವನ್ನು ಋಣ ಮುಕ್ತ ಕಾಯ್ದೆ ಅಡಿ ಯಲ್ಲಿ ತಂದು ಸಾಲಮನ್ನಾ ಮಾಡಬೇಕು. ಸಾಲವಸೂ ಲಾತಿ ಹಿನ್ನೆಲೆಯಲ್ಲಿ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಮೊಕದ್ದಮೆ ದಾಖಲಿಸಿ ನ್ಯಾಯ ದೊರಕಿಸಿ ಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಹಕಾರ ಸಚಿವ ಎಸ್‌.ಟಿ ಸೋಮಶೇಖರ್‌, ಮೈಕ್ರೋ ಫೈನಾನ್ಸ್‌ ಸಾಲ ಗಳ ಕುರಿತು ಮುಖ್ಯಮಂತ್ರಿಗಳು, ಆರ್‌ಬಿಐ ಅಧಿಕಾರಿ ಗಳ ಜತೆ ಮಾರ್ಚ್‌ ಮೊದಲ ವಾರದಲ್ಲಿ ಸಭೆ ನಡೆಸ ಲಾಗುವುದು. ಜತೆಗೆ, ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವ ಕಂಪನಿಗಳ ಪ್ರತಿನಿಧಿಗಳ ವಿರುದ್ಧ ಕ್ರಮ ಜರುಗಿಸುವಂತೆ ಗೃಹ ಇಲಾಖೆಗೆ ಪತ್ರ ಬರೆಯಲಾಗು ವುದು ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next