Advertisement

ಎನ್‌ಡಿಟಿಎಲ್‌ ಅಮಾನತು: ಮತ್ತೆ ಆರು ತಿಂಗಳಿಗೆ ವಿಸ್ತರಿಸಿದ ವಾಡಾ

10:07 AM Jul 23, 2020 | mahesh |

ಹೊಸದಿಲ್ಲಿ: ದೇಶದ ರಾಷ್ಟ್ರೀಯ ಉದ್ದೀಪನ ಪರೀಕ್ಷಾ ಪ್ರಯೋಗಾಲಯ (ಎನ್‌ಡಿಟಿಎಲ್‌) ಅಮಾನತು ಮತ್ತೆ ಮುಂದಿನ 6 ತಿಂಗಳವರೆಗೆ ವಿಸ್ತರಿಸಿ ವಿಶ್ವ ಉದ್ದೀಪನ ನಿಗ್ರಹ ಸಂಸ್ಥೆ (ವಾಡಾ) ಆದೇಶ ಹೊರಡಿಸಿದೆ.

Advertisement

ಅಂತಾರಾಷ್ಟ್ರೀಯ ಪ್ರಯೋಗಾಲಯ ಮಟ್ಟದಲ್ಲಿ ಎನ್‌ಡಿಟಿಎಲ್‌ನಲ್ಲಿ ಪರೀಕ್ಷೆ ನಡೆಯುತ್ತಿಲ್ಲ ಎಂಬ ಕಾರಣಕ್ಕೆ ಆ್ಯತ್ಲೀಟ್‌ಗಳ ಸ್ಯಾಂಪಲ್‌ ಪರೀಕ್ಷೆ ಮಾನ್ಯತೆಯನ್ನು ಕಳೆದ ಆಗಸ್ಟ್‌ನಲ್ಲಿಯೇ ವಾಡಾ ಹಿಂದಕ್ಕೆ ಪಡೆದಿತ್ತು. ಮುಂದಿನ ವರ್ಷ ಒಲಿಂಪಿಕ್ಸ್‌ ಇರುವುದರಿಂದ ಮತ್ತೆ 6 ತಿಂಗಳ ಅಮಾನತು ಮುಂದುವರಿಸಿರುವುದು ಭಾರತೀಯ ಆ್ಯತ್ಲೀಟ್‌ಗಳನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ. ವಾಡಾ ಹೇರಿರುವ ನಿಷೇಧವನ್ನು ಎನ್‌ಡಿ ಟಿಎಲ್‌ಗೆ ಅಂತಾರಾಷ್ಟ್ರೀಯ ಕ್ರೀಡಾ ನ್ಯಾಯಾಲಯ ದಲ್ಲಿ ಪ್ರಶ್ನಿಸಲು 21 ದಿನಗಳ ಕಾಲಾವಕಾಶವಿದೆ.

ಇತ್ತೀಚೆಗೆ ಹೊಸದಿಲ್ಲಿಯ ಎನ್‌ಡಿಟಿಎಲ್‌ಗೆ ವಾಡಾ ತಜ್ಞರ ತಂಡವು ಆಗಮಿಸಿತ್ತು. ಈ ವೇಳೆ ವಾಡಾ ಹೇಳಿರುವ ಬದಲಾವಣೆಗಳು ಎನ್‌ಡಿಟಿಎಲ್‌ನಲ್ಲಿ ಕಾಣಿಸಿರಲಿಲ್ಲ. ಅಂತಾರಾಷ್ಟ್ರೀಯ ದರ್ಜೆಯ ಲ್ಯಾಬೊರೇಟರಿ (ಐಎಸ್‌ಎಲ್‌) ಮಟ್ಟದಲ್ಲಿ ಎನ್‌ಡಿಟಿಎಲ್‌ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ವಾಡಾ ವರದಿ ನೀಡಿತ್ತು.

2021 ಜನವರಿ ತನಕ ಎನ್‌ಡಿಟಿಎಲ್‌ ಆ್ಯತ್ಲೀಟ್‌ಗಳ ರಕ್ತ, ಮೂತ್ರದ ಮಾದರಿ ಸೇರಿದಂತೆ ಯಾವುದೇ ಉದ್ದೀಪನ ಪರೀಕ್ಷೆ ನಡೆಸುವಂತಿಲ್ಲ. ಇದನ್ನೆಲ್ಲ ದೋಹಾದಲ್ಲಿರುವ ಲ್ಯಾಬ್‌ಗ ಕಳಿಸಲಾಗುತ್ತಿದೆ. ಅಲ್ಲಿಂದ ವರದಿ ಬರುವುದಕ್ಕೆ ಸಾಕಷ್ಟು ಸಮಯ ಬೇಕಾಗಿರುವುದರಿಂದ ಕ್ರೀಡಾಪಟುಗಳಿಗೆ ತೀವ್ರ ಸಮಸ್ಯೆಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next