ಒಕ್ಕಲಿಗರ ಪರಿಷತ್ ಯುನೈಟೆಡ್ ಕಿಂಗ್ಡಮ್ ಸಂಸ್ಥೆ (ವಿಪಿಯುಕೆ)ಯ 2021ರ ಮೊದಲ ತ್ತೈಮಾಸಿಕ ಸುದ್ದಿ ಸಂಚಿಕೆಯನ್ನು ಅನಾವರಣ ಗೊಳಿಸಿದೆ.
ಬ್ರಿಟನ್ ಗೃಹ ಸಾಲ ಕಾರ್ಯಾಗಾರ :
ಸ್ವಂತ ಮನೆ ಕಟ್ಟಿಸಿಕೊಳ್ಳೋ ಆಸೆ ಎಲ್ಲರಿಗೂ ಇರುತ್ತದೆ. ಯುನೈಟೆಡ್ ಕಿಂಗ್ಡಮ್‌ನಲ್ಲಿ ದಿನದಿಂದ ದಿನಕ್ಕೆ ಭಾರತೀಯರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಅವರಲ್ಲಿ ಸ್ವಂತ ಮನೆ ಕೊಳ್ಳುವ ಮತ್ತು ಈಗಾಗಲೇ ಸ್ವಂತ ಇರುವವರೂ ಹೂಡಿಕೆಗಾಗಿ ಮತ್ತೂಂದು ಮನೆ ಕೊಳ್ಳುವ ಆಸೆ ಹೊಂದಿರುತ್ತಾರೆ. ಕೇವಲ ಆಸೆ ಇದ್ದರೆ ಸಾಲದು ಹಣವೂ ಬೇಕಾಗುತ್ತದೆ. ಇದಕ್ಕಾಗಿ ಸಾಲ ಸೌಲಭ್ಯಗಳಿದ್ದರೂ ಯುಕೆಯ ಕಾನೂನು, ಬ್ಯಾಂಕ್‌ಗಳ ಮಾಹಿತಿ ಕೊರತೆಯಿಂದ ಸಾಲ ಪಡೆಯಲು ಹೆಚ್ಚಿನ ಅನಿವಾಸಿ ಭಾರತೀಯರು ಹಿಂಜರಿಯುತ್ತಾರೆ. ಇಲ್ಲಿ ಸಾಲ ಪಡೆಯಲು ಅನೇಕ ನಿಯಮ, ಷರತ್ತುಗಳು ಅನ್ವಯವಾಗುತ್ತವೆ. ಅರ್ಜಿಯಲ್ಲಿ ತಪ್ಪು ಮಾಹಿತಿ ನಮೂದಾಗಿದ್ದರೆ ಅಥವಾ ಸರಿಯಾಗಿ ಭರ್ತಿ ಮಾಡಲಾಗದಿದ್ದರೆ ಅರ್ಜಿ ತಿರಸ್ಕೃತಗೊಳ್ಳುತ್ತದೆ. ಈ ಸಂದರ್ಭವನ್ನು ಅವಲೋಕಿಸಿ ವಿಪಿಯುಕೆಯು ಜನರಿಗೆ ಅನುಕೂಲವಾಗಲೆಂದು ಮಾ. 14 ಮತ್ತು ಮಾ. 28ರಂದು ಗೃಹ ಸಾಲ ಮಾಹಿತಿ ಕಾರ್ಯಾಗಾರವನ್ನು ಜೂಮ್ ಮೂಲಕ ಇತ್ತೀಚೆಗೆ ಹಮ್ಮಿಕೊಂಡಿತು. ಕಾರ್ಯಾಗಾರದಲ್ಲಿ ಸಾಲ ಪಾವತಿ ಸಾಮರ್ಥ್ಯ, ಬ್ಯಾಂಕ್‌ಗಳು, ಬಡ್ಡಿ ದರ, ಸಾಲ ಒಪ್ಪಂದದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ವಿಪಿಯುಕೆ ಕಾರ್ಯಕಾರಿ ಸಮಿತಿ ಸದಸ್ಯರು ಧನ್ಯವಾದ ಸಲ್ಲಿಸಿ, ಸುದ್ದಿ ಸಂಚಿಕೆಯಲ್ಲಿ ವಿಪಿಯುಕೆಯ ಉದ್ದೇಶಗಳು, ಈವರೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮ, ಚಿತ್ರಪಟ ಸಹಿತ ವಿವಿಧ ವಿಷಯಗಳಿವೆ. ಈ ಸಂಚಿಕೆಯ ಪ್ರತಿಯನ್ನು ಪಡೆಯಲಿಚ್ಛಿಸುವವರು namma vpukgmail.com ಗೆ ಅಥವಾ www.facebook.com/nammavpuk ಗೆ ಮೆಸೇಜ್ ಕಳಿಸಬಹುದು ಎಂದು ತಿಳಿಸಿದರು.