Advertisement

ಸರಕಾರ ರಚನೆಯ ಶಪಥ: 6 ವರ್ಷದ ಬಳಿಕ ಪಾದರಕ್ಷೆ ಧರಿಸಿದ ಬಿಜೆಪಿ ನಾಯಕ

12:24 AM Dec 24, 2023 | Team Udayavani |

ಭೋಪಾಲ್‌: ಮಧ್ಯಪ್ರದೇಶದಲ್ಲಿ ನಿಚ್ಚಳ ಬಹುಮತದೊಂದಿಗೆ ಬಿಜೆಪಿ ಸರಕಾರ ರಚನೆ ಆಗುವವರೆಗೂ ಪಾದರಕ್ಷೆ ಧರಿಸು ವುದಿಲ್ಲವೆಂದು ಶಪಥಗೈದಿದ್ದ ಬಿಜೆಪಿ ನಾಯಕರೊಬ್ಬರು 6 ವರ್ಷಗಳ ಬಳಿಕ ಈಗ ಮತ್ತೆ ಪಾದರಕ್ಷೆ ಧರಿಸಿದ್ದಾರೆ. ಬಿಜೆಪಿ ಅನುಪ್ಪುರ್‌ ಜಿಲ್ಲಾ ಘಟಕದ ಮುಖ್ಯಸ್ಥ ರಾಮದಾಸ್‌ ಪುರಿ 2017ರಲ್ಲಿ ಬಿಜೆಪಿ ಗೆಲುವಿನ ಬಳಿಕವೇ ಪಾದರಕ್ಷೆ ಧರಿಸುತ್ತೇ ನೆಂದು ಶಪಥ ಮಾಡಿದ್ದರು. ಆದರೆ 2018ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಗೆಲ್ಲಲಿಲ್ಲ.

Advertisement

2020ರಲ್ಲಿ ಕಮಲ್‌ನಾಥ್‌ ಸರಕಾರ ಪತನವಾದ ಮೇಲೆ ಬಿಜೆಪಿ ಅಧಿಕಾರಕ್ಕೆ ಬಂದಿತಾದರೂ, ಪುರಿ ಆ ಸಂದರ್ಭದಲ್ಲಿ ಪಾದರಕ್ಷೆ ಧರಿಸಲಿಲ್ಲ. ಪೂರ್ಣ ಬಹುಮತದ ಸರಕಾರ ರಚನೆಗೆ ಕಾದು ಬರಿಗಾಲಿನಲ್ಲೇ ಓಡಾಡಿದ್ದರು. ಈ ಬಾರಿ ಮಧ್ಯ ಪ್ರದೇಶದಲ್ಲಿ ಬಿಜೆಪಿ ಸರಕಾರ ರಚಿಸಿದ ಹಿನ್ನೆಲೆಯಲ್ಲಿ ಶನಿವಾರ ಮಾಜಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಸಮ್ಮುಖದಲ್ಲಿ ರಾಮ್‌ದಾಸ್‌ ಪುರಿ ಮತ್ತೆ ಪಾದರಕ್ಷೆ ಧರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next