Advertisement
ರಾಜ್ಯ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಅಧಿಕಾರಿಗಳು ಲಂಚ ಕೊಡಬೇಕು ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವ ಸ್ಥಿತಿ ರಾಜ್ಯದಲ್ಲಿ ಸೃಷ್ಟಿಯಾಗಿದೆ. ಯಾದಗಿರಿ ಪಿಎಸ್ಐ ಪರಶುರಾಮ್ ಸಾವು, ಶಿವಮೊಗ್ಗದಲ್ಲಿ ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ, ಇದೀಗ ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಎಸ್ಡಿಎ ರುದ್ರಣ್ಣ ನೇಣಿಗೆ ಶರಣು. ಈ ಪ್ರಕರಣಗಳು ರಾಜ್ಯ ಸರಕಾರಕ್ಕೆ ಮಾನವೀಯತೆ ಇಲ್ಲ ಎಂಬುದರ ಸಾಕ್ಷಿ ಎಂದರು.
ಅಬಕಾರಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. 1992ರಲ್ಲಿ ರೌಡಿಗಳು ಬೆಂಗಳೂರಿನಲ್ಲಿ ಹಫ್ತಾ ವಸೂಲಿ ಮಾಡುತ್ತಿದ್ದರು. ಅವರೆಲ್ಲ ನಾಚಿ ನೀರಾಗುವಂತೆ ಸಚಿವ ತಿಮ್ಮಾಪುರ ಅವರು ವಾರಕ್ಕೆ 18 ಕೋಟಿ ಎಂದರೆ ವರ್ಷಕ್ಕೆ 500 ರಿಂದ 900 ಕೋಟಿ ತಿಮ್ಮಾಪುರ ತೆರಿಗೆ’ ವಿಧಿಸುತ್ತಿದ್ದಾರೆ. ಲೂಟಿ ಮಾಡುವ ಸಚಿವರು ಮುಖ್ಯಮಂತ್ರಿಗಳ ಬಲಗೈ ಆಗಿದ್ದಾರೆ. ಸಿಎಂ ಕಚೇರಿಯೂ ಇದರಲ್ಲಿ ಭಾಗಿದಾರ.
Related Articles
Advertisement
ರಾಜ್ಯ ಬಿಜೆಪಿ ಸಹ-ಉಸ್ತುವಾರಿ ಸುಧಾಕರ್ ರೆಡ್ಡಿ, ಶಾಸಕ ಉದಯ್ ಗರುಡಾಚಾರ್, ಬಿಜೆಪಿ ರಾಜ್ಯ ವಕ್ತಾರರಾದ ಡಾ. ನರೇಂದ್ರ ರಂಗಪ್ಪ, ಪ್ರಕಾಶ್ ಶೇಷರಾಘವಾಚಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
“ವಿಧಾನಸೌಧದ ಮುಂದಿರುವ ಸರ್ಕಾರಿ ಕೆಲಸ ದೇವರ ಕೆಲಸ ಎಂಬ ಫಲಕವನ್ನು ಕಾಂಗ್ರೆಸ್ ಸರಕಾರವು ಸರಕಾರಿ ಕೆಲಸ ಜೇಬು ತುಂಬುವ ಕೆಲಸ’ ಎಂದು ಬದಲಿಸಿದಂತಿದೆ. ದೀಪಾವಳಿಯಲ್ಲಿ ಜನರು ಸರ ಪಟಾಕಿ ಹಚ್ಚಿದರೆ, ಇವರು ಭ್ರಷ್ಟಾಚಾರದ ಸರಮಾಲೆಯನ್ನೇ ಹಚ್ಚಿದ್ದಾರೆ.”– ಆರ್. ಅಶೋಕ್, ವಿಪಕ್ಷ ನಾಯಕ