Advertisement
ಜೆಡಿಎಸ್ ಗೆ ಚೆಕ್ ಮೇಟ್ ಕೊಡುವುದಕ್ಕಾಗಿಯೇ ಕಾಂಗ್ರೆಸ್ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಅಲಿಖಾನ್ ಅವರನ್ನು ಕಣಕ್ಕೆ ಇಳಿಸಿದೆ. ಎಷ್ಟೇ ಒತ್ತಡ ಬಂದರೂ ನಾಮಪತ್ರ ವಾಪಾಸ್ ತೆಗೆಯದೇ ಇರುವ ಮೂಲಕ ಜೆಡಿಎಸ್ ಗೆ ದೊಡ್ಡ ಪಾಠ ಕಲಿಸಲು ಕಾಂಗ್ರೆಸ್ ಮುಂದಾಗಿದೆ. ಎರಡನೇ ಅಭ್ಯರ್ಥಿಗೆ ಸೋಲು ಪಕ್ಕಾ ಎಂಬುದು ಗೊತ್ತಿದ್ದರೂ ಜೆಡಿಎಸ್ ಸೋಲಿಸಬೇಕೆಂಬುದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹಠವಾಗಿದ್ದು, ಜೂನ್ 10 ರಂದು ಎಲ್ಲ ಕಾಂಗ್ರೆಸ್ ಶಾಸಕರು ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೇ ಮತ ಹಾಕಬೇಕೆಂದು ವಿಪ್ ಜಾರಿಗೊಳಿಸಿದೆ.
ಕಾಂಗ್ರೆಸ್ ನ ಈ ನಡೆಯನ್ನು ಜೆಡಿಎಸ್ ಬಲವಾಗಿ ಟೀಕಿಸಿದೆ. ಲೆಹರ್ ಸಿಂಗ್ ಅವರನ್ನು ಗೆಲ್ಲಿಸಲು ಸಿದ್ದರಾಮಯ್ಯ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಟೀಕಿಸಿದ್ದಾರೆ.
Related Articles
Advertisement
ಪ್ರತಿ ಒಂದು ಸ್ಥಾನಕ್ಕೆ 45 ಮತ ಬೇಕು. ನಾಲ್ಕನೇ ಸ್ಥಾನಕ್ಕೆ ಎರಡನೇ ಪ್ರಶಾಸ್ತ್ಯ ಮತ ಯಾರು ಹೆಚ್ಚು ತೆಗೆದುಕೊಳ್ಳುತ್ತಾರೆ, ಕೂನೆಗೆ ಯಾರು 45 ಸ್ಥಾನ ಗಳಿಸದಿದ್ದರೂ, ಯಾರು ಹೆಚ್ಚು ಮತಗಳನ್ನ ಗಳಿಸುತ್ತಾರೆ ಅವರನ್ನು ನಾಲ್ಕನೇ ಆಯ್ಕೆ ಆಗಿ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.