Advertisement

ಮತದಾನ ಹೆಚ್ಚಳ: ಶ್ರೇಷ್ಠ 10 ಜಿಲ್ಲೆಗಳಲ್ಲಿ ಉಡುಪಿಗೆ ಹೆಸರು

06:40 AM May 17, 2018 | |

ಉಡುಪಿ: ವಿಧಾನಸಭಾ ಚುನಾವಣೆ ನಿಟ್ಟಿನಲ್ಲಿ ಅವಿರತ ದುಡಿದವರಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರಾದ ಜಿ.ಪಂ.ಸಿಇಒ ಶಿವಾನಂದ ಕಾಪಶಿ ಕೂಡ ಒಬ್ಬರು. ಮತದಾನ ಹೆಚ್ಚಳ ಹೆಚ್ಚಿದ ಬಗ್ಗೆ ಸಂಪೂರ್ಣ ತೃಪ್ತಿಯನ್ನು ಅವರು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಉದಯವಾಣಿಯೊಂದಿಗೆ ಮಾತನಾಡಿದ್ದು, ಸಂದರ್ಶನದ ಭಾಗ ಇಂತಿದೆ 

Advertisement

ಸ್ವೀಪ್‌ ಸಮಿತಿ ಅಧ್ಯಕ್ಷರಾಗಿ ಇದೇ ಮೊದಲೇ?  
    ಹೌದು. ನಾನು ಚುನಾವಣೆಯನ್ನು ಬೇರೆ ಬೇರೆ ಹಂತಗಳಲ್ಲಿ ನಿರ್ವಹಿಸಿದ್ದರೂ ಸ್ವೀಪ್‌ ಸಮಿತಿ ಅಧ್ಯಕ್ಷರಾಗಿ ಮೊದಲ ಬಾರಿ ಅನುಭವವಾಗಿದೆ. 

ಹಿಂದಿನ ವಿಧಾನಸಭಾ ಚುನಾವಣೆಗಿಂತ ಈ ಬಾರಿ ಶೇ.2.69 ಮತ ಹೆಚ್ಚಳವಾಗಿದೆ. ಇದಕ್ಕೆ ಏನಂತೀರಿ? 
     ಖಂಡಿತ ತೃಪ್ತಿ ಇದೆ. ಶೇ.2.69 ಅಂದರೆ ಸಾಮಾನ್ಯ ವಿಷಯವಲ್ಲ. ಮತ ಹೆಚ್ಚಳವಾದ ಶ್ರೇಷ್ಠ ಹತ್ತು ಜಿಲ್ಲೆಗಳಲ್ಲಿ ಉಡುಪಿಯೂ ಒಂದು. ಎಲ್ಲಿಯೂ ಶೇ.4ಕ್ಕಿಂತ ಜಾಸ್ತಿಯಾಗಿಲ್ಲ. ಈಗ ಶೇ. 2, ಮುಂದೆ ಮತ್ತೆ ಶೇ. 2 ಹೀಗೆ ಹಂತ ಹಂತಗಳಲ್ಲಿ ವಿಸ್ತಾರಗೊಳ್ಳಬೇಕು. 

ಗುರಿ ಎಷ್ಟು ಇರಿಸಿಕೊಂಡಿದ್ದಿರಿ?
     ನಾವು ಶೇ.10 ಮತ ಹೆಚ್ಚಳವಾಗಬೇಕೆಂದು ಗುರಿ ಇರಿಸಿ ಕೊಂಡಿದ್ದೆ ವಾದರೂ ಇದು ಅವಾಸ್ತವ. ಕೇವಲ ಸ್ಫೂರ್ತಿ ಬರಲಿ ಎಂದು ಈ ಗುರಿ ಇರಿಸಿಕೊಂಡಿದ್ದೆವು. 

ಇನ್ನೇನಾದರೂ ಉಪಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇತ್ತೇ?
     ಇಲ್ಲ. ಯಕ್ಷಗಾನ ಪ್ರದರ್ಶನ – ಹಾಡು, ಆಮಂತ್ರಣ ಪತ್ರಿಕೆ ವಿತರಣೆ, ರಂಗೋಲಿ ಸ್ಪರ್ಧೆ, ವಿಶೇಷ ಚೇತನರಲ್ಲಿ ಜಾಗೃತಿ, ವಿದ್ಯಾರ್ಥಿಗಳು- ಮಹಿಳೆಯರಲ್ಲಿ ಜಾಗೃತಿ ರ್ಯಾಲಿ ಹೀಗೆ ಎಲ್ಲ ಸಾಧ್ಯತೆಗಳನ್ನು ನಾವು ಪ್ರಯೋಗ ಮಾಡಿದೆವು.

Advertisement

ಜನರಿಗೆ ಮತದಾನ ಆಸಕ್ತಿ ಕುರಿತು ನಿಮ್ಮ ಅಭಿಪ್ರಾಯವೇನು? 
      ಸಾಮಾನ್ಯ ಎಲ್ಲರೂ ಬಂದು ಮತದಾನ ಮಾಡಿದ್ದಾರೆ. ಪರ  ಊರಿನಲ್ಲಿರುವವರಿಗೆ ಬರಲು ಅನುಕೂಲವಾಗಿಲ್ಲ. ಬೆಂಗಳೂರಿ ನಿಂದ ಇಲ್ಲಿಗೆ ಬರುವ ಸಂದರ್ಭ ಖಾಸಗಿ ಬಸ್‌ನವರು ದರ ಹೆಚ್ಚಳ ಮಾಡಿದ್ದು, ಅಕಾಲಿಕವಾಗಿ ಮಳೆ ಬಂದದ್ದು ಇದಕ್ಕೆ  ಉದಾಹರಣೆ. ಅಳಿಯ ಸಂತಾನ ಸಂಸ್ಕೃತಿ ಕಾರಣ ಹೆಣ್ಣು ಮಕ್ಕಳು ಮದುವೆಯಾಗಿ ಹೋದರೂ ಭಾವನಾತ್ಮಕವಾಗಿ ಮತದಾರರ ಪಟ್ಟಿಯಿಂದ ತೆಗೆದಿರುವು ದಿಲ್ಲ. ಪಟ್ಟಿಯಿಂದ ತೆಗೆದರೆ ಅವರಿಗೆ ಏನೋ ಕಳೆದುಕೊಂಡ ಅನುಭವ ವಾಗುವುದೇ ಇದಕ್ಕೆ ಕಾರಣ. ಕೆಲವರು ಹೊರದೇಶದಲ್ಲಿದ್ದಾರೆ. ಅವರನ್ನೆಲ್ಲ ಕರೆತರುವುದು ಕಷ್ಟಸಾಧ್ಯ.  

ಬೇರೆ ಕ್ರಮಗಳ ಅಗತ್ಯವೇನಿದೆ? 
       ಒಂದು ಕಡೆಯಿಂದ ಮತದಾರರ ಪಟ್ಟಿ ಪಕ್ಕಾ ಆಗಬೇಕು. ಇನ್ನೊಂದು ಕಡೆಯಿಂದ ಮತದಾರರಲ್ಲಿ ಜಾಗೃತಿಯಾಗಬೇಕು.  

Advertisement

Udayavani is now on Telegram. Click here to join our channel and stay updated with the latest news.

Next