ಗಾಂಧಿನಗರ : ಗುಜರಾತ್‌ನ ಎರಡು ರಾಜ್ಯಸಭಾ ಸೀಟುಗಳ ಉಪಚುನಾವಣೆಗೆ ಇಂದು ಶುಕ್ರವಾರ ಬೆಳಗ್ಗೆ 9 ಗಂಟೆಗೆ ಗಾಂಧೀನಗರದಲ್ಲಿನ ರಾಜ್ಯ ವಿಧಾನಸಭಾ ಸಂಕೀರ್ಣದಲ್ಲಿ ಮತದಾನ ಆರಂಭಗೊಂಡಿದೆ. ಸಂಜೆ 4ರ ವರೆಗೆ ಮತದಾನ ನಡೆಯಲಿದೆ.
ಬಿಜೆಪಿ ತನ್ನ ವಿದೇಶ ವ್ಯವಹಾರ ಸಚಿವ ಎಸ್ ಜೈಶಂಕರ್ ಅವರನ್ನು ಮತ್ತು ಒಬಿಸಿ ನಾಯಕ ಜುಗಲಾಜಿ ಠಾಕೋರ್ ಅವರನ್ನು ಕಣಕ್ಕೆ ಇಳಿಸಿದೆ.
ಕಾಂಗ್ರೆಸ್ ಅಭ್ಯರ್ಥಿಗಳಾಗಿ ಚಂದ್ರಿಕಾ ಚುಡಾಸಮಾ ಮತ್ತು ಗೌರವ್ ಪಾಂಡ್ಯ ಕಣದಲ್ಲಿದ್ದಾರೆ.
ಗುಜರಾತ್‌ನ ಈ ಎರಡು ರಾಜ್ಯಸಭಾ ಸ್ಥಾನಗಳಿಗೆ ಪ್ರತ್ಯೇಕವಾಗಿ ಚುನಾವಣೆ ನಡೆಯುತ್ತಿದ್ದು ಅಭ್ಯರ್ಥಿಗಳು ವಿಜಯಿಗಳಾಗಲು ಶೇ.50 ಮತ ಪಡೆಯಬೇಕಿದೆ. ಈಗಿನ ಸನ್ನಿವೇಶದದಲ್ಲಿ ಪ್ರತಿಯೋರ್ವ ಅಭ್ಯರ್ಥಿ ಗೆಲ್ಲಲು 88 ಮತಗಳನ್ನು ಪಡೆಯಬೇಕಾಗಿದೆ.
ಇಂದು ಬೆಳಗ್ಗೆ ಮತ ಚಲಾಯಿಸಿರುವವರಲ್ಲಿ ರಾಜ್ಯ ಸಚಿವರಾದ ಸೌರಭ್ ಪಟೇಲ್, ಪ್ರದೀಪ್ ಸಿಂಗ್ ಜಡೇಜ ಮತ್ತು ಬಿಜೆಪಿ ಶಾಸಕ ಅರುಣ್ ಸಿಂಗ್‌ರಾಣಾ ಮುಖ್ಯರಾಗಿದ್ದಾರೆ.