Advertisement

ಮತದಾನ ಜಾಗೃತಿಗಾಗಿ ಪತ್ರ ಅಭಿಯಾನ: ಸ್ವೀಪ್‌ ನಿಂದ 30,000 ಪೋಸ್ಟ್‌ ಕಾರ್ಡ್‌ ಖರೀದಿ

05:20 PM Apr 12, 2023 | Team Udayavani |

ಮಂಗಳೂರು: ಮತದಾರರಿಗೆ ಮತದಾನದ ಅರಿವು ಮೂಡಿಸಿ ಮತಗಟ್ಟೆಗೆ ಕರೆತರುವ ನಿಟ್ಟಿನಲ್ಲಿ ದ.ಕ. ಜಿಲ್ಲಾ ಸ್ವೀಪ್‌ ಸಮಿತಿಯಿಂದ ಹಮ್ಮಿಕೊಳ್ಳಲಾಗಿರುವ “ಪತ್ರ ಅಭಿಯಾನ’ಕ್ಕಾಗಿ ಪೋಸ್ಟ್‌ ಕಾರ್ಡ್‌ಗಳನ್ನು ಬಳಕೆ ಮಾಡಲಾಗುತ್ತಿದ್ದು, ಈಗಾಗಲೇ ಅಂಚೆ ಇಲಾಖೆಯಿಂದ 30,000 ಪೋಸ್ಟ್‌ ಕಾರ್ಡ್‌ಗಳನ್ನು ಖರೀದಿಸಲಾಗಿದೆ.

Advertisement

ಪತ್ರ ಅಭಿಯಾನದ ಮೂಲಕ ಜಿಲ್ಲೆಯ ಹಾಸ್ಟೆಲ್‌ಗ‌ಳಲ್ಲಿರುವ ವಿದ್ಯಾರ್ಥಿಗಳು ಹೊರ ಜಿಲ್ಲೆ, ರಾಜ್ಯ ಅಥವಾ ವಿದೇಶದಲ್ಲಿರುವ ಜಿಲ್ಲೆಯ ತಮ್ಮ ಕುಟುಂಬಿಕರು, ಪೋಷಕರು, ಸ್ನೇಹಿತರಿಗೆ ಮತದಾನಕ್ಕೆ ಆಹ್ವಾನಿಸಲಿದ್ದಾರೆ. ಈ ಪತ್ರ ಅಭಿಯಾನವು ಶಾಲಾ ಕಾಲೇಜು, ಮೆಡಿಕಲ್‌, ಪ್ಯಾರಾ ಮೆಡಿಕಲ್‌, ಎಂಜಿನಿಯರಿಂಗ್‌, ನರ್ಸಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳಿಂದ ನಡೆಸಲಾಗುತ್ತದೆ. ಈ ಬಗ್ಗೆ ಈಗಾಗಲೇ ಸ್ವೀಪ್‌ ಸಮಿತಿಯಿಂದ ಸಭೆ ನಡೆಸಿ ಸೂಚನೆಯನ್ನು ಕೂಡ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಉಚಿತವಾಗಿ ಪೋಸ್ಟ್‌ ಕಾರ್ಡ್‌ಗಳನ್ನು ನೀಡಿ ಅದರಲ್ಲಿ ಮತದಾನಕ್ಕೆ ಆಹ್ವಾನಿಸುವ ಬರಹಗಳೊಂದಿಗೆ ಸಬಂಧಪಟ್ಟವರಿಗೆ ಪೋಸ್ಟ್‌ ಮಾಡಲು ಸೂಚಿಸುವ ನಿಟ್ಟಿನಲ್ಲಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ
ಬರೆದ ಪತ್ರದ ಛಾಯಾಚಿತ್ರವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡು ಮತದಾನಕ್ಕೆ ಪ್ರೇರಣೆಯ ಪ್ರಚಾರ ಮಾಡುವಂತೆ ಹಾಗೂ ಯಾವುದೇ ಪಕ್ಷಕ್ಕೆ ಮತ ನೀಡುವಂತೆ ಸೂಚಿಸದಂತೆ ಗಮನ ಹರಿಸಬೇಕು. ಈ ಬಗ್ಗೆ ನೋಡಲ್‌ ಅಧಿಕಾರಿಗಳು ನಿಗಾ ವಹಿಸುವಂತೆಯೂ ನಿರ್ದೇಶಿಸಲಾಗಿದೆ.

ಎನ್‌ಆರ್‌ಐಗಳಿಗೂ ಪತ್ರ
ಜಿಲ್ಲೆಯಲ್ಲಿ ಮತದಾರರ ಪಟ್ಟಿಯಲ್ಲಿರುವ 255 ಮಂದಿ ಎನ್‌ಆರ್‌ಐಗಳಿಗೆ ಪತ್ರ ಮೂಲಕ ಮತದಾನಕ್ಕೆ ಆಗಮಿಸಲು ಆಹ್ವಾನಿಸುವಂತೆಯೂ ಸೋಮವಾರ ಪಾಲಿಕೆಯ ಸಭಾಂ ಗಣ ದಲ್ಲಿ ನಡೆದ ಸಭೆಯಲ್ಲಿ ಸ್ವೀಪ್‌ ಸಮಿತಿಯ ಜಿಲ್ಲಾ ನೋಡಲ್‌ ಅಧಿಕಾರಿ ಡಾ| ಕುಮಾರ್‌ ನಿರ್ದೇಶಿಸಿದ್ದಾರೆ.

ದ.ಕ. ಜಿಲ್ಲಾ ಸ್ವೀಪ್‌ ಸಮಿತಿಯು ಪತ್ರ ಅಭಿಯಾನಕ್ಕಾಗಿ ಅಂಚೆ ಇಲಾಖೆ ಯಿಂದ 30,000 ಪೋಸ್ಟ್‌ ಕಾರ್ಡ್‌ ಗಳನ್ನು ಖರೀದಿಸಿದೆ.
– ಶ್ರೀಹರ್ಷ, ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ

Advertisement

-  ಸತ್ಯಾ ಕೆ.

Advertisement

Udayavani is now on Telegram. Click here to join our channel and stay updated with the latest news.

Next