Advertisement
ಮೇಷ: ಕಾರ್ಯನಿರ್ವಹಣೆಯಲ್ಲಿ ಸ್ಥೈರ್ಯಕ್ಕೆ ಅಗ್ರಸ್ಥಾನ. ಉದ್ಯಮಿಗಳಿಗೆ ಸದ್ಯ ಪರಿಸ್ಥಿತಿ ನಿರಾಳ. ದೂರ ದೇಶದಲ್ಲಿರುವ ಬಂಧುಗಳಿಂದ ಶುಭ ಸಮಾಚಾರ. ಮಹಿಳಾ ಉದ್ಯಮಿಗಳಿಗೆ ಯಶಸ್ಸು. ಗೃಹೋದ್ಯಮದ ಉತ್ಪನ್ನಗಳಿಗೆ ಅಧಿಕ ಬೇಡಿಕೆ.
Related Articles
Advertisement
ಸಿಂಹ: ಒಂದರ ಮೇಲೊಂದು ವ್ಯವಹಾರದ ಹೊಣೆಗಾರಿಕೆ. ಉದ್ಯೋಗಸ್ಥರಿಗೆ ಘಟಕದ ನೇತೃತ್ವ. ಸಮವಸ್ತ್ರ ಒದಗಿಸುವ ವ್ಯಾಪಾರಿಗಳ ವ್ಯವಹಾರ ಸುಧಾರಣೆ. ಹಿರಿಯರ ಮನೆಯಲ್ಲಿ ದೇವತಾ ಕಾರ್ಯ. ಕುಟುಂಬದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ.
ಕನ್ಯಾ: ಹೊಸ ಕಾರ್ಯಕ್ಷೇತ್ರಕ್ಕೆ ಒಗ್ಗಿಕೊಂಡ ಸಮಾಧಾನ. ಕಾರ್ಯನಿಷ್ಠೆಗೆ ಮಾಲಕರಿಂದ ಶ್ಲಾಘನೆ. ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ. ಕುಶಲಕರ್ಮಿಗಳಿಗೆ ಉದ್ಯೋಗಕ್ಕೆ ಕರೆ. ತಿಂಡಿ, ಪಾನೀಯ ವ್ಯಾಪಾರಿಗಳಿಗೆ ಲಾಭ.
ತುಲಾ: ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ. ಉದ್ಯಮಿಗಳಿಗೆ ಗುಣಮಟ್ಟ ಕಾಯ್ದುಕೊಳ್ಳುವ ಸವಾಲು. ಕಲಿಕೆಯಲ್ಲಿ ಲೋಪವಿರುವ ಮಕ್ಕಳಿಗೆ ಬೋಧನೆ. ಲೇವಾದೇವಿ ವ್ಯವಹಾರದಿಂದ ದೂರವಿರಿ. ನ್ಯಾಯಾಲಯ ವ್ಯವಹಾರ ರಾಜಿಯಲ್ಲಿ ಮುಕ್ತಾಯ.
ವೃಶ್ಚಿಕ: ಸದ್ಯದ ಪರಿಸ್ಥಿತಿ ಎಲ್ಲ ರೀತಿಯಲ್ಲೂ ಉತ್ತಮ. ಉದ್ಯೋಗಸ್ಥರ ಸ್ಥಾನ ಗೌರವಕ್ಕೆ ಹಾನಿಯಿಲ್ಲ. ಸರಕಾರಿ ಅಧಿಕಾರಿಗಳಿಗೆ ವರ್ಗಾವಣೆಯ ಆತಂಕ. ರಾಜಕಾರಣಿಗಳಿಗೆ ಇಕ್ಕಟ್ಟಿನ ಪರಿಸ್ಥಿತಿ. ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ.
ಧನು: ಉದ್ಯೋಗಸ್ಥರಿಗೆ ಘಟಕದ ಕಾರ್ಯ ನಿರ್ವಹಣೆಯನ್ನು ಉತ್ತಮಗೊಳಿಸುವ ಹೊಣೆಗಾರಿಕೆ. ಉದ್ಯಮದ ವೈವಿಧ್ಯೀಕರಣ ಕಾರ್ಯ ಅಂತಿಮ ಹಂತಕ್ಕೆ. ಹಿರಿಯ ನಾಗರಿಕರಿಗೆ ಸರಕಾರಿ ನೆರವು ದೊರಕಿಸಲು ಸಹಾಯ. ವ್ಯವಹಾರದ ನಿಮಿತ್ತ ಹತ್ತಿರದ ಊರಿಗೆ ಪ್ರಯಾಣ.
ಮಕರ: ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು. ಬಂಧುವರ್ಗದಲ್ಲಿ ಶುಭ ಸಮಾರಂಭ. ಉದ್ಯಮಿಗಳು ಹಠಾತ್ ನಷ್ಟದಿಂದ ಪಾರು. ಗೃಹೋಪಯೋಗಿ ಸಾಧನಗಳ ಖರೀದಿಗೆ ಧನವ್ಯಯ. ಹಿರಿಯರ ಆರೋಗ್ಯ ಸುಧಾರಣೆ.
ಕುಂಭ: ನಿಲ್ಲದೆ ಸಾಗುವ ಹಲವು ಬಗೆಯ ಕೆಲಸ, ಕಾರ್ಯಗಳು. ಉದ್ಯೋಗಸ್ಥರಿಗೆ ಯಥಾರೀತಿಯ ಅನುಭವ. ಸರಕಾರಿ ನೌಕರರಿಗೆ ಕಿರಿಕಿರಿ. ಷೇರು ಮಾರುಕಟ್ಟೆಯಲ್ಲಿ ಸಾಮಾನ್ಯ ಲಾಭ. ಸಂಗೀತ, ಸಾಹಿತ್ಯ ನೃತ್ಯ ಕಲಾಭ್ಯಾಸಿಗಳಿಗೆ ಸಂತಸ.
ಮೀನ: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ. ಇಲಾಖೆಯವರ ಸಹಕಾರದಿಂದ ಕಾರ್ಯಗಳು ಯಶಸ್ವಿ. ಕೊಂಚ ಕಾಲದಿಂದ ಸೊರಗಿದ್ದ ಉದ್ಯಮ ಚೇತರಿಕೆ. ಊರಿನ ಶಿವಕ್ಷೇತ್ರಕ್ಕೆ ಭೇಟಿ.