Advertisement
ಕಳೆದ ಮೇನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮತದಾನದ ಪ್ರಮಾಣ ಕಡಿಮೆಯಾಗಿದೆ. ಜಿಲ್ಲಾಡಳಿತಗಳ ಮತದಾನ ಜಾಗೃತಿ ಕಾರ್ಯಕ್ರಮಗಳು ಹಾಗೂ ಬಿಜೆಪಿ ಮತ್ತು ಮೈತ್ರಿ ಪಕ್ಷಗಳ ಮುಖಂಡರ ಅಬ್ಬರದ ಪ್ರಚಾರ ಮತದಾರರ ಮೇಲೆ ಅಷ್ಟೊಂದು ಪರಿಣಾಮ ಬೀರಿದಂತೆ ಕಂಡಿಲ್ಲ.
Related Articles
ಮಹಿಳೆಯರಿಗಾಗಿ ಹಲವೆಡೆ ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಸಖೀಯರಿಗಾಗಿ ನಿರ್ಮಿಸಲಾಗಿದ್ದ ಪಿಂಕ್ ಮತಗಟ್ಟೆಗಳು ನೋಡಲು ಆಕರ್ಷಣೀಯವಾಗಿದ್ದರೂ ಮಹಿಳಾ ಮತದಾರರನ್ನು ಮತದಾನಕ್ಕೆ ಆಕರ್ಷಿಸಲಿಲ್ಲ. ಒಬ್ಬೊಬ್ಬರೇ ಮಹಿಳೆಯರು ಬಂದು ಮತ ಚಲಾಯಿಸುತ್ತಿದ್ದ ದೃಶ್ಯ ಕಂಡು ಬಂತು. ಹಕ್ಕು ಚಲಾಯಿಸಲು ಬಂದ ಮಹಿಳೆಯರಿಗೆ ಸಿಬ್ಬಂದಿ, ಪಿಂಕ್ ಬಣ್ಣದ ಬಳೆ ಹಾಗೂ ಉಗುರು ಬಣ್ಣ ಹಚ್ಚಿ ಕಳುಹಿಸುತ್ತಿದ್ದರು.
Advertisement
ರಜೆ, ಕೃಷಿ ಕೊಯ್ಲು ಕಾರಣ:ಸಾಲು, ಸಾಲು ಸರಕಾರಿ ರಜೆ, ಜತೆಗೆ ಶಾಲೆಗಳಿಗೆ ದೀಪಾವಳಿ ರಜೆ ಕೊಟ್ಟಿರುವುದರಿಂದ ಅನೇಕರು ಪ್ರವಾಸಕ್ಕೆ ತೆರಳಿರೋದು, ಹಳ್ಳಿಗಳಲ್ಲಿ ಭತ್ತ, ಮೆಕ್ಕೆಜೋಳ ಕೊಯ್ಲು, 5 ತಿಂಗಳ ಅವ ಧಿಯ ಚುನಾವಣೆ, ಸ್ಥಳೀಯ ಮುಖಂಡರ ಸಮನ್ವಯ ಕೊರತೆ, ದೊಡ್ಡದಾಗಿ ಕೇಳದ ಕಾಂಚಾಣದ ಸದ್ದು, ಚುನಾವಣೆ ಬೂತ್ ಬಳಿ ಪಕ್ಷದ ಚಿಹ್ನೆ, ಬಾವುಟ ಪ್ರದರ್ಶನಕ್ಕೆ ಅವಕಾಶ ಇಲ್ಲದಿರುವುದು…ಹೀಗೆ ನಾನಾ ಕಾರಣಗಳಿಂದ ಮತದಾರರ ಒಲವು ಕಂಡು ಬರಲಿಲ್ಲ ಎನ್ನಲಾಗಿದೆ. ಮಗುವಿನೊಂದಿಗೆ ಇಲ್ಲ ಪ್ರವೇಶ
ಜಮಖಂಡಿ ಕ್ಷೇತ್ರವ್ಯಾಪ್ತಿಯ ಬಹುತೇಕ ಕಡೆ ಮಹಿಳೆಯರು ತಮ್ಮ ಮಕ್ಕಳೊಂದಿಗೆ ಮತದಾನಕ್ಕೆ ಬಂದಿದ್ದರು. ಅದರಲ್ಲಿ
ಕೆಲವರು 2ರಿಂದ 3 ತಿಂಗಳ ಹಸುಗೂಸು ಬಗಲಲ್ಲಿ ಹೊತ್ತು ಬಂದಿದ್ದರು. ಆದರೆ, ಪೊಲೀಸ್ ಸಿಬ್ಬಂದಿ, ಮಗುವಿನೊಂದಿಗೆ ಬಂದಿದ್ದ ಮಹಿಳೆಯರನ್ನು ಮತಗಟ್ಟೆ ಹೊರಗೇ ತಡೆದು ಮಗುವನ್ನು ಬೇರೆಯವರ ಕೈಯಲ್ಲಿ ಕೊಟ್ಟು ಮತ ಹಾಕಿ ಎಂದು ಸೂಚಿಸಿದ್ದರು. ಟಾರ್ಚ್ ಬೆಳಕಲ್ಲಿ ಅಂಬರೀಶ್ ಮತದಾನ
ಮಾಜಿ ಸಚಿವ ಹಾಗೂ ಹಿರಿಯ ಚಿತ್ರನಟ ಅಂಬರೀಶ್ ಅವರು ಶನಿವಾರ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ದೊಡ್ಡ ಅರಸಿನಕೆರೆ ಗ್ರಾಮದಲ್ಲಿ ಮತದಾನ ಮಾಡಿದರು. ಮತದಾನ ಮಾಡಲು ತೆರಳಿದಾಗ ಕೊಠಡಿ ಕತ್ತಲೆಯಿಂದ ಕೂಡಿತ್ತು. ಹೀಗಾಗಿ, ಮೊಬೈಲ್ ಟಾರ್ಚ್ ಸಹಾಯದಿಂದ ಅಂಬಿ ಮತ ಚಲಾಯಿಸಿದರು. ಫೋಟೋ ಕ್ಲಿಕ್ಕಿಸಿದ ಯುವಕನ ಸೆರೆ
ಹೊಸಪೇಟೆ: ಮತದಾನ ಮಾಡಿದ ಬಳಿಕ ಮತಯಂತ್ರದಿಂದ ಹೊರ ಬಂದ ಮುದ್ರಿತ ಚೀಟಿಯ ಫೋಟೋ ತೆಗೆದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಕೌಲಪೇಟೆ ನಿವಾಸಿ ಇಬ್ರಾಹಿಂ ರಜಾಕ್ ಬಂಧಿತ ಆರೋಪಿ. ನಗರಸಭೆ ಕಾರ್ಯಾಲಯದ ಮತಗಟ್ಟೆ ನಂ.62ರಲ್ಲಿ ಮತದಾ ನಕ್ಕಾಗಿ ಆಗಮಿಸಿದ್ದ ಇಬ್ರಾಹಿಂ ರಜಾಕ್ ತಮ್ಮ ಬಳಿಯಿದ್ದ ಮೊಬೈಲ್ ಕ್ಯಾಮರಾದಲ್ಲಿ ಮತದಾನ ಮಾಡಿದ ಬಳಿಕ ವಿವಿ ಪ್ಯಾಟ್‌ನಲ್ಲಿ ಮುದ್ರಿತ ಚೀಟಿಯನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲು ಮುಂದಾಗಿದ್ದ. ಕೂಡಲೇ ಇದನ್ನು ತಡೆದ ಮತಗಟ್ಟೆ ಅಧಿಕಾರಿ,ಮೊಬೈಲ್ ಸಹಿತ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಪೊಲೀಸರು ಈ ಸಂಬಂಧ ಪ್ರಕ ರಣ ದಾಖಲಿಸಿ ಕೊಂಡಿದ್ದಾರೆ ಎಂದು ಉಪವಿಭಾಗಾಧಿಕಾರಿ ಲೋಕೇಶ್ ತಿಳಿಸಿದ್ದಾರೆ. ಚುನಾವಣಾ ಸಿಬ್ಬಂದಿ ಸಾವು
ಬಳ್ಳಾರಿ ಉಪ ಚುನಾವಣೆಗೆ ನಿಯೋಜಿಸಲ್ಪಟ್ಟಿದ್ದ ಹೆಚ್ಚುವರಿ ಚುನಾವಣಾ ಸಿಬ್ಬಂದಿಯೊಬ್ಬರು ಶನಿವಾರ ಮೃತಪಟ್ಟಿದ್ದಾರೆ. ಕುರುಗೋಡು ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ವೈ.ಎಂ. ಮಂಜುನಾಥ್ (57) ಮೃತಪಟ್ಟ ಸಿಬ್ಬಂದಿ.ಇವರನ್ನು ಹೊಸಪೇಟೆ ಆಕಾಶವಾಣಿ ಬಳಿ ಇರುವ ಮತಗಟ್ಟೆ ನಂ.132ಎ ಗೆ ನಿಯೋಜಿಸಲಾಗಿತ್ತು. ಶುಕ್ರವಾರ ಹೊಸ ಪೇಟೆಗೆ ಆಗಮಿಸಿದ್ದ ಮಂಜುನಾಥ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಇದನ್ನು ಗಮನಿಸಿದ ಎಸಿ ಲೋಕೇಶ್ ಮನೆಗೆ ತೆರಳುವಂತೆ ಸೂಚಿಸಿದ್ದರು. ವಾಪಸ್ ಕುರು ಗೋಡಿಗೆ ತೆರಳಿದ ಮಂಜುನಾಥ್ ಶನಿವಾರ ನಸುಕಿನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ನೀತಿ ಸಂಹಿತೆ ಉಲ್ಲಂಸಿದ ನ್ಯಾಮಗೌಡ
ಜಮಖಂಡಿ ಕ್ಷೇತ್ರವ್ಯಾಪ್ತಿಯ ನಾಗನೂರ ಮತಗಟ್ಟೆ ಎದುರು ಮತದಾರರಿಗೆ ಆರತಿ ಎತ್ತಿ ಸ್ವಾಗತಿಸುತ್ತಿದ್ದ ಸ್ಥಳಕ್ಕೆ ಆಗಮಿಸಿದ
ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ, ಆರತಿ ತಟ್ಟೆಗೆ 100 ರೂ. ಹಾಕಿದರು. ಇದರಿಂದಾಗಿ ಅವರು ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ ಕೇಳಿ ಬಂತು. ಮತಗಟ್ಟೆಗೆ ಬಂದ ನಾಗರಹಾವು
ಶಿವಮೊಗ್ಗ ಲೋಕಸಭಾ ಕ್ಷೇತ್ರದ ತಾಳಗುಂದ ಹೋಬಳಿ ಕಾನಳ್ಳಿ ಮತಗಟ್ಟೆಯೊಂದರಲ್ಲಿ ನಾಗರಹಾವು ಕಾಣಿಸಿಕೊಂಡ ಘಟನೆ ನಡೆದಿದೆ.ಮತಗಟ್ಟೆ ಸಂಖ್ಯೆ 22ರಲ್ಲಿ ಶುಕ್ರವಾರ ರಾತ್ರಿ ನಾಗರಹಾವು ಪ್ರತ್ಯಕ್ಷವಾಯಿತು. ಇದನ್ನು ಕಂಡ ಚುನಾವಣಾ ಸಿಬ್ಬಂದಿ ಗಾಬರಿಗೊಂಡರು. ಹಾವನ್ನು ಕೊಠಡಿಯಿಂದ ಹೊರಗೆ ಕಳುಹಿಸಲು ಸಿಬ್ಬಂದಿ ಸಾಕಷ್ಟು ಪ್ರಯತ್ನಿಸಿದರೂ ಹಾವು ಅಲ್ಲಿಯೇ ಠಿಕಾಣಿ ಹೂಡಿತ್ತು. ನಂತರ ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿಸಿ ಶಿಕಾರಿಪುರದಿಂದ ಆಗಮಿಸಿದ ಉರಗ ತಜ್ಞರೊಬ್ಬರು ಹಾವನ್ನು ಹಿಡಿದು ಕಾಡಿಗೆ ಬಿಟ್ಟರು. ಮತಗಟ್ಟೆಯಲ್ಲಿ ಹಾವು: ರಾಮನಗರ ತಾಲೂಕಿನ ಕೈಲಾಂಚ ಹೋಬಳಿ ಮೊಟ್ಟೆದೊಡ್ಡಿ ಗ್ರಾಮದ ಮತಗಟ್ಟೆ ಸಂಖ್ಯೆ 179ರಲ್ಲಿ
ಹಾವೊಂದು (ಕಟ್ಟಾವು) ಪ್ರತ್ಯಕ್ಷವಾಗಿ ಕೆಲಕಾಲ ಆತಂಕಕ್ಕೆ ಕಾರಣವಾಯಿತು. ಮತಗಟ್ಟೆ ಅಧಿಕಾರಿಗಳು ಗ್ರಾಮಸ್ಥರ ನೆರವಿನಿಂದ ಹಾವನ್ನು ತೆರವುಗೊಳಿಸಿ ಮತದಾನಕ್ಕೆ ಅನುವು ಮಾಡಿಕೊಟ್ಟರು. ಬೂತ್ ಏಜೆಂಟ್‌ಗಳೇ ಇಲ್ಲ
ಮತದಾನ ಕೇಂದ್ರದಲ್ಲಿ ಎಲ್ಲ ಪಕ್ಷದ ಒಬ್ಬರಿಗೆ ಚುನಾವಣೆ ಪ್ರಕ್ರಿಯೆ ವೀಕ್ಷಿಸಲು ಅವಕಾಶವಿರುತ್ತದೆ. ಆದರೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಹುತೇಕ ಕಡೆ ಏಜೆಂಟರ ಕೊರತೆ ಕಾಣುತ್ತಿತ್ತು. ಭದ್ರಾವತಿ ಹಾಗೂ ತೀರ್ಥಹಳ್ಳಿಯಲ್ಲಿ ಜೆಡಿಎಸ್ ಪರವಾಗಿ ಯಾವ ಪಕ್ಷದಿಂದ ಏಜೆಂಟ್ ನಿಲ್ಲಿಸಬೇಕೆಂಬ ಗೋಜಲು ಬಗೆಹರಿಯದೇ ಯಾರನ್ನೂ ನೇಮಿಸಿರಲಿಲ್ಲ. ಬಹುತೇಕ ಮತಗಟ್ಟೆಗಳಲ್ಲಿ ಬಿಜೆಪಿ ಏಜೆಂಟ್‌ಗಳು ಮಾತ್ರ ಇದ್ದರು. ಶಾಸಕ ಬಿ.ಕೆ.ಸಂಗಮೇಶ್‌ಗೆ ಸಚಿವ ಸ್ಥಾನ ತಪ್ಪಿಸಬೇಕೆಂಬ ಕಾರಣದಿಂದಲೇ ಜೆಡಿಎಸ್‌ನ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಗೌಡ ಮತದಾನ ಆಗದಂತೆ ನೋಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಭದ್ರಾವತಿಯಲ್ಲಿ ಉತ್ತಮ ಲೀಡ್ ಕೊಟ್ಟರೆ ಶಾಸಕ ಸಂಗಮೇಶ್‌ಗೆ ಸಚಿವ ಸ್ಥಾನ ಕೇಳಲು ಬಲ ಬರಲಿದೆ. ಆದರೆ ಇದಕ್ಕೆ ಜೆಡಿಎಸ್‌ನವರು ಉದ್ದೇಶಪೂರ್ವಕವಾಗಿ ಬೂತ್‌ಗಳಲ್ಲಿ ಏಜೆಂಟ್‌ಗಳನ್ನು ನೇಮಕ ಮಾಡಿಲ್ಲ ಎಂಬ ಮಾತು ಕೇಳಿ ಬಂದವು. ವನಿತೆಯರನ್ನು ಆಕರ್ಷಿಸದ ಪಿಂಕ್ ಮತಗಟ್ಟೆಗಳು
ಮಹಿಳೆಯರಿಗಾಗಿ ಹಲವೆಡೆ ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಸಖೀಯರಿಗಾಗಿ ನಿರ್ಮಿಸಲಾಗಿದ್ದ ಪಿಂಕ್ ಮತಗಟ್ಟೆಗಳು ನೋಡಲು ಆಕರ್ಷಣೀಯವಾಗಿದ್ದರೂ ಮಹಿಳಾ ಮತದಾರರನ್ನು ಆಕರ್ಷಿಸಲಿಲ್ಲ. ಒಬ್ಬೊಬ್ಬರೇ ಮಹಿಳೆಯರು ಬಂದು ಮತ ಚಲಾಯಿಸುತ್ತಿದ್ದ ದೃಶ್ಯ ಕಂಡು ಬಂತು. ಹಕ್ಕು ಚಲಾಯಿಸಲು ಬಂದ ಮಹಿಳೆ ಯರಿಗೆ ಸಿಬ್ಬಂದಿ, ಪಿಂಕ್ ಬಣ್ಣದ ಬಳೆ ಹಾಗೂ ಉಗುರು ಬಣ್ಣ ಹಚ್ಚಿ ಕಳುಹಿಸುತ್ತಿದ್ದರು. ಶಿವನಿಗೆ ವಿಶೇಷ ಪೂಜೆ
ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿ ಜೆ.ಶಾಂತಾ ಪರ ಅಹೋರಾತ್ರಿ ಪ್ರಚಾರ
ಮಾಡಿದ್ದ ಮಾಜಿ ಸಚಿವ ಬಿ.ಶ್ರೀರಾಮುಲು ಮತದಾನ ದಿನವಾದ ಶನಿವಾರ ಬೆಳಗ್ಗೆ ನಗರದ ಸಿರುಗುಪ್ಪ ರಸ್ತೆಯ ತಮ್ಮ ನಿವಾಸದಲ್ಲಿ ಶಿವಧ್ಯಾನ ಮಾಡಿ ನಂತರ ವಿಶೇಷ ಪೂಜೆ ಸಲ್ಲಿಸಿದರು. ಪ್ರತಿದಿನ ಶ್ರೀರಾಮುಲು ತಮ್ಮ ನಿವಾಸದಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸುವುದು ಸಾಮಾನ್ಯ. ಆದರೆ, ಮತದಾನ ದಿನದಂದು ವಿಶೇಷ ಪೂಜೆ ಸಲ್ಲಿಸಿ, ಚುನಾವಣೆಯಲ್ಲಿ ಗೆಲುವು ನಮ್ಮದಾಗಲಿ ಎಂದು ದೇವರಲ್ಲಿ
ಪ್ರಾರ್ಥಿಸಿ ನಂತರ ಮತದಾನ ಮಾಡಿದರು.