Advertisement

ಮತದಾರರ ಪಟ್ಟಿ ಮುದ್ರಣಕ್ಕೆ ಖಾಸಗಿ ಬದಲು ಸರಕಾರಿ ಮುದ್ರಣಾಲಯದಲ್ಲಿ ಮುದ್ರಿಸಲು ಡಿಕೆಶಿ ಮನವಿ

06:15 PM Dec 17, 2020 | sudhir |

ಬೆಂಗಳೂರು : ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಮತದಾರ ಪಟ್ಟಿಯನ್ನು ಮುದ್ರಿಸಲು ಖಾಸಗಿ ಸಂಸ್ಥೆಗೆ ನೀಡುವ ಬದಲು ಸರಕಾರಿ ಮುದ್ರಣಾಲಯದಲ್ಲಿ ಮುದ್ರಿಸುವ ವ್ಯವಸ್ಥೆಯನ್ನು ಮಾಡಿಕೊಳ್ಳಲಿ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಸರಕಾರಕ್ಕೆ ಮನವಿ ಮಾಡಿದ್ದಾರೆ.

Advertisement

ಗ್ರಾಮ ಪಂಚಾಯತ್ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು ಪಂಚಾಯತ್ ಮಟ್ಟದಲ್ಲಿ ಎಲ್ಲಾ ತಯಾರಿಗಳು ನಡೆಯುತ್ತಿವೆ ಹಾಗಾಗಿ ಮತದಾರರ ಪಟ್ಟಿ ಮುದ್ರಣಕ್ಕೆ ಖಾಸಗಿ ಸಂಸ್ಥೆಗಳಿಗೆ ಕೊಟ್ಟರೆ ಅಲ್ಲಿ ಅವ್ಯವಹಾರ ನಡೆಯುವ ಸಂಭವ ಹೆಚ್ಚು ಕೆಲವೊಂದು ಮತದಾರರ ಹೆಸರು ಪಟ್ಟಿಯಿಂದ ಮಾಯವಾಗಬಹುದು ಈ ಎಲ್ಲಾ ಕಾರಣಗಳಿಂದ ಸರಕಾರ ಪಾರದರ್ಶಕವಾಗಿ ಮತದಾರರ ಪಟ್ಟಿ ಮುದ್ರಿಸಲಿ ಇದಕ್ಕಾಗಿ ಸರಕಾರ ಸರ್ಕಾರಿ ಮುದ್ರಣಾಲಯಗಳನ್ನು ಬಳಸಿಕೊಳ್ಳಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಟ್ಯಾಂಕಿನಿಂದ ಒವರ್ ಪ್ಲೋ ಅದ ನೀರಿನಿಂದ ತರಕಾರಿ ಬೆಳೆಸಿದ ಕೃಷ್ಣಪ್ಪನವರು

Advertisement

Udayavani is now on Telegram. Click here to join our channel and stay updated with the latest news.

Next