Advertisement

ಬಿಜೆಪಿಯಿಂದ ಮತದಾರರ ಚೇತನ-ಮಹಾ ಅಭಿಯಾನ

01:01 AM Aug 30, 2023 | Team Udayavani |

ಮಂಗಳೂರು: 2024ರ ಲೋಕಸಭಾ ಚುನಾವಣೆಗೆ ಪೂರಕವಾಗಿ ಬಿಜೆಪಿ ವತಿಯಿಂದ ದೇಶಾದ್ಯಂತ ಮತದಾರರ ಚೇತನ-ಮಹಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ದ.ಕ.ದಲ್ಲೂ ಪ್ರಾರಂಭಗೊಂಡಿದೆ. ಹೊಸ ಮತದಾರರ ಸೇರ್ಪಡೆಗೆ ಕಾರ್ಯಕರ್ತರ ತಂಡವನ್ನು ಸಿದ್ಧಗೊಳಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

18 ವರ್ಷ ತುಂಬಿದವರನ್ನು ಪಟ್ಟಿಗೆ ಸೇರಿಸುವುದು, ಹೆಸರು ವರ್ಗಾವಣೆ, ಹೆಸರು ತೆಗೆದುಹಾಕುವ ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ಜಿಲ್ಲೆ ಮಟ್ಟದ ಸಮಿತಿಗೆ ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ ಹಾಗೂ ದೇವದಾಸ್‌ ಶೆಟ್ಟಿ ಅವರನ್ನು ಸಂಚಾಲಕರನ್ನಾಗಿ ನೇಮಿಸಲಾಗಿದೆ ಎಂದರು.

ಪ್ರತೀ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರು, ಮಂಡಲ ಅಧ್ಯಕ್ಷರು ಹಾಗೂ ಪ್ರಮುಖರನ್ನು ಒಳಗೊಂಡ ಪ್ರತ್ಯೇಕ ತಂಡವನ್ನು ರಚಿಸಲಾಗಿದೆ. ಚುನಾವಣ ಆಯೋಗದ ಸಹಕಾರ ಪಡೆದು ಜಿಲ್ಲೆಯ 1,860 ಬೂತ್‌ಗಳಲ್ಲಿ ಬಿಎಲ್‌
ಒಗಳ ಕೆಲಸಕ್ಕೆ ಸಾಥ್‌ ನೀಡಲಾಗುವುದು. ಹೊಸ ಮತ ದಾರರು ಬಹುತೇಕ ಮಂದಿ ಬಿಜೆಪಿಗೆ ಮತ ನೀಡುತ್ತಿದ್ದು, ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು. ಮೋದಿ 3ನೇ ಬಾರಿ ದೇಶದ ಪ್ರಧಾನಿ ಆಗುವುದು ಖಚಿತ ಎಂದರು.

ಮಹಾ ಅಭಿಯಾನ ಸಮಿತಿ ಸಂಚಾಲಕರಾದ ಕಸ್ತೂರಿ ಪಂಜ, ದೇವದಾಸ್‌ ಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್‌ ಶೆಟ್ಟಿ ಕಣ್ಣೂರು, ವಕ್ತಾರರಾದ ರವಿಶಂಕರ ಮಿಜಾರು, ಜಗದೀಶ ಶೇಣವ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next