Advertisement
ಆರ್.ಆರ್. ನಗರ ಉಪ ಚುನಾವಣೆಗೆ ಸಂಬಂಧಿಸಿದಂತೆ ಪಾಲಿಕೆಯ ಆಯುಕ್ತರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆಯುಕ್ತರು, ಆರ್.ಆರ್. ನಗರ ಉಪ ಚುನಾವಣೆಗೆ ಸಂಬಂಧಿಸಿದಂತೆ ಕೆಲವರು ಸಾರ್ವಜನಿಕರಿಂದ ಮತದಾರರ ಗುರುತಿನ ಚೀಟಿ ಸಂಖ್ಯೆ ಕೇಳುತ್ತಿರುವ ಬಗ್ಗೆ ದೂರು ಕೇಳಿಬಂದಿದೆ. ಅಲ್ಲದೆ,ಕೆಲವುರುಕರೆ ಮಾಡಿ ಮತದಾರರ ಗುರುತಿನ ಚೀಟಿ ಕೊಡಬೇಕಾ ಎಂದೂ ಕೇಳುತ್ತಿದ್ದಾರೆ. ಗುರುತಿನ ಚೀಟಿ ಕೇಳುವುದು ಹಾಗೂ ಕೊಡುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದರು.
Related Articles
Advertisement
ಆಮಿಷಗಳಿಗೆ ಒಳಗಾಗಬೇಡಿ : ಮತದಾರರು ಯಾವುದೇ ಆಸೆ- ಆಮಿಷಗಳಿಗೆ ಒಳಗಾಗಬೇಡಿ. ಮತದಾರರ ಗುರುತಿನ ಚೀಟಿ ಅಥವಾ ಸಂಖ್ಯೆಯನ್ನು ನೀಡಬೇಡಿ.ಈ ರೀತಿ ನೀಡುವುದೂ ಶಿಕ್ಷಾರ್ಹ ಅಪರಾಧವಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಆಯುಕ್ತರು ಸೂಚನೆ ನೀಡಿದ್ದಾರೆ.
79 ಅತಿ ಸೂಕ್ಷ್ಮಮತಕೇಂದ್ರಗಳು : ಆರ್.ಆರ್. ನಗರ ವ್ಯಾಪ್ತಿಯಲ್ಲಿ 79 ಮತ ಕೇಂದ್ರಗಳನ್ನು ಅತೀ ಸೂಕ್ಷ್ಮ ಮತಕೇಂದ್ರಗಳು ಎಂದು ಗುರುತಿಸಲಾಗಿದೆ. ಈ ಹಿಂದೆ ಚುನಾವಣೆ ಹಾಗೂ ಮತದಾನದ ಸಂದರ್ಭದಲ್ಲಿನ ಪ್ರಕ್ರಿಯೆಗಳ ಆಧಾರದ ಮೇಲೆ ಈ ಕೇಂದ್ರಗಳನ್ನು ಸೂಕ್ಷ್ಮ ಮತಕೇಂದ್ರಗಳು ಎಂದು ಗುರುತಿಸಲಾಗಿದೆ. ಮತದಾನ ನಡೆಯುವ ದಿನ ಸಂಜೆ ಆರು ಗಂಟೆಯ ವರೆಗೆ ಸಾಲಿನಲ್ಲಿ ನಿಲ್ಲುವವರಿಗೆ ಮತದಾನಕ್ಕೆ ಅವಕಾಶ ನೀಡಲಾಗುವುದು. ಕೊನೆಯಲ್ಲಿ ಬಂದವರಿಗೆ ಟೋಕನ್ ನೀಡಲಾಗುದು ಎಂದು ಹೇಳಿದರು.
15-20 ಅಧಿಕಾರಿಗಳ ವರ್ಗಾವಣೆ : ಆರ್.ಆರ್. ನಗರ ವ್ಯಾಪ್ತಿಯಲ್ಲಿ ಕಳೆದ ಹಲವುವರ್ಷಗಳಿಂದ ಪಾಲಿಕೆಯಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದಾರೆ.ಚುನಾವಣೆ ದೃಷ್ಟಿಯಿಂದ ಈ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂಬ ಅಭಿಪ್ರಾಯವ್ಯಕ್ತವಾಗಿತ್ತು.ಈ ಹಿನ್ನೆಲೆಯಲ್ಲಿ 15ರಿಂದ 20 ಜನ ಪಾಲಿಕೆಯ ಅಧಿಕಾರಿಗಳನ್ನು ಆರ್.ಆರ್. ನಗರ ದಿಂದ ಬೇರೆ ವಲಯಗಳಿಗೆ ವರ್ಗಾವಣೆ ಮಾಡಿಆದೇಶ ಮಾಡಲಾಗಿದೆ ಎಂದುಆಯುಕ್ತರು ಮಾಹಿತಿ ನೀಡಿದರು.
11 ಪರ್ಯಾಯ ದಾಖಲೆ ತೋರಿಸಿ ಮತ ಚಲಾಯಿಸಿ :
- ಪಾಸ್ ಪೋರ್ಟ್
- ಡ್ರೈವಿಂಗ್‌ಲೈಸೆನ್ಸ್
- ಕೇಂದ್ರ ಮತ್ತು ರಾಜ್ಯ ಸರ್ಕಾರ, ಸಾರ್ವಜನಿಕ ವಲಯ ಉದ್ದಿಮೆ, ಸಾರ್ವಜನಿಕ ಸೀಮಿತ ಕಂಪನಿಗಳ ನೌಕರರಿಗೆ ನೀಡಿರುವ ಫೋಟೋ ಇರುವ ಗುರುತಿನ ಚೀಟಿ
- ನರೇಗಾ ಜಾಬ್ ಕಾರ್ಡ್
- ಪ್ಯಾನ್ ಕಾರ್ಡ್
- ಭಾವಚಿತ್ರ ಇರುವ ಪಿಂಚಣಿಕಾರ್ಡ್
- ಭಾವಚಿತ್ರ ಇರುವ ಬ್ಯಾಂಕ್ ಪಾಸ್‌ಬುಕ್
- ಕಾರ್ಮಿಕ ಸಚಿವಾಲಯದ ಆರೋಗ್ಯ ವಿಮೆ ಕಾರ್ಡ್
- ಆರ್.ಜಿ.ಐನ ಅಡಿ ಎನ್.ಪಿ ಆರ್ ನೀಡುವ ಸ್ಮಾರ್ಟ್ ಕಾರ್ಡ್
- ಸಂಸದ, ಶಾಸಕ ಅಥವಾ ವಿಧಾನಪರಿಷತ್ತು ಸದಸ್ಯರಿಗೆ ನೀಡಿರುವ ಗುರುತಿನ ಚೀಟಿ
- ಆಧಾರ್ ಕಾರ್ಡ್