ಜೈಪುರ: ಆಶೋಕ್ ಗೆಹ್ಲೋಟ್ ಸರ್ಕಾರಕ್ಕೆ ಒಂದು ವೇಳೆ ವಿಶ್ವಾಸಮತಯಾಚನೆ ಸಂದರ್ಭ ಎದುರಾದರೆ, ಕಾಂಗ್ರೆಸ್ ಪಕ್ಷಕ್ಕೆ ವಿರುದ್ಧವಾಗಿ ಮತ ಚಲಾಯಿಸುವಂತೆ ಬಿಎಸ್ ಪಿ ( ಬಹುಜನ ಸಮಾಜವಾದಿ) ಪಕ್ಷ ತನ್ನ ಆರು ಶಾಸಕರಿಗೆ ವಿಪ್ ಜಾರಿಗೊಳಿಸಿದೆ.
ಸಚಿನ್ ಪೈಲೆಟ್ ನೇತೃತ್ವದ ಶಾಸಕರ ಬಂಡಾಯದ ನಂತರ ಆಶೋಕ್ ಗೆಹ್ಲೋಟ್ ತಮ್ಮ ಸರ್ಕಾರ ಉಳಿಸಲು ಹರಸಾಹ ನಡೆಸುತ್ತಿದ್ದಾರೆ. ಏತನ್ಮಧ್ಯೆ ಬಿಎಸ್ ಪಿ ತನ್ನ ಶಾಸಕರಿಗೆ ವಿಪ್ ಜಾರಿ ಮಾಡಿರುವುದು ರಾಜಸ್ಥಾನ ರಾಜಕಾರಕ್ಕೆ ಹೊಸ ತಿರುವು ಸಿಕ್ಕಿದೆ.
ಎಲ್ಲಾ ಆರು ಜನ ಬಿಎಸ್ ಪಿ ಶಾಸಕರು ಈಗಾಗಲೇ ಕಾಂಗ್ರೆಸ್ ನೊಂದಿಗೆ ವಿಲೀನಗೊಂಡಿದ್ದು, ಇದೀಗ ವಿಪ್ ಜಾರಿಗೊಳಿಸುವುದರಿಂದ ತಾಂತ್ರಿಕ ಗೋಜಲುವಿಗೆ ಕಾರಣವಾಗಬಹುದು ಎಂದು ಉಲ್ಲೇಖಿಸಲಾಗಿದೆ. ಮತ್ತೊಂದೆಡೆ ಕಾಂಗ್ರೆಸ್ ಜೊತೆ ವಿಲೀನ ಕಾನೂನುಬಾಹಿರ ಎಂದು ಹೇಳುವ ಮೂಲಕ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ನೇತೃತ್ವದ ಪಕ್ಷ ಬಿಎಸ್ ಪಿ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಚುನಾವಣಾ ಆಯೋಗದಲ್ಲಿ ಇನ್ನೂ ತೀರ್ಮಾನವಾಗಿಲ್ಲ.
ಆರು ಶಾಸಕರಿಗೆ ಪ್ರತ್ಯೇಕವಾಗಿ ನೋಟಿಸ್ ನೀಡಲಾಗಿದೆ, ಬಿಎಸ್ ಪಿ ರಾಷ್ಟ್ರೀಯ ಪಕ್ಷವಾಗಿರುವುದರಿಂದ, ಆರು ಶಾಸಕರ ಉದಾಹರಣೆಯಲ್ಲಿ ರಾಜ್ಯ ಮಟ್ಟದಲ್ಲಿ ಯಾವುದೇ ವಿಲೀನ ಸಾಧ್ಯವಿಲ್ಲ, ರಾಷ್ಟ್ರದ ಎಲ್ಲಾ ಕಡೆ ವಿಲೀನವಾಗದೇ, ಆರು ಜನ ಶಾಸಕರು ಬೇರೆ ಪಕ್ಷಗಳೊಂದಿಗೆ ವಿಲೀನಗೊಳ್ಳಲು ಸಾಧ್ಯವಿಲ್ಲ. ಈ ನಿಯಮವನ್ನು ಉಲ್ಲಂಘಿಸಿದರೆ ಆರು ಶಾಸಕರನ್ನು ಅನರ್ಹಗೊಳಿಸಲಾಗುತ್ತದೆ ಎಂದು ಬಿಎಸ್ ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ ತಿಳಿಸಿದ್ದಾರೆ.
ಸಂದೀಪ್ ಯಾದವ್, ವಾಜಿಬ್ ಆಲಿ, ದೀಪ್ ಚಂದ್ ಖೇರಿಯಾ, ಲಖನ್ ಮೀನಾ, ಜೋಗೆಂದ್ರ ಅವನಾ, ರಾಜೇಂದ್ರ ಗುಧಾ ಈ ಆರು ಮಂದಿ ಶಾಸಕರು 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ ಪಿ ಯಿಂದ ಆಯ್ಕೆಯಾಗಿದ್ದರು. ನಂತರ ಕಾಂಗ್ರೆಸ್ ನೊಂದಿಗೆ ಸೇರುವ ಇಂಗಿತ ವ್ಯಕ್ತಪಡಿಸಿ ಸ್ಪೀಕರ್ ಗೆ ಅರ್ಜಿ ಸಲ್ಲಿಸಿದ್ದರು. ಇದರಿಂದ ಸ್ಪೀಕರ್ ಕೂಡ ಈ ಅರ್ಜಿಯನ್ನು ಅಂಗೀಕರಿಸಿ ಆರು ಮಂದಿಯೂ ಇನ್ನು ಮುಂದೆ ಕಾಂಗ್ರೆಸ್ ಶಾಸಕರು ಎಂದು ಘೋಷಿಸಿದ್ದರು,