Advertisement
ಚೈನ್ ಲಿಂಕ್ ಮಾದರಿ ಉದ್ಯಾನವನ: ಪಶ್ಚಿಮ ಘಟ್ಟಗಳ ಸಾಲಿಗೆ ಸೇರಿರುವ ಅರಣ್ಯ ಪ್ರದೇಶ ಹೊಂದಿರುವ ನಾಗರಹೊಳೆ, ಬಂಡಿಪುರ, ಮಧುಮಲೆ, ವಯನಾಡು ಅರಣ್ಯ ಪ್ರದೇಶ ಚೈನ್ ಲಿಂಕ್‌ನಂತೆ ಏಷ್ಯಾದಲ್ಲೇ ಅತಿದೊಡ್ಡ ಆನೆ ಕಾರಿಡಾರ್ ಹೊಂದಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಗಜಗಣತಿಗೆ ಚಾಲನೆ ದೊರೆತಿದ್ದು, ಕಳೆದ ಐದು ವರ್ಷಗಳಲ್ಲಿ ಬಿದಿರಿನ ಮೇವು ಸೇರಿದಂತೆ ಆಹಾರ ಕೊರತೆಯಿಂದ ಸಾಕಷ್ಟು ಆನೆಗಳ ಸಾವಿನಿಂದ ಈ ಬಾರಿ ಆನೆಗಳ ಸಂಖ್ಯೆ ಕಡಿಮೆಯಾಗಿರಬಹುದೆಂಬ ಹಾಗೂ ಕಬಿನಿ ಹಿನ್ನೀರು, ಉದ್ಯಾನದ ಕೆರೆಕಟ್ಟೆಗಳಲ್ಲಿ ನೀರಿನ ಕೊರತೆಯ ಆತಂಕದ ನಡುವೆ ಆನೆಗಣತಿ ನಿರಾತಂಕವಾಗಿ ನಡೆದಿದೆ.
Related Articles
Advertisement
ನಾಗರಹೊಳೆ ಉದ್ಯಾನದ ಹುಲಿಯೋಜನೆ ನಿರ್ದೇಶಕ ಮಣಿಕಂಠನ್ ಮೇಲುಸ್ತುವಾರಿಯಲ್ಲಿ ಆಯಾ ವಿಭಾಗದ ಎ.ಸಿ.ಎಫ್ಗಳಾದ ಸತ್ಯನಾರಾಯಣ್, ಬೆಳ್ಳಿಯಪ್ಪ, ಪ್ರಸನ್ನಕುಮಾರ್ ಅವರುಗಳು ಎಲ್ಲಡೆ ಸುತ್ತಾಡಿ ಗಣತಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ಆಯಾವಲಯದ ಅರಣ್ಯಾಧಿಕಾರಿಗಳಾದ ಅರವಿಂದ್, ಶಿವರಾಂ, ಮಧುಸೂಧನ್, ಕಿರಣ್‌ಕುಮಾರ್, ಮಹೇಶ್, ವಿನಯ್, ಶಿವಬಸಪ್ಪ ಅವರುಗಳು 63 ಬೀಟ್‌ಗಳಲ್ಲಿ ನಡೆಯುತ್ತಿರುವ ಇಡೀ ಗಣತಿಯ ಉಸ್ತುವಾರಿ ವಹಿಸಿದ್ದರು.
ಮಧ್ಯಾಹ್ನದೂಟದ ಮೆನು: ಸ್ವಯಂಸೇವಕರು ಸೇರಿದಂತೆ ಸಿಬ್ಬಂದಿಗೆ ಒಂದೊಂದು ವಲಯದಲ್ಲೂ ಬಗೆ ಬಗೆಯ ಊಟದ ವ್ಯವಸ್ಥೆ ಕಲ್ಪಿಸಿದ್ದರು. ವೀರನ ಹೊಸಹಳ್ಳಿವಲಯದಲ್ಲಿ ಪುಳಿಯೋಗರೆ, ಕಲ್ಲಹಳ್ಳ, ಆನೆ ಚೌಕೂರುವಲಯದಲ್ಲಿ ತರಕಾರಿಬಾತ್, ನಾಗರಹೊಳೆ ವಲಯದಲ್ಲಿ ಪಲಾವ್‌ನೊಂದಿಗೆ ಮೊಟ್ಟೆ, ಡಿ.ಬಿ.ಕುಪ್ಪೆ$ರೇಂಜ್‌ನಲ್ಲಿ ವೆಜಿಟೆಬಲ್ ಪಲಾವ್, ಮೊಸರನ್ನ, ಹಪ್ಪಳ ವ್ಯವಸ್ಥೆ ಮಾಡಲಾಗಿತ್ತಲ್ಲದೆ ಜೊತೆಗೆ ಮುಂಜಾನೆ ತೆರಳುವ ವೇಳೆ ಒಂದು ಪೌಂಡ್‌ನಷ್ಟು ಬ್ರೆಡ್ ಮತ್ತು ಬಾಳೆಹಣ್ಣನ್ನು ಸಹ ನೀಡಲಾಗಿತ್ತು.
ಕಾಡಿನಲ್ಲಿ ಹತ್ತಿರದಿಂದ ವನ್ಯಪ್ರಾಣಿ ನೋಡುವುದು ನಮ್ಮ ಪುಣ್ಯ: ಆನೆಗಣತಿಗೆ ಆಗಮಿಸಿರುವ ಕಾಂಕ್ರಿಟ್ ಕಾಡಿನಲ್ಲಿ ನಿತ್ಯ ಕೆಲಸಮಾಡುತ್ತಿರುವ ಮಂದಿ ಇದೀಗ ಕಾಡಿನೊಳಗಿರುವ ಆಂಟ್ ಪೌಂಚಿಂಗ್ ಕ್ಯಾಂಪ್‌ಗ್ಳಲ್ಲಿ ವಾಸ್ತವ್ಯ ಹೂಡಿರುವುದರಿಂದ ಮೊಬೈಲ್ ಟವರ್‌ಸಿಗದೆ ಬಂದಾಗಿದ್ದು, ಒಂದು ರೀತಿಯಾದರೆ ಮತ್ತೂಂದೆಡೆ ಅರಣ್ಯ ಸಿಬ್ಬಂದಿಗಳೊಂದಿಗೆ ಕಾಡಿನೊಳಗೆ ಮಲಗಿದ್ದೇವೆ, ಕಾಡಿನಲ್ಲಿ ನಡೆದು ಆನೆಗಣತಿ ಮಾಡುವ ಹಾಗೂ ಇತರೆ ವನ್ಯ ಪ್ರಾಣಿಗಳನ್ನು ಬರಿಗಣ್ಣಿನಲ್ಲಿ ಹತ್ತಿರದಿಂದ ಕಾಣುವ ಭಾಗ್ಯ ನಮ್ಮದಾಗಿದೆ ಎನ್ನುತ್ತಾರೆ ಐಟಿಬಿಟಿಯಲ್ಲಿ ಕೆಲಸ ನಿರ್ವಹಿಸುತ್ತಿರುವ, ಗಣತಿ ಕಾರ್ಯದಲ್ಲಿ ಭಾಗವಹಿಸಿರುವ ಬಹುತೇಕ ಸ್ವಯಂಸೇವಕರುಗಳು.
ತಾವು ಬಹುತೇಕ ಕಡೆಗಳಿಗೆ ಭೇಟಿ ನೀಡಿದ್ದೇನೆ, ಕೆಲ ಬೀಟ್ ಬಿಟ್ಟರೆ ಎಲ್ಲ ವಲಯಗಳಲ್ಲೂ ಆನೆಗಳು ಕಾಣಿಸಿಕೊಂಡಿವೆ, ಮೊದಲ ದಿನದ ಗಣತಿ ಕಾರ್ಯ ಯಾವುದೇ ತೊಂದರೆ ಇಲ್ಲದೆ ನಡೆದಿದೆ, ಬಹುತೇಕ ತಂಡಗಳಿಗೆ ಹುಲಿ, ಚಿರತೆ, ಉಡ, ಹಾವುಗಳ ದರ್ಶನವಾಗಿದೆ. ಟ್ರಾಂಜಾಕ್ಟ್ ಲೈನ್ ಗಣತಿ ನಡೆಯಲಿದೆ ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನ.ಹುಲಿಯೋಜನೆ ಕ್ಷೇತ್ರ ನಿರ್ದೇಶಕ ಮಣಿಕಂಠನ್ ಮಾಹಿತಿ ನೀಡಿದರು.
* ಸಂಪತ್‌ಕುಮಾರ್