ಆಳಂದ: 2017-18ನೇ ಸಾಲಿನ ಸಾಕ್ಷರ ಭಾರತ ಕಾರ್ಯಕ್ರಮದ ಪಾರದರ್ಶಕತೆಯಿಂದ ಅನುಷ್ಠಾನ ಗೊಳ್ಳಬೇಕಾದರೆ ಸ್ವಯಂ ಸೇವಕರೇ ಮೂಲ ಎಂದು ತಾಪಂ ಇಒ ಡಾ| ಸಂಜಯ ರೆಡ್ಡಿ ಹೇಳಿದರು.
ಪಟ್ಟಣದ ತಾಪಂ ಸಾಮರ್ಥ ಸೌಧದಲ್ಲಿ ಸೋಮವಾರ ಸಾಕ್ಷರ ಭಾರತ ಕಾರ್ಯಕ್ರಮದ ತಾಲೂಕು ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಗೆ ನಾಲ್ಕು ದಿನಗಳ ಕಾರ್ಯಾಗಾರ ಉದ್ಘಾಟಸಿ ಅವರು ಮಾತನಾಡಿದರು. ಸಾಕ್ಷರ ಭಾರತ ಕಾರ್ಯಕ್ರಮದಲ್ಲಿ ನಮ್ಮ ತಾಲೂಕಿನ ಗುರಿ 27,820 ಇದೆ. ಪ್ರತಿ ಗ್ರಾಪಂಗೆ 713 ಗುರಿ ನಿಗದಿ ಪಡಿಸಲಾಗಿದೆ. ಪ್ರೇರಕರು ಹಾಗೂ ಸ್ವಯಂ ಸೇವಕರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ ಗುರಿ ತಲಪುವಂತಾಗಬೇಕು ಎಂದು
ಹೇಳಿದರು.
ತಾಪಂ ಅಧ್ಯಕ್ಷೆ ನಾಗಮ್ಮ ಅಶೋಕ ಗುತ್ತೇದಾರ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭು ಸರಸಂಬಿ ಇದ್ದರು. ಸಾಕ್ಷರ ಭಾರತ ತಾಲೂಕು ಸಂಯೋಜಕ ಗಣಪತಿ ಪ್ರಚಂಡೆ ಸ್ವಾಗತಿಸಿದರು. ಪ್ರತಿ ಗ್ರಾಪಂ ಮಟ್ಟದಿಂದ ಇಬ್ಬರು ಶಿಕ್ಷಕರು ಒಟ್ಟು 78 ಜನ ಶಿಕ್ಷಕರು ಕಾರ್ಯಗಾರದಲ್ಲಿ ಪಾಲ್ಗೊಂಡಿದರು.