Advertisement

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

09:18 PM Nov 21, 2024 | Team Udayavani |

ಮಂಗಳೂರು: ನಗರದ ಮರೋಳಿಯ ಕೆಂಬಾರ್‌ನ ಹೆದ್ದಾರಿ ಬದಿಯಲ್ಲಿ ಕಾಂಚನ ಟಿ.ವಿ.ಎಸ್‌. ಆಟೋ ರಿಕ್ಷಾ ವರ್ಕ್‌ ಶಾಪ್‌ನ ಲಾಕರ್‌ನಲ್ಲಿದ್ದ 93,540 ರೂ. ಹಣವನ್ನು ಕಳ್ಳರು ಕಳವು ಮಾಡಿದ್ದಾರೆ.

Advertisement

ಸಂಸ್ಥೆಯ ವರ್ಕ್ಸ್ ಮ್ಯಾನೇಜರ್‌ ನ. 19ರಂದು ವರ್ಕ್‌ಶಾಪ್‌ನಲ್ಲಿ ಆ ದಿನ ಸಂಗ್ರಹವಾದ 93,540 ರೂ. ಹಣವನ್ನು ಆಟೋ ರಿಕ್ಷಾದ ಬಿಡಿಭಾಗಗಳನ್ನು ಇಡುವ ಕೋಣೆಯ ಟೇಬಲ್‌ನಲ್ಲಿರುವ ಮಿನಿ ಲಾಕರ್‌ನಲ್ಲಿ ಇಟ್ಟು ಡ್ರಾವರ್‌ ಲಾಕ್‌ ಮಾಡಿದ್ದಾರೆ.

ನ. 20ರಂದು ಬೆಳಗ್ಗೆ 6.50ರ ವೇಳೆ ಸೆಕ್ಯೂರಿಟಿ ಗಾರ್ಡ್‌ ಮ್ಯಾನೇಜರ್‌ಗೆ ಕರೆ ಮಾಡಿ ವರ್ಕ್‌ ಶಾಪ್‌ನಲ್ಲಿ ಕಳವಾಗಿರುವ ಬಗ್ಗೆ ತಿಳಿಸಿದ್ದಾರೆ.

ಮ್ಯಾನೇಜರ್‌ ಕೂಡಲೇ ವರ್ಕ್‌ಶಾಪ್‌ಗೆ ಬಂದು ನೋಡಿದಾಗ ಹಿಂಬಾಗಿಲನ್ನು ಯಾವುದೋ ಆಯುಧವನ್ನು ಬಳಸಿ ಜಖಂಗೊಳಿಸಿ ಕಳ್ಳರು ಒಳ ಪ್ರವೇಶಿಸಿರುವುದು ಕಂಡುಬಂದಿದೆ.

ಅಲ್ಲಿಂದ ನೇರವಾಗಿ ಬಿಡಿ ಭಾಗಗಳ ಕೋಣೆಯ ಬಾಗಿಲನ್ನು ತೆರೆದು ಡ್ರಾವರ್‌ನ ಲಾಕರನ್ನು ಯಾವುದೋ ಆಯುಧವನ್ನು ಉಪಯೋಗಿಸಿ ಬಲವಂತದಿಂದ ತೆರೆದು ಅದರಲ್ಲಿದ್ದ ನಗದು 93,540 ರೂ. ಹಾಗೂ ಲಾಕರ್‌ ಅನ್ನು ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next