Advertisement

ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಹತ್ಯೆಗೆ ಮೂರು ಬಾರಿ ಯತ್ನ!

10:23 PM Mar 04, 2022 | Team Udayavani |

ಕಳೆದ ಒಂದು ವಾರದಲ್ಲಿ 3 ಬಾರಿ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಅವರ ಹತ್ಯೆಗೆ ಯತ್ನಗಳು ನಡೆದಿವೆ ಎಂಬ ಆಘಾತಕಾರಿ ಮಾಹಿತಿಯನ್ನು “ವಾಷಿಂಗ್ಟನ್‌ ಪೋಸ್ಟ್‌’ ಬಹಿರಂಗಪಡಿಸಿದೆ.

Advertisement

ರಷ್ಯಾದ ಫೆಡರಲ್‌ ಸೆಕ್ಯೂರಿಟಿ ಸರ್ವಿಸ್‌ (ಎಫ್ಎಸ್‌ಬಿ) ಹತ್ಯೆ ಪ್ರಯತ್ನದ ಬಗ್ಗೆ ಉಕ್ರೇನ್‌ನ ಭದ್ರತಾ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ಹೀಗಾಗಿ, ಸಂಭಾವ್ಯ ಅನಾಹುತ ತಪ್ಪಿದೆ ಎಂದು ವರದಿ

ಮಾಡಿದೆ. ಅದರ ಪ್ರಕಾರ Kadyrovites ಎಂಬ ಚೆಚೆನ್ಯಾದ ವಿಶೇಷ ಪೊಲೀಸ್‌ ಪಡೆ ಉಕ್ರೇನ್‌ ಅಧ್ಯಕ್ಷರನ್ನು ಕೊಲ್ಲಲು ಯೋಜನೆ ರೂಪಿಸಿ, ಅದನ್ನು ಪೂರೈಸಲು ಉಕ್ರೇನ್‌ನತ್ತ ತೆರಳಿತ್ತು. ಕಳೆದ ವಾರ ಕೀವ್‌ ಹೊರವಲಯದಲ್ಲಿ ನಡೆದಿದ್ದ ಬಿರುಸಿನ ಕಾಳಗದಲ್ಲಿ ಆ ವಿಶೇಷ ಪೊಲೀಸ್‌ ಪಡೆಯ ಸದಸ್ಯರನ್ನು ಕೊಲ್ಲಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next