Advertisement

ರಾಜೋತ್ಸವದಲ್ಲಿ ವಿ.ಕೆ. ಮೂರ್ತಿ ನೆನಪು

04:32 PM Apr 28, 2018 | |

ವಿನೋದ ಸಾಂಸ್ಕೃತಿಕ ವೇದಿಕೆ ಹಾಗೂ ರವಿಕಿರಣ್‌ ಅಭಿಮಾನಿಗಳ ಬಳಗ ವತಿಯಿಂದ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ ವಿಜೇತ ಡಾ.ರಾಜ್‌ಕುಮಾರ್‌ರ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಕನ್ನಡದ ಮತ್ತೂಬ್ಬ ಫಾಲ್ಕೆ ಪ್ರಶಸ್ತಿ ವಿಜೇತ, ಕಾಗಝ್ ಕೆ ಫ‌ೂಲ್‌, ಸಾಹೇಬ್‌ ಬೀಬಿ ಔರ್‌ ಗುಲಾಂ, ಪ್ಯಾಸಾ ಮುಂತಾದ ಕ್ಲಾಸಿಕ್‌ ಬಾಲಿವುಡ್‌ ಸಿನಿಮಾಗಳಿಗೆ ಕ್ಯಾಮೆರಾ ಹಿಡಿದ ವಿ.ಕೆ. ಮೂರ್ತಿಯವರ ಸ್ಮರಣೆಯೂ ನಡೆಯಲಿದೆ.

Advertisement

ಈ ಅಂಗವಾಗಿ ಗಾಯನ, ನೃತ್ಯ, ಅಭಿನಯ, ವಾದ್ಯ ವಿಭಾಗ ಹಾಗೂ ಚಿತ್ರಕಲೆ, ರಂಗೋಲಿ, ಶ್ಲೋಕ ಸ್ಪರ್ಧೆಗಳು ನಡೆಯಲಿವೆ. ಸಬ್‌ ಜೂನಿಯರ್‌ (5-12 ವರ್ಷ), ಜೂನಿಯರ್‌ (12-20 ವರ್ಷ), ಸೀನಿಯರ್‌ (21ರ ನಂತರ) ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಚಿತ್ರ ನಿರ್ಮಾಪಕ ಮಹೇಂದ್ರ ಮುನ್ನೋತ್‌ ಸಂಜೆಯ ವೇದಿಕೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ರಂಗಕಲಾವಿದ ನೀಲಕಂಠ ಅಡಿಗರು ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ಕ್ಷೇತ್ರದ ಸಾಧಕರಿಗೆ ಕರುನಾಡ ಕಲಾಕೌಸ್ತುಭ, ಕರುನಾಡ ಕಲಾಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಎಲ್ಲಿ?: ಕೇಶವಕಲ್ಪ ನೃತ್ಯಶಾಲೆ, ನಂ.9, ಲಿಂಕ್‌ರೋಡ್‌ ಬಸ್‌ಸ್ಟಾಪ್‌ ಹಿಂಭಾಗ, ಬಿಗ್‌ಬಜಾರ್‌ ಹತ್ತಿರ, ಮಲ್ಲೇಶ್ವರ
ಯಾವಾಗ?: ಏ.29, ಭಾನುವಾರ ಬೆ.9-8
ಹೆಚ್ಚಿನ ವಿವರ: 9972560442, 9341236504

Advertisement

Udayavani is now on Telegram. Click here to join our channel and stay updated with the latest news.

Next