Advertisement
2020 ರಲ್ಲಿ, ಜಮ್ಮು ಮತ್ತು ಕಾಶ್ಮೀರದ ಸಹೋದರರು ತಮ್ಮ ತಂದೆಯನ್ನು ಕಳೆದುಕೊಂಡಾಗ, ವಿಕ್ರಾಂತ್ ಅವರು ವೃತ್ತಿಪರ ಕ್ರಿಕೆಟಿಗನಾಗುವ ತನ್ನ ಕನಸನ್ನು ತ್ಯಾಗ ಮಾಡಿ ಕುಟುಂಬದ ವ್ಯವಹಾರವನ್ನು ವಹಿಸಿಕೊಂಡರು. ವಿಕ್ರಾಂತ್ ಸ್ವತಃ ವೇಗದ ಬೌಲರ್ ಆಗಬೇಕೆಂಬ ಹಂಬಲ ಹೊಂದಿದ್ದರು, ರಾಜ್ಯದ ವಿಶ್ವವಿದ್ಯಾಲಯ ಮಟ್ಟದಲ್ಲಿಯೂ ಆಡಿದ್ದರು.
Related Articles
Advertisement
ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ವಿವ್ರಾಂತ್, ತನ್ನ ಎಲ್ಲಾ ಯಶಸ್ಸಿಗೆ ತನ್ನ ಸಹೋದರನಿಗೆ ಸಲ್ಲುತ್ತದೆ. ಹರಾಜಿನಲ್ಲಿ ಮಾರಾಟವಾದ ತಕ್ಷಣ ಸಹೋದರ ಮತ್ತು ತಾಯಿಗೆ ಕರೆ ಮಾಡಿ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದೇನೆ ಎಂದರು.
ಯುವರಾಜ್ ಫ್ಯಾನ್: ವಿವ್ರಾಂತ್ ಅವರು ವಿಶ್ವಕಪ್ ವಿಜೇತ ಆಲ್ ರೌಂಡರ್ ಯುವರಾಜ್ ಸಿಂಗ್ ಅವರ ದೊಡ್ಡ ಅಭಿಮಾನಿ. ವಿವ್ರಾಂತ್ ಅವರು ಹಿಂದೆ ಜಮ್ಮು ಕಾಶ್ಮೀರ ಕ್ರಿಕೆಟ್ ನೊಂದಿಗೆ ಕೆಲಸ ಮಾಡಿದ ಇರ್ಫಾನ್ ಪಠಾಣ್ ಅವರಿಂದಲೂ ಪ್ರಭಾವಿತರಾಗಿದ್ದಾರೆ ಎಂದು ಹೇಳಿದರು.
“ನಾನು ಬಾಲ್ಯದಿಂದಲೂ ಯುವರಾಜ್ ಅವರನ್ನು ಫಾಲೋ ಮಾಡಿ ಬರುತ್ತಿದ್ದೇನೆ; ಅವರು ಪಾಲಂನಲ್ಲಿ (ದೆಹಲಿ) ಆಡುತ್ತಿದ್ದಾಗ ಒಮ್ಮೆ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು ಮತ್ತು ನಾನು ಅವರೊಂದಿಗೆ ಫೋಟೋ ಕ್ಲಿಕ್ಕಿಸಿದೆ” ಎಂದು ಹೆಮ್ಮೆಯಿಂದ ಹೇಳುತ್ತಾರೆ ವಿವ್ರಾಂತ್.
ನವೆಂಬರ್ ನಲ್ಲಿ ವಿಜಯ್ ಹಜಾರೆ ಪಂದ್ಯದಲ್ಲಿ 6 ಸಿಕ್ಸರ್‌ಗಳು ಮತ್ತು 18 ಬೌಂಡರಿಗಳನ್ನು ಬಾರಿಸುವ ಮೂಲಕ ಕೇವಲ 124 ಎಸೆತಗಳಲ್ಲಿ ಔಟಾಗದೆ 154 ರನ್ ಗಳಿಸಿದ್ದ ವಿವ್ರಾಂತ್ ಐಪಿಎಲ್ ನ ಹರಾಜಿನಲ್ಲಿ ಗಮನ ಸೆಳೆದಿದ್ದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ವಿವ್ರಾಂತ್ 8 ಪಂದ್ಯಗಳಲ್ಲಿಒಂದು ಶತಕ ಮತ್ತು ಎರಡು ಅರ್ಧಶತಕ ಸೇರಿದಂತೆ 395 ರನ್ ಗಳಿಸಿದ್ದರು.