Advertisement

Vitla; ಕೋಡಪದವು ಶಾಲೆಯಲ್ಲಿ ಕಳವಿಗೆ ಯತ್ನ

01:07 PM Jan 08, 2024 | Team Udayavani |

ವಿಟ್ಲ: ಕೋಡಪದವು ಶಾಲೆಯ ದಾಸ್ತಾನು ಕೊಠಡಿ ಮತ್ತು ಮುಖ್ಯ ಶಿಕ್ಷಕರ ಕೊಠಡಿ ಮುರಿದು ಕಳವಿಗೆ ಯತ್ನ ನಡೆದಿದ್ದು ಸ್ಥಳಕ್ಕೆ ವಿಟ್ಲ ಪೋಲಿಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

Advertisement

ಶತಮಾನದ ಹೊಸ್ತಿಲಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಶಾಲೆ ಕೋಡಪದವು ಇಲ್ಲಿನ ಆಹಾರ ಸಾಮಗ್ರಿಗಳ ದಾಸ್ತಾನು ತುಂಬಿರುವ ಕೊಠಡಿ ಹಾಗೂ ಮುಖ್ಯ ಶಿಕ್ಷಕರ ಕೊಠಡಿಯನ್ನು ಕಳ್ಳರು ಬೀಗ ಮುರಿದು ಕಳವಿಗೆ ಯತ್ನಿಸಿರುವುದು ಬೆಳಕಿಗೆ ಬಂದಿರುತ್ತದೆ.

ದಾಸ್ತಾನು ಕೊಠಡಿಯ ಬೀಗವನ್ನು ಮುರಿದು ಕೊಂಡು ಹೋಗಿರುತ್ತಾರೆ. ಅಲ್ಲಿ ಆಹಾರ ಸಾಮಗ್ರಿಗಳು ಇರುವುದನ್ನು ಕಂಡು ಮುಖ್ಯ ಶಿಕ್ಷಕರ ಕೊಠಡಿಯನ್ನು ಮುರಿದಿರುತ್ತಾರೆ. ಇಲ್ಲಿ ಮುಂದಿನ ತಿಂಗಳು ಉದ್ಘಾಟನೆಗೊಳ್ಳಲಿರುವ ಎರಡು ಕೊಠಡಿಗಳಿಗೆ ಶಾಲಾ ಹಿತೈಷಿಗಳು ದಾನಿಗಳು ನೀಡಿರುವ ಬೆಲೆಬಾಳುವ ವಸ್ತುಗಳು, ಟಿ.ವಿ, ಕಂಪ್ಯೂಟರ್ ಗಳಿದ್ದು ಕಳವಿಗೆ ಪ್ರಯತ್ನಿಸಿರುತ್ತಾರೆ.

ವಾಹನದ ಅಥವಾ ಇನ್ನಿತರ ಶಬ್ದ ಕೇಳಿ ಕಳ್ಳರು ಪರಾರಿಯಾಗಿರಬಹುದು ಎಂಬ ಸಂಶಯ ಮೂಡುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next