Advertisement
ಈಗ 48 ವರ್ಷದ ವಿಶ್ವನಾಥನ್ ಆನಂದ್ 2014ರಲ್ಲಿ ತನಗಿಂತ ಬಹಳ ಕಿರಿಯ ಹುಡುಗ ನಾರ್ವೆಯ ಮ್ಯಾಗ್ನಸ್ ಕಾಲ್ಸìನ್ ವಿರುದ್ಧ ಸೋತಾಗ ಅವರ ಚೆಸ್ ಭವಿಷ್ಯ ಮುಗಿಯಿತು ಎಂದು ಭಾವಿಸಿದ್ದರು. ಆಗಲೂ ಅವರು ನಿವೃತ್ತಿಯ ತೀರ್ಮಾನ ತೆಗೆದುಕೊಂಡಿರಲಿಲ್ಲ. ಕ್ರೀಡಾರಂಗದ ಮಟ್ಟಿಗೆ ವೃದ್ಧಾಪ್ಯವೆಂದೇ ಭಾವಿಸಲಾಗಿರುವ 48ರ ವಯಸ್ಸಿನಲ್ಲಿ ಆನಂದ್ ಗೆದ್ದಿರುವುದು ಚೆಸ್ ಜಗತ್ತಿನ ಅಚ್ಚರಿಗಳಲ್ಲೊಂದೆಂದು ಹೊಗಳಲಾಗಿದೆ.
Related Articles
2000-ವಿಶ್ವ ಚಾಂಪಿಯನ್
2007-ವಿಶ್ವಚಾಂಪಿಯನ್
2008-ವಿಶ್ವ ಚಾಂಪಿಯನ್
2010-ವಿಶ್ವ ಚಾಂಪಿಯನ್
2012-ವಿಶ್ವ ಚಾಂಪಿಯನ್
2003-ರಾಪಿಡ್ ವಿಶ್ವ ಚಾಂಪಿಯನ್
2017-ರಾಪಿಡ್ ವಿಶ್ವ ಚಾಂಪಿಯನ್
Advertisement
ದಾಖಲೆಗಳು, ಗೌರವಗಳುಮೊದಲ ಗ್ರ್ಯಾನ್‌ಮಾಸ್ಟರ್-1988ರಲ್ಲಿ ಆನಂದ್‌ಗೆ ಭಾರತದ ಮೊದಲ ಚೆಸ್ ಗ್ರ್ಯಾನ್‌ಮಾಸ್ಟರ್ ಹೆಗ್ಗಳಿಕೆ.
2800 ಅಂಕ-ಚೆಸ್‌ನಲ್ಲಿ 2800 ಇಎಲ್‌ಒ ಅಂಕಗಳನ್ನು ದಾಟಿದ ವಿಶ್ವದ ನಾಲ್ಕನೇ ಆಟಗಾರ ವಿಶ್ವ ನಂ.1-ಇಪ್ಪತ್ತೂಂದು ತಿಂಗಳ ತಿಂಗಳ ಕಾಲ ಚೆಸ್ ವಿಶ್ವ ನಂ.1 ಆಟಗಾರ. ವಿಶ್ವದಲ್ಲೇ 6ನೇ ಗರಿಷ್ಠ ಅವಧಿ.
ರಾಪಿಡ್ -ಬ್ಲೆ„ಂಡ್ ದಿಗ್ಗಜ: ಅಂಬೆರ್ ಕೂಟದ ಬ್ಲೆ„ಂಡ್‌ಫೋಲ್ಡ್ ಮತ್ತು ರ್ಯಾಪಿಡ್ ಎರಡೂ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ವಿಶ್ವದ ಮೊದಲಿಗ ಅತಿಶೀಘ್ರ ಜಯ: 2012ರ ವಿಶ್ವಚಾಂಪಿಯನ್‌ಶಿಪ್‌ನ 8ನೇ ಪಂದ್ಯದಲ್ಲಿ ಗೆಲ್ಫಾಂಡ್ ವಿರುದ್ಧ ಕೇವಲ 17 ನಡೆಯಲ್ಲಿ ಗೆದ್ದರು, ಇದು ಚೆಸ್ ಇತಿಹಾಸದ ಅತಿ ಶೀಘ್ರ ಜಯ. ಮೊದಲ ರ್ಯಾಪಿಡ್ ಚಾಂಪಿಯನ್: 2003ರಲ್ಲಿ ಮೊದಲ ರಾಪಿಡ್ ಚೆಸ್ ವಿಶ್ವಚಾಂಪಿಯನ್‌ಶಿಪ್ ನಡೆಯಿತು. ಅದನ್ನು ಆನಂದ್ ಗೆದ್ದರು. ಮೊದಲ ಖೇಲ್ ರತ್ನ: 1991-92ರಲ್ಲಿ ಆರಂಭವಾದ ರಾಜೀವ್ ಖೇಲ್ ರತ್ನಕ್ಕೆ ಆಯ್ಕೆಯಾದ ಮೊದಲ ಕ್ರೀಡಾಪಟು. ಪದ್ಮವಿಭೂಷ ಗೌರವ: 2007ರಲ್ಲಿ ದೇಶದ ಎರಡನೇ ಪ್ರತಿಷ್ಠಿತ ಗೌರವ ಪದ್ಮವಿಭೂಷಣಕ್ಕೆ ಆಯ್ಕೆ. ತಾಯಿಯೇ ಮೊದಲ ಚೆಸ್ ಗುರು
1969ರಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ವಿಶ್ವನಾಥನ್ ಆನಂದ್ ಜನಿಸಿದರು. ಕೇವಲ 6ನೇ ವಯಸ್ಸಿನಲ್ಲೇ ಅವರು ಚೆಸ್ ಕಲಿಕೆ ಆರಂಭಿಸಿದರು. ಅಷ್ಟು ಚಿಕ್ಕ ವಯಸ್ಸಿನಲ್ಲಿ ಅವರಿಗೆ ಚೆಸ್ ಕಲಿಸಿದ್ದು ಯಾರು ಗೊತ್ತಾ? ತಾಯಿ ಸುಶೀಲಾ. ಬಹುತೇಕ ಭಾರತೀಯ ಹೆಣ್ಣುಮಕ್ಕಳಂತೆ ಸುಶೀಲಾ ಅವರು ಗೃಹಿಣಿ ಪಾತ್ರಕ್ಕೆ ಸೀಮಿತವಾಗಿದ್ದವರು. ಅವರು ಆನಂದ್‌ಗೆ ಚೆಸ್‌ನ ಮೊದಲ ಪಾಠ ಮಾಡಿದರು. 2013ರಿಂದ ವೃತ್ತಿಬದುಕಿನ ಹೀನಾಯ ದಿನ
ವಿಶ್ವನಾಥನ್ ಆನಂದ್‌ಗೆ 2013ರಿಂದ ಚೆಸ್ ಕ್ರೀಡೆಯಲ್ಲಿ ಬಹಳ ಇಕ್ಕಟ್ಟಿನ ದಿನಗಳು ಎದುರಾದವು. ಕೇವಲ 23 ವರ್ಷದ ಮ್ಯಾಗ್ನಸ್ ಕಾಲ್ಸìನ್ ಎದುರು ಅವರು ವಿಶ್ವ ಚಾಂಪಿಯನ್ ಪಟ್ಟ ಕಳೆದುಕೊಂಡು ರನ್ನರ್ ಅಪ್ ಎನಿಸಿಕೊಂಡರು. 2014ರಲ್ಲಿ ಮತ್ತೆ ಫೈನಲ್‌ಗೇರಿದರು. ಆಗಲೂ ಫಲಿತಾಂಶ ಪುನರಾವರ್ತನೆಗೊಂಡಿತು. ಆಗ ನೇರವಾಗಿಯೇ ನೀವು ನಿವೃತ್ತಿ ಹೊಂದಬಹುದಲ್ಲ ಎಂಬ ಪ್ರಶ್ನೆ ಕೇಳಿಬಂತು. ಇಲ್ಲ ಮುಂದುವರಿಯುತ್ತೇನೆ ಎಂದು ಹೇಳಿದಾಗ ಚೆಸ್ ಜಗತ್ತು ಅಚ್ಚರಿಗೊಂಡಿತ್ತು. ಅಲ್ಲಿಂದ ನಿರಂತರವಾಗಿ ಸಣ್ಣಪುಟ್ಟ ಕೂಟಗಳಲ್ಲೂ ಸೋಲುತ್ತಾ ಬಂದರು. ಅವರ ಭವಿಷ್ಯ ಮುಗಿದೇ ಹೋಯಿತು ಎಂಬ ಘಟ್ಟದಲ್ಲಿ ರಾಪಿಡ್‌ನಲ್ಲಿ ಗೆದ್ದರು. ಏನಿದು ರಾಪಿಡ್ ವಿಶ್ವಚಾಂಪಿಯನ್‌ಶಿಪ್?
ಚೆಸ್ ಅನ್ನು ಅತ್ಯಂತ ಜನಪ್ರಿಯಗೊಳಿಸುವುದಕ್ಕೆ ಬಂದ ಮಾದರಿಯಿದು. ಅತ್ಯಂತ ವೇಗವಾಗಿ ನಡೆಗಳನ್ನು ನಡೆಸಬೇಕು. ಒಬ್ಬ ಆಟಗಾರನಿಗೆ ಒಟ್ಟಾರೆ ಪಂದ್ಯದಲ್ಲಿ ಕೇವಲ 15 ನಿಮಿಷ ಅವಧಿಯಿರುತ್ತದೆ. ಪ್ರತಿನಡೆಗೆ ಹೆಚ್ಚುವರಿ 10 ಸೆಕೆಂಡ್‌ಗಳಿರುತ್ತವೆ. ಇಷ್ಟೇ ಅವಧಿಯಲ್ಲಿ ಪಂದ್ಯವನ್ನು ಜಯಿಸಬೇಕು. 40 ಗಂಟೆ ರಸ್ತೆ ಪ್ರಯಾಣ, ನಂತರ ವಿಶ್ವ ಕಿರೀಟ
2010ರ ವಿಶ್ವ ಚಾಂಪಿಯನ್‌ಶಿಪ್ ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯಿತು. ಆ ಕೂಟದಲ್ಲಿ ಆನಂದ್ ಗೆದ್ದರು. ಅದಕ್ಕೂ ಮೊದಲು ಅವರು ಅತ್ಯಂತ ದುಸ್ತರ ಪರಿಸ್ಥಿತಿ ಎದುರಿಸಿದರು. ಐಸ್‌ಲ್ಯಾಂಡ್‌ನಲ್ಲಿ ಜ್ವಾಲಾಮುಖೀಯೆದ್ದು ಅದು ಇಡೀ ಯುರೋಪ್‌ನಲ್ಲಿ ಬಿಕ್ಕಟ್ಟಿನ ಸ್ಥಿತಿ ನಿರ್ಮಿಸಿತು. ಆದ್ದರಿಂದ ಅವರ ವಿಮಾನ ಟಿಕೆಟ್ ರದ್ದಾಗಿ ಫ್ರಾಂಕ್‌ಫರ್ಟ್‌ನಲ್ಲೇ ಉಳಿಯಬೇಕಾಯಿತು. ಕಡೆಗೆ ರಸ್ತೆ ಪ್ರಯಾಣದ ನಿರ್ಧಾರ ಮಾಡಿ ಸತತ 40 ಗಂಟೆ ಪ್ರಯಾಣಿಸಿ ಬಲ್ಗೇರಿಯಾ ತಲುಪಿದರು. ಏ.19ರಿಂದ ಆರಂಭವಾಗಬೇಕಾದ ಪಂದ್ಯ 20ಕ್ಕೆ ಆರಂಭವಾಯಿತು. ಆದರೂ ಅವರು ಪಟ್ಟುಬಿಡದೇ ಆಡಿ ಕಿರೀಟ ಗೆದ್ದರು.