Advertisement

WTT Championship: ಕ್ವಾರ್ಟರ್‌ ಫೈನಲ್‌ನಲ್ಲಿ ಎಡವಿದ ಮಣಿಕಾ ಬಾತ್ರಾ

12:11 AM Oct 28, 2024 | Team Udayavani |

ಹೊಸದಿಲ್ಲಿ: ಡಬ್ಲ್ಯುಟಿಟಿ ಚಾಂಪಿಯನ್‌ಶಿಪ್‌ ವನಿತಾ ಸಿಂಗಲ್ಸ್‌ನಲ್ಲಿ ಮಣಿಕಾ ಬಾತ್ರಾ ಅವರ ಓಟ ಕ್ವಾರ್ಟರ್‌ ಫೈನಲ್‌ನಲ್ಲಿ ಕೊನೆಗೊಂಡಿದೆ. ವಿಶ್ವದ 30ನೇ ರ್‍ಯಾಂಕ್‌ ಆಟಗಾರ್ತಿ ಮಣಿಕಾ ಅವರನ್ನು ಚೀನದ ಕ್ವಿಯಾನ್‌ ತಿಯಾನ್ಯಿ 11-8, 11-8, 12-10 ಅಂತರದಿಂದ ಮಣಿಸಿದರು.

Advertisement

ಮಣಿಕಾ ಬಾತ್ರಾ ಡಬ್ಲ್ಯುಟಿಟಿ ಚಾಂಪಿಯನ್‌ಶಿಪ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದರು. ಇಬ್ಬರೂ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಏರುಪೇರಿನ ಫ‌ಲಿತಾಂಶ ದಾಖಲಿಸಿದ್ದರು. ಮಣಿಕಾ ಬಾತ್ರಾ ರೊಮೇನಿಯಾದ ಬರ್ನಾಡೆಟ್‌ ಝೋಕ್ಸ್‌ ವಿರುದ್ಧ ಹಾಗೂ ಕ್ವಿಯಾನ್‌ ತಿಯಾನ್ಯಿ ಅಗ್ರ ಶ್ರೇಯಾಂಕದ ಯಿದಿ ವಾಂಗ್‌ ವಿರುದ್ಧ ಜಯ ಸಾಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next