Advertisement
ಜವುಳಿ ಮಳಿಗೆಗಳು ಮತ್ತೆ ತೆರೆದಿವೆ. ಹೊಸ ಹೊಸ ಬಟ್ಟೆಗಳ ಖರೀದಿಗೆ ಅವಕಾಶ ಲಭಿಸಿದೆ. ಸುಮಾರು ಎರಡು ತಿಂಗಳಿನ ಅಂತರದ ಬಳಿಕ ಖರೀದಿಗೆ ಅವಕಾಶ ಸಿಕ್ಕಿರುವುದರಿಂದ ಸಹಜವಾಗಿಯೇ ಜನದಟ್ಟಣೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಯಾವೆಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲಿದೆ ಮಾಹಿತಿ.
ಮಾಸ್ಕ್ ಧರಿಸುವುದನ್ನು ಮರೆಯದಿರಿ. ಪ್ರವೇಶ ದ್ವಾರದಲ್ಲೇ ಸ್ಯಾನಿಟೈಸರ್‌ಗಳನ್ನು ಇಡಲಾಗಿದೆ. ಒಳಗಡೆ ಹೋಗುವಾಗ ಮತ್ತು ಹೊರಗೆ ಬರುವಾಗ ಅದನ್ನು ಬಳಸಿ. ಶೀತ, ಕೆಮ್ಮು ಇರುವ ಗ್ರಾಹಕರು ಬಟ್ಟೆ ಮಳಿಗೆಗಳಿಗೂ ಹೋಗಬಾರದು. ಹೋದರೂ ಅಲ್ಲಿಂದ ಆಸ್ಪತ್ರೆಗೆ ಹೋಗುವಂತೆ ಮಳಿಗೆಯಲ್ಲಿರುವವರೇ ಮನವಿ ಮಾಡಿ ಕಳುಹಿಸುತ್ತಾರೆ. ಈ ನಿಯಮವನ್ನು ಅಂಗಡಿಗಳಲ್ಲಿ ಸಿಬಂದಿ ಸಹಿತ ಎಲ್ಲರೂ ಪಾಲಿಸುತ್ತಾರೆ.
Related Articles
Advertisement
ಬಟ್ಟೆಗಳನ್ನು ಸ್ಪರ್ಶಿಸಲು ಅವಕಾಶವಿದ್ದರೂ ಸ್ಯಾನಿಟೈಸರ್ ಬಳಸಿ ಸ್ಪರ್ಶಿಸುವುದು ಕಡ್ಡಾಯವಾಗಿದೆ. ಈಗ ಬಹುತೇಕ ಕಡೆಗಳಲ್ಲಿ ಒಮ್ಮೆ ಖರೀದಿಸಿ ಕೊಂಡುಹೋದ ಬಟ್ಟೆಗಳನ್ನು ಮತ್ತೆ ಹಿಂದಿರುಗಿಸಲು ಅವಕಾಶವಿರುವುದಿಲ್ಲ. ಆದುದರಿಂದ ಖರೀದಿಸುವಾಗಲೇ ಹೆಚ್ಚಿನ ಜಾಗರೂಕತೆ ವಹಿಸಿ.
ಬಟ್ಟೆಗಳನ್ನು ಧರಿಸಿ ನೋಡುವ ಸಲುವಾಗಿ ಇರುತ್ತಿದ್ದ ಟ್ರಯಲ್ ರೂಂಗಳನ್ನು ಹೆಚ್ಚಿನ ಕಡೆಗಳಲ್ಲಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ದೂರದಲ್ಲಿಯೇ ಕನ್ನಡಿಯಲ್ಲಿ ಬಟ್ಟೆ ಹಿಡಿದು ತೋರಿಸಲಾಗುತ್ತದೆ. ಹೆಚ್ಚಿನ ಕಡೆ ಲಿಫ್ಟ್ ಮತ್ತು ಎಸಿ ಬಳಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ನಿಮಗೆ ಏನಾದರೂ ಸಂಶಯ, ಪ್ರಶ್ನೆಗಳಿದ್ದರೆ ಈ ನಂಬರಿಗೆ ವಾಟ್ಸಪ್ ಮಾಡಿ.9148594259