ಪುಣೆ: ಪುಣೆಯ ಬಹು ಭಾಷಾ ಸಾಹಿತಿ, ಕವಿ ಪಾಂಗಾಳ ವಿಶ್ವ ನಾಥ ಶೆಟ್ಟಿ ಅವರು ಆ. 15 ರಂದು 72 ನೇ ಸ್ವಾತಂತ್ರೊÂàತ್ಸವದಂದು ಮಹಾರಾಷ್ಟ್ರದ ರಾಜ್ಯಪಾಲರಾದ ವಿದ್ಯಾಸಾಗರ ರಾವ್ ಅವರಿಂದ ಕನ್ನಡ ಭಾಷೆಯ ಸಾಹಿತಿಯ ನಿಟ್ಟಿನಲ್ಲಿ ಗೌರವವನ್ನು ಸ್ವೀಕರಿಸಿದರು.
ಭಾರತೀಯ ವಿಚಾರ ಸಾಧನಾ ಪುಣೆ ಇವರ ಪ್ರಕಾಶನದಲ್ಲಿ ವಿಶ್ವನಾಥ ದಿನಕರ ನರವಣೆ ಅವರು ಸಂಪಾದಿಸಿದ 16 ಭಾಷೆಗಳ ಶಬ್ದಕೋಶದ ಮೂರನೇ ಸಂಸ್ಕರಣದ ಪ್ರಕಾಶನವು ಆ. 15 ರಂದು ಪುಣೆ ರಾಜಭವನದಲ್ಲಿ ನೆರವೇರಿತು. ಮಹಾರಾಷ್ಟ್ರದ ಘನವೆತ್ತ ರಾಜ್ಯಪಾಲರಾದ ವಿದ್ಯಾಸಾಗರ ರಾವ್ ರವರ ಅಮೃತ ಹಸ್ತದಿಂದ ಶಬ್ದಕೋಶದ ಬಿಡುಗಡೆ ನೆರವೇರಿತು.
ಈ ಸಂದರ್ಭ ವಿವಿಧ ಭಾಷೆಗಳ ಉತ್ತಮ ಸಾಹಿತಿ, ಕವಿ, ಲೇಖಕರನ್ನು ಆಮಂತ್ರಿಸಿದ್ದು ರಾಜ್ಯಪಾಲರಿಂದ ಗೌರವ ನೀಡಲಾಯಿತು. ಪುಣೆಯ ಹಿರಿಯ ಸಾಹಿತಿ, ಕವಿ, ಕಥೆಗಾರ ಪಾಂಗಾಳ ವಿಶ್ವನಾಥ ಶೆಟ್ಟಿ ಅವರನ್ನು ಕನ್ನಡ ಭಾಷೆಯ ಪ್ರತಿನಿಧಿಯಾಗಿ ಆಮಂತ್ರಿಸಿದ್ದು ಪುಷ್ಪಗುತ್ಛ ಹಾಗೂ ಗ್ರಂಥವೊಂದನ್ನು ನೀಡಿ ಗೌರವಿಸಿದರು.
ವಿಶ್ವನಾಥ ಶೆಟ್ಟಿ ಅವರು ಕನ್ನಡ, ತುಳು, ಮರಾಠಿ ಭಾಷೆಗಳಲ್ಲಿ ಕಥೆ, ಕವನ, ನಾಟಕ, ವೈಚಾರಿಕ ಲೇಖನಗಳನ್ನೂ ಬರೆದಿರುವುದಲ್ಲದೆ ಇತ್ತೀಚಿಗೆ ಸಂತ ಜ್ಞಾನೇಶ್ವರ ಮಹಾರಾಜರ ಜೀವನ ಚರಿತ್ರೆಯನ್ನು ಕನ್ನಡದಲ್ಲಿ ಬರೆದಿರುತ್ತಾರೆ. ಯಕ್ಷಗಾನ ಕಲಾವಿದರೂ ಆಗಿರುವ ಅವರು ಶ್ರೀ ಅಯ್ಯಪ್ಪ ಯಕ್ಷಗಾನ ಮಂಡಳಿಯ ಅಧ್ಯಕ್ಷರಾಗಿಯೂ ಕಲಾ ಸೇವೆ ಸಲ್ಲಿಸುತ್ತಿ¨ªಾರೆ. ಮರಾಠಿ ಭಾಷೆಯಲ್ಲಿ ಪಹಾಟ… ಎಂಬ ಕವನಸಂಕಲವನ್ನೂ ಪ್ರಕಟಿಸಿದ್ದಾರೆ.
ವರದಿ: ಕಿರಣ್ ಬಿ. ರೈ ಕರ್ನೂರು