Advertisement

ವಿಷ್ಣುವರ್ಧನ್‌ 68ನೇ ಜನ್ಮದಿನ: ಮಕ್ಕಳಿಗೆ ಪುಸ್ತಕ ವಿತರಣೆ

11:49 AM Sep 21, 2017 | |

ದೊಡ್ಡಬಳ್ಳಾಪುರ: ನಗರದ ದರ್ಗಾಜೋಗಹಳ್ಳಿಯಲ್ಲಿ ವಿಷ್ಣುವರ್ಧನ್‌ 68ನೇ ಹುಟ್ಟುಹಬ್ಬದ ಅಂಗವಾಗಿ ಹೃದಯವಂತ ಡಾ.ವಿಷ್ಣುವರ್ಧನ್‌ ಅಭಿಮಾನಿಗಳ ಸಂಘದ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣಾ ಹಮ್ಮಿಕೊಳ್ಳಲಾಗಿತ್ತು.

Advertisement

ಈ ಸಂದರ್ಭದಲ್ಲಿ ದರ್ಗಾಜೋಗಹಳ್ಳಿ ಗ್ರಾಮಪಂಚಾಯ್ತಿ ಅಧ್ಯಕ್ಷ ನಾಗೇಶ್‌ ಮಾತನಾಡಿ, ಕಪ್ಪು ಬಿಳುಪು ಸಿನಿಮಾಗಳಲ್ಲಿ ಮನರಂಜನೆ ಜೊತೆಗೆ ಜೀವನಕ್ಕೆ ಅಗತ್ಯವಾಗಿರುವ ಸಾಕಷ್ಟು ಮೌಲ್ಯಗಳನ್ನು ನೀಡಲಾಗುತ್ತಿತ್ತು. ಆ ಸಿನಿಮಾಗಳ ನಾಯಕ ನಟರು ಪ್ರತಿಯೊಬ್ಬ ಮನುಷ್ಯನ ಜೀವನಕ್ಕೂ ಅತ್ಯಂತ ಹತ್ತಿರವಾಗುತ್ತಿದ್ದ. ಆದ್ದರಿಂದಲೇ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಮಾನಸಿಕವಾಗಿ ಸಾಕಷ್ಟು ಅಭಿಮಾನಿಗಳ ಮನಸ್ಸಿನಲ್ಲಿ ಚಿರವಾಗಿ ಬದುಕಿದ್ದಾರೆ ಎಂದು ಹೇಳಿದರು. 

ವಿಷ್ಣುವರ್ಧನ್‌ರವರು ಅತ್ಯಂತ ಉತ್ತಮ ವ್ಯಕ್ತಿತ್ವ ಹೊಂದಿರುವವರು. ಬದುಕಿದ್ದ ಅಷ್ಟೂ ದಿನದಲ್ಲಿ ಅವರು
ಯಾವೊಬ್ಬರಿಗೂ ನೋವುಂಟುಮಾಡಲಿಲ್ಲ. ಸದಾ ಎಲ್ಲರೊಂದಿಗೆ ಸಂತೋಷದಿಂದ ಬದುಕಿದವರು. ಅವರ ಜೀವನ ಶೈಲಿಯನ್ನು ಈ ಕಾಲದ ಎಲ್ಲ ಯುವಕರೂ ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹೃದಯವಂತ ಡಾ.ವಿಷ್ಣುವರ್ಧನ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಲಕ್ಷ್ಮಣ ಗ್ರಾ.ಪಂ ಸದಸ್ಯ ಪ್ರಕಾಶ್‌, ದರ್ಗಾಜೋಗಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ನಾಗಭೂಷಣ್‌, ಸದಸ್ಯರಾದ ರಮೇಶ್‌, ಶ್ರೀನಿವಾಸ್‌, ಹೃದಯವಂತ ಡಾ.ವಿಷ್ಣುವರ್ಧನ್‌ ಅಭಿಮಾನಿಗಳ ಸಂಘದ ಕೇಶವ, ಕೆಂಪರಾಜು, ಚೇತನ್‌, ಮುನಿರಾಜು, ನಟರಾಜು
ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next