Advertisement

ಗಂಟೆಗೆ 1,078 ಕಿ.ಮೀ. ವೇಗದಲ್ಲಿ ಸಾಗುವ ಹೈಪರ್‌ಲೂಪ್‌

07:54 PM Aug 26, 2021 | Team Udayavani |

ನವದೆಹಲಿ: ಇತ್ತೀಚೆಗೆ, ಗ್ಯಾಲಾಕ್ಟಿಕ್‌ ಎಂಬ ಬಾಹ್ಯಾಕಾಶ ನೌಕೆಯ ಮೂಲಕ ಬಾಹ್ಯಾಕಾಶ ಪ್ರವಾಸ ಕೈಗೊಂಡು ಸುದ್ದಿಯಾಗಿದ್ದ ವರ್ಜಿನ್‌ ಕಂಪನಿ, ತನ್ನ ಮಹದೋದ್ದೇಶದ ಮತ್ತೊಂದು ಯೋಜನೆಯಾದ ವರ್ಜಿನ್‌ ಹೈಪರ್‌ಲೂಪ್‌ನ ರೂಪುರೇಷೆಗಳು, ಅನುಕೂಲಗಳು ಹೇಗಿರುತ್ತವೆ ಎಂಬುದರ ಬಗ್ಗೆ ಪೂರ್ವಭಾವಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.

Advertisement

21ನೇ ಶತಮಾನದ ಅತ್ಯಂತ ವೇಗದ ಸಾರಿಗೆ ವ್ಯವಸ್ಥೆ ಇದಾಗಿರಲಿದ್ದು, ಈ ವ್ಯವಸ್ಥೆಯಡಿ ಜನರು ಗಂಟೆಗೆ 1,078 ಕಿ.ಮೀ. ವೇಗದಲ್ಲಿ ಪ್ರಯಾಣಿಸಿ, ಅತಿ ದೂರದ ನಗರಗಳನ್ನೂ ಕೆಲವೇ ನಿಮಿಷಗಳಲ್ಲಿ ತಲುಪಬಹುದು. ಇಂದಿನ ಅತಿ ಹೆಚ್ಚು ವೇಗದಲ್ಲಿ ಸಾಗುವ ರೈಲುಗಳಿಗೆ ಹೋಲಿಸಿದರೆ ಇದರ ವೇಗ 10 ಪಟ್ಟು ಹೆಚ್ಚು ಎಂದು ಸಂಸ್ಥೆ ಹೇಳಿದೆ. ಅಂದಹಾಗೆ, ಸುಮಾರು 2-3 ವರ್ಷಗಳ ಹಿಂದೆಯೇ ಹೈಪರ್‌ಲೂಪ್‌ ಪರಿಕಲ್ಪನೆಯನ್ನು ಈ ಕಂಪನಿ ಅನಾವರಣಗೊಳಿಸಿತ್ತು. ಈಗ, ಅದರ ವಿನ್ಯಾಸದ ಬಗ್ಗೆ ಒಂದು ಪೂರ್ವಭಾವಿ ಪರಿಕಲ್ಪನೆಯನ್ನು ಬಿತ್ತುವ ಸಲುವಾಗಿ ಈ ವಿಡಿಯೋ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ:ನಾವು ವಿಕೆಂಡ್ ಕರ್ಫ್ಯೂ ಪಾಲಿಸಲ್ಲ, ವ್ಯಾಪಾರ ನಡೆಸುತ್ತೇವೆ : ಸರಕಾರಕ್ಕೆ HKCCI ಎಚ್ಚರಿಕೆ

ವಿಡಿಯೋದಲ್ಲಿ, ಹೈಪರ್‌ಲೂಪ್‌ ಸಾರಿಗೆ ವ್ಯವಸ್ಥೆಯು ಒಂದು ಸುರಂಗವಿರುವ ಮೇಲ್ಸೇತುವೆ ಮೂಲಕ ಹಾದು ಹೋಗುವುದಾಗಿ ತೋರಿಸಲಾಗಿದೆ. ಪಾಡ್‌ಗಳ (ಪ್ರಯಾಣಿಕರು ಕುಳಿತುಕೊಳ್ಳುವ ಬೋಗಿ) ವಿನ್ಯಾಸ, ಅದರಲ್ಲಿನ ಆಸನ ವ್ಯವಸ್ಥೆ, ಸ್ಟೇಷನ್‌ಗಳ ಮಾದರಿ, ಅತಿ ವೇಗವಾಗಿ ಸಾಗುವಾಗ ಆಗುವ ಅನುಭವಗಳನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಜಾರಿಯಾಗುವ ಸಾಧ್ಯತೆ
ಭಾರತದಲ್ಲಿ ಪುಣೆ- ಮುಂಬೈ ನಡುವೆ ಹೈಪರ್‌ಲೂಪ್‌ ಸಂಚಾರ ಸ್ಥಾಪನೆಗೆ ಕೇಂದ್ರ ಸರ್ಕಾರ ಈ ಹಿಂದೆಯೇ ಒಪ್ಪಿಗೆ ನೀಡಿತ್ತು. ಆದರೆ, ಕಾಮಗಾರಿ ಇನ್ನೂ ಶುರುವಾಗಿಲ್ಲ. ಈ ಎರಡೂ ನಗರಗಳ ನಡುವೆ 140 ಕಿ.ಮೀ. ಅಂತರವಿದ್ದು, ಸಾಮಾನ್ಯವಾಗಿ ಇವೆರಡು ನಗರಗಳ ನಡುವಿನ ಪ್ರಯಾಣಕ್ಕೆ 2.5ರಿಂದ 3 ಗಂಟೆ ಅವಧಿ ತೆಗೆದುಕೊಳ್ಳುತ್ತದೆ. ಹೈಪರ್‌ಲೂಪ್‌ನಡಿ, 25 ನಿಮಿಷಗಳಲ್ಲಿ ಈ ನಗರಗಳ ನಡುವೆ ಸಂಚರಿಸಬಹುದು ಎಂದು ಈ ಹಿಂದೆ ವರ್ಜಿನ್‌ ಸಂಸ್ಥೆ ಪ್ರಕಟಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next