Advertisement

ವೀರೇಶ್‌ ಚಿತ್ರಮಂದಿರದ ಮಾಲೀಕ ವೀರಣ್ಣ ಇನ್ನಿಲ್ಲ

12:40 PM Jun 10, 2017 | |

ಬೆಂಗಳೂರು: ಹಿರಿಯ ಪ್ರದರ್ಶಕ ಹಾಗೂ ವೀರೇಶ್‌ ಮತ್ತು ವಿಶಾಲ್‌ ಚಿತ್ರಮಂದಿರಗಳ ಮಾಲೀಕರಾದ ಆರ್‌. ವೀರಣ್ಣ  (84)ಶುಕ್ರವಾರ ಮೃತಪಟ್ಟಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಕೆ.ವಿ. ಚಂದ್ರಶೇಖರ್‌ ಮತ್ತು ಸುಪ್ರೀಂ ಕೋರ್ಟ್‌ ವಕೀಲರಾದ ಕೆ.ವಿ. ಧನಂಜಯ್‌ ಸೇರಿದಂತೆ ಇಬ್ಬರು ಗಂಡು ಮಕ್ಕಳು ಮತ್ತು ಮೂವರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ವೀರಣ್ಣ ಅವರ ಕಣ್ಣುಗಳನ್ನು ಡಾ. ರಾಜಕುಮಾರ್‌ ಐ ಬ್ಯಾಂಕ್‌ಗೆ ದಾನ ಮಾಡಲಾಗಿದೆ.

Advertisement

ವ್ಯವಸಾಯಗಾರರಾಗಿ, ಪಿ.ಡಬ್ಲೂé.ಡಿ ಗುತ್ತಿಗೆದಾರರಾಗಿದ್ದ ಆರ್‌. ವೀರಣ್ಣನವರು ಕನ್ನಡ ಚಿತ್ರಗಳನ್ನು ಜನರಿಗೆ ತಲುಪಿಸಬೇಕೆನ್ನುವ ಉದ್ದೇಶದಿಂದ 1972ರಲ್ಲಿ ಮಾಗಡಿ ರಸ್ತೆಯಲ್ಲಿ ಶಾಂತಲಾ ಚಿತ್ರಮಂದಿರವನ್ನು ಪ್ರಾರಂಭಿಸಿದರು. 1989ರಲ್ಲಿ ಸಂಪೂರ್ಣ ನವೀಕರಣ ಮಾಡುವುದರ ಜೊತೆಗೆ ವೀರೇಶ್‌ ಚಿತ್ರಮಂದಿರ ಎಂದು ಮರುನಾಮಕರಣ ಮಾಡಿದರು.

ಅದರ ಜೊತೆಗೆ ಮಾಗಡಿ ರಸ್ತೆಯಲ್ಲೇ ರುದ್ರೇಶ್‌ ಚಿತ್ರಮಂದಿರ ನಿರ್ಮಿಸಿದ ಅವರು, ನವೀಕರಣ ಮಾಡುವುದರ ಜೊತೆಗೆ ವಿಶಾಲ್‌ ಚಿತ್ರಮಂದಿರ ಎಂದು ಮರುನಾಮಕರಣ ಮಾಡಿದರು. ಎರಡೂ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವುದರ ಮೂಲಕ ಕನ್ನಡ ಚಿತ್ರಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿರುವುದು ವಿಶೇಷ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಪ್ರದರ್ಶಕ ಸದಸ್ಯರಾಗಿ ಸಕ್ರಿಯ ಸೇವೆ ಸಲ್ಲಿಸಿರುವುದಲ್ಲದೆ, ಹಲವಾರು ಸಂಘ-ಸಂಸ್ಥೆಗಳಲ್ಲಿಯೂ ಅವರು ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು, ಕಾಂಗ್ರೆಸ್‌ ನಾಯಕರಾಗಿ ಗುರುತಿಸಿಕೊಂಡಿದ್ದರು.

ಕನ್ನಡ ಚಿತ್ರರಂಗದಲ್ಲಿ ಸಲ್ಲಿಸದ ಅವರ ಸೇವೆಯನ್ನು ಗುರುತಿಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ತನ್ನ 75ನೇ ವರ್ಷದ ಕನ್ನಡ ವಾಕಿcತ್ರ ಅಮೃತ ಮಹೋತ್ಸವ ಸಮಾರಂಭದಲ್ಲಿ ಗೌರವಿಸಿತು. ಹಾಗೆಯೇ ಭಾರತೀಯ ಚಿತ್ರರಂಗದ 100ರ ಸಂಭ್ರಮಾಚರಣೆ ಸಂದರ್ಭದಲ್ಲಿ ರಾಷ್ಟ್ರಪತಿಗಳಿಂದ ಗೌರವಕ್ಕೆ ಪಾತ್ರರಾಗಿದ್ದರು. ವೀರಣ್ಣ ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಶ್ರದ್ಧಾಂಜಲಿ ಅರ್ಪಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next