Advertisement
ಸಚಿನ್ ತೆಂಡುಲ್ಕರ್ ಶ್ರೀಮಂತ ಕ್ರೀಡಾಪಟುಗಳ ಪೈಕಿ 2ನೇ ಸ್ಥಾನದಲ್ಲಿದ್ದಾರೆ. 63.77 ಕೋಟಿ ರೂ. ಗಳಿಸಿದ ಎಂ.ಎಸ್ .ಧೋನಿ 3ನೇ ಸ್ಥಾನ ಪಡೆದಿದ್ದಾರೆ. ಇನ್ನೂ ಗಮನಾರ್ಹ ಸಂಗತಿಯೆಂದರೆ ರೋಹಿತ್ ಶರ್ಮ (30.82 ಕೋಟಿ ರೂ.), ರವೀಂದ್ರ ಜಡೇಜ (34.58 ಕೋಟಿ ರೂ.), ಆರ್.ಅಶ್ವಿನ್ (34.52 ಕೋಟಿ ರೂ.) ಅವರಂತಹ ಕ್ರಿಕೆಟ್ ತಾರೆಯರನ್ನು ಮೀರಿಸಿ ಪಿ.ವಿ.ಸಿಂಧು ಹಣ ಗಳಿಕೆ ಮಾಡುತ್ತಿರುವುದು!
ಎನಿಸಿಕೊಂಡಿದ್ದ ಧೋನಿ ವಿಶ್ವದಲ್ಲೇ 22ನೇ ಶ್ರೀಮಂತ ಕ್ರೀಡಾಪಟು ಎಂಬ ಮಟ್ಟಕ್ಕೇರಿದ್ದರು. ಆಗ ಅವರ ಗಳಿಕೆ 180 ಕೋಟಿ ರೂ. ಆಸುಪಾಸು. ಆ ಮಟ್ಟಿಗೆ ಇಲ್ಲಿಯವರೆಗೆ ಭಾರತದ ಯಾವುದೇ ಕ್ರೀಡಾಪಟು ಹಣಗಳಿಸಿ. ಅಂತಹ ಧೋನಿಯ ವಾರ್ಷಿಕ ಗಳಿಕೆಯೀಗ 63 ಕೋಟಿ ರೂ.ಗಿಳಿದಿದೆ! ಇವರು ಕಳೆದುಕೊಂಡಿದ್ದನ್ನೆಲ್ಲ ಕೊಹ್ಲಿ ಗಳಿಸುತ್ತಿದ್ದಾರೆ ಎನ್ನುವುದು ಗಮನಾರ್ಹ. ಇನ್ನೂ ಕುಸಿದಿಲ್ಲ ಸಚಿನ್ ಮಾರುಕಟ್ಟೆ
ಸಚಿನ್ ತೆಂಡುಲ್ಕರ್ ತಮ್ಮ ಕ್ರಿಕೆಟ್ ಜೀವನದ ಉತ್ತುಂಗದಲ್ಲಿ ಗರಿಷ್ಠ ಹಣ ಗಳಿಸುವ ಭಾರತೀಯ ಆಟಗಾರರಾಗಿದ್ದರು. ಮುಂದೆ ಆ ಸ್ಥಾನವನ್ನು
ಧೋನಿ ತುಂಬಿದರು. ಇದೀಗ ತೆಂಡುಲ್ಕರ್ ನಿವೃತ್ತಿಯಾಗಿ 4 ವರ್ಷ ಕಳೆದಿದೆ. ಆದರೂ ಅವರ ಜನಪ್ರಿಯತೆ ಕುಸಿದಿಲ್ಲ. ಅವರ ಗಳಿಕೆ 82.50
ಕೋಟಿ ರೂ. ಇದು ಧೋನಿಗಿಂತ ಬಹಳ ಜಾಸ್ತಿ
Related Articles
ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ-ಬಾಲಿವುಡ್ ನಟಿ ಅನುಷ್ಕಾ ಶರ್ಮ ಆರತಕ್ಷತೆ ದಿಲ್ಲಿಯ ಸ್ಟಾರ್ ಹೋಟೆಲ್‌ವೊಂದರಲ್ಲಿ ಶುಕ್ರವಾರ ನಡೆಯಿತು. ಇದರಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಕೊಹ್ಲಿ-ಅನುಷ್ಕಾಗೆ ತಲಾ ಒಂದೊಂದು ಗುಲಾಬಿ ನೀಡಿ ಮಾದರಿಯಾದರು. ಈ ಹಿಂದೊಮ್ಮೆ ದೊಡ್ಡ ಬೊಕೆಗಳನ್ನು ನೀಡಿ ವ್ಯರ್ಥ ಮಾಡುವುದರ ಬದಲು ಪುಸ್ತಕ ನೀಡಿ ಅಥವಾ ಒಂದೊಂದು ಗುಲಾಬಿ ನೀಡಿ
ಸಾಕು ಎಂದು ಮೋದಿ ಹೇಳಿದ್ದರು. ಸ್ವತಃ ತಾವು ಅದನ್ನು ಪಾಲಿಸುವುದರ ಮೂಲಕ ಮಾದರಿಯಾಗಿದ್ದಾರೆ. ಮೋದಿ ಭರ್ಜರಿ ಉಡುಗೊರೆ ನೀಡುತ್ತಾರೆ ಎಂದು ಎಲ್ಲರು ತದೇಕಚಿತ್ತದಿಂದ ಕಾಯುತ್ತಿದ್ದ ವೇಳೆ ಅವರು ನೀಡಿದ ಈ ಕೊಡುಗೆ ವಧೂವರರಿಗೂ ಸೇರಿ ಎಲ್ಲರಿಗೂ ಅಚ್ಚರಿ ಮೂಡಿಸಿತು.
Advertisement