Advertisement

ಟಿ20 ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ನಿವೃತ್ತಿ?: ಏನಿದು ಭವಿಷ್ಯವಾಣಿ

12:43 PM Sep 15, 2022 | Team Udayavani |

ಮುಂಬೈ: 2022 ರ ಟಿ20 ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ಗೆ ನಿವೃತ್ತಿಯನ್ನು ಘೋಷಿಸಬಹುದು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಭವಿಷ್ಯ ನುಡಿದಿದ್ದಾರೆ.

Advertisement

“ಕೊಹ್ಲಿ ಟಿ 20 ವಿಶ್ವಕಪ್ ನಂತರ ನಿವೃತ್ತಿಯಾಗಬಹುದು. ಇತರ ಸ್ವರೂಪಗಳಲ್ಲಿ ಇನ್ನೂ ತುಂಬಾ ಕಾಲ ಆಡಲು ಅವರು ಹಾಗೆ ಮಾಡಬಹುದು. ನಾನು ಅವರಾಗಿದ್ದರೆ, ಭವಿಷ್ಯದ ಬಗ್ಗೆ ಯೋಚಿಸಿ ನಿವೃತ್ತಿ ನಿರ್ಧಾರ ತೆಗೆದುಕೊಳ್ಳುತ್ತಿದ್ದೆ” ಎಂದು ಅಖ್ತರ್ ಹೇಳಿದರು.

ಏಷ್ಯಾ ಕಪ್‌ ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಸೂಪರ್ ಫೋರ್ ಪಂದ್ಯದಲ್ಲಿ ಭಾರತದ ಮಾಜಿ ನಾಯಕ ವಿರಾಟ್ ತಮ್ಮ 71 ನೇ ಅಂತಾರಾಷ್ಟ್ರೀಯ ಶತಕದೊಂದಿಗೆ ಫಾರ್ಮ್‌ ಗೆ ಮರಳಿದರು. ಕೊಹ್ಲಿ ಈ ಪಂದ್ಯಾವಳಿಯಲ್ಲಿ ಐದು ಇನ್ನಿಂಗ್ಸ್ ಗಳಲ್ಲಿ 276 ರನ್‌ಗಳೊಂದಿಗೆ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊಸ ಹೊಮ್ಮಿದರು.

ಮುಂಬರುವ ಐಸಿಸಿ ಟಿ20 ವಿಶ್ವಕಪ್ ಈವೆಂಟ್ ಅಕ್ಟೋಬರ್ 16 ರಿಂದ ನವೆಂಬರ್ 13 ರ ನಡುವೆ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ.

ಇದನ್ನೂ ಓದಿ:‘ಮಾನ್ಸೂನ್‌ ರಾಗ’ ಕಲರ್‌ ಫುಲ್‌ ಪ್ರೀ-ರಿಲೀಸ್‌ ಇವೆಂಟ್‌

Advertisement

ಅಫ್ಘಾನಿಸ್ತಾನ ವಿರುದ್ಧದ ಸೂಪರ್ ಫೋರ್ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಜೊತೆ ಆರಂಭಿಕರಾಗಿ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ ಅಜೇಯ 122 ರನ್ ಬಾರಿಸಿದ್ದರು. 2019ರ ನವೆಂಬರ್ ಬಳಿಕ ಕೊಹ್ಲಿ ಬಾರಿಸಿದ ಮೊದಲ ಶತಕ ಇದಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next