Advertisement

ಕೊಹ್ಲಿ ಭರ್ಜರಿ ದ್ವಿಶತಕ;ಕಪ್ತಾನನ ಇನ್ನೊಂದು ದಾಖಲೆ

11:07 AM Dec 03, 2017 | Team Udayavani |

ಹೊಸದಿಲ್ಲಿ: ಫಿರೋಜ್‌ ಷಾ ಕೋಟ್ಲಾ ಅಂಗಳದಲ್ಲಿ ಪ್ರವಾಸಿ ಶ್ರೀಲಂಕಾ  ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಸರಣಿಯ ಅಂತಿಮ ಪಂದ್ಯದ ಭಾನುವಾರದ 2 ನೇ ದಿನದಾಟ ಲ್ಲಿ ಭಾರತ ತಂಡದ ಕಪ್ತಾನ ವಿರಾಟ್‌ ಕೊಹ್ಲಿ ಭರ್ಜರಿ  ದ್ವಿಶತಕ ಸಿಡಿಸಿ  ಹೊಸ ದಾಖಲೆಗೆ ಭಾಜನರಾಗಿದ್ದಾರೆ.

Advertisement

ಟೆಸ್ಟ್‌ ಕ್ರಿಕೆಟ್‌ನಲ್ಲಿ 6 ದ್ವಿಶತಕ ಸಿಡಿಸಿದ ಮೊದಲ ನಾಯಕ ಎಂಬ ದಾಖಲೆಗೆ ಕೊಹ್ಲಿ ಭಾಜನರಾಗಿದ್ದಾರೆ. ಬ್ರ್ಯಾನ್‌ ಲಾರಾ ಮತ್ತು ಗ್ರೇಮ್‌ ಸ್ಮಿತ್‌ ಅವರ ತಲಾ 5 ಶತಕಗಳ ದಾಖಲೆಯನ್ನು ಮುರಿದಿದ್ದಾರೆ. 

ಸಚಿನ್‌ ತೆಂಡುಲ್ಕರ್‌ ಮತ್ತು ಸೆಹವಾಗ್‌ ಅವರ 6 ದ್ವಿಶತಕ ಸಿಡಿಸಿದ ದಾಖಲೆಗಳನ್ನು ಸರಿಗಟ್ಟಿದ್ದಾರೆ.

ಮೊದಲ ದಿನದಾಟದ ಅಂತ್ಯಕ್ಕೆ 156 ರನ್‌ಗಳಿಸಿದ್ದ ಕೊಹ್ಲಿ ಇಂದು ಆಟ ಮುಂದುವರಿಸಿ  ದ್ವಿಶತಕ ಪೂರ್ಣಗೊಳಿಸಿ ಸಂಭ್ರಮಿಸಿದರು. ಅತ್ಯಮೋಘ ಆಟವಾಡಿದ ಕೊಹ್ಲಿ 243  ರನ್‌ಗಳಿಸಿ ಔಟಾದರು.   ರೊಹಿತ್‌ ಶರ್ಮಾ 65  ರನ್‌ಗಳಿಸಿ ಔಟಾದರು.

ಭಾರತ ಮೊದಲ ಇನ್ನಿಂಗ್ಸನ್ನು 536 ರನ್‌ಗಳಿಗೆ (7 ವಿಕೆಟ್‌) ಡಿಕ್ಲೇರ್‌ ಮಾಡಿಕೊಂಡಿದೆ. 

Advertisement

ಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ ಕಳೆದುಕೊಂಡು 131 ರನ್‌ಗಳಿಸಿದೆ. 
 

ವಾಯುಮಾಲಿನ್ಯ ಅಡ್ಡಿ;ಮಾಸ್ಕ್ ಧರಿಸಿ ಆಟ 

ರಾಷ್ಟ್ರರಾಜಧಾನಿಯ ವಾಯುಮಾಲಿನ್ಯದ ದುಷ್ಪರಿಣಾಮ ಕ್ರೀಡಾಂಗಣದಲ್ಲೂ ಕಂಡು ಬಂದಿದ್ದು ದಟ್ಟ ಹೊಗೆ ತುಂಬಿದ ವಾತಾವರಣ ವಿದ್ದು ಲಂಕಾದ ಕೆಲ ಆಟಗಾರರು ಮಾಸ್ಕ್ ಧರಿಸಿ ಆಟವಾಡುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next