Advertisement
ಭಾರತೀಯ ಕ್ರಿಕೆಟಿಗರ ಫಿಟ್ನೆಸ್ ಪರೀಕ್ಷೆಗೆ ಬಿಸಿಸಿಐ ಯೋ-ಯೋ ಟೆಸ್ಟ್ ಅಳವಡಿಸಿದೆ. ತಂಡದಲ್ಲಿ ಸ್ಥಾನ ಪಡೆಯಬೇಕಾದರೆ ಆಟಗಾರರು ಯೋ-ಯೋ ಪರೀಕ್ಷೆಯಲ್ಲಿ ಉತ್ತೀರ್ಣರಾಗಲೇಬೇಕು. ಗುರುವಾರ (ಆ.24) ವಿರಾಟ್ ಕೊಹ್ಲಿ ಅವರು ಯೋ-ಯೋ ಟೆಸ್ಟ್ ನೀಡಿದ್ದು, 17.2 ಅಂಕ ಪಡೆದಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೇಳಿಕೊಂಡಿದ್ದಾರೆ.
Related Articles
Advertisement
ಯೋ-ಯೋ ಪರೀಕ್ಷೆಯು ಏರೋಬಿಕ್ ಎಂಡ್ಯುರೆನ್ಸ್ ಫಿಟ್‌ನೆಸ್ ಪರೀಕ್ಷೆಯಾಗಿದ್ದು, ಇದು ವೇಗದಲ್ಲಿ 20 ಮೀಟರ್ ಗಳ ಅಂತರದಲ್ಲಿರುವ ಮಾರ್ಕರ್ ಗಳ ನಡುವೆ ಓಡುವುದನ್ನು ಒಳಗೊಂಡಿರುತ್ತದೆ. ವಿರಾಟ್ ಕೊಹ್ಲಿ ಅವರು ಭಾರತದ ನಾಯಕರಾಗಿದ್ದ ಅವಧಿಯಲ್ಲಿ ಈ ಪರೀಕ್ಷೆಯನ್ನು ಪರಿಚಯಿಸಲಾಯಿತು. ಆರಂಭದಲ್ಲಿ ಇದರ ಉತ್ತೀರ್ಣ ಸ್ಕೋರ್ 16.1 ರಷ್ಟಿದ್ದು, ಇದೀಗ ಇದನ್ನು 16.5 ಕ್ಕೆ ಹೆಚ್ಚಿಸಲಾಗಿದೆ.
ಅತೀ ಹೆಚ್ಚು ಅಂಕ ಪಡೆದವರು ಯಾರು?
ಯೋ-ಯೋ ಟೆಸ್ಟ್ ನಲ್ಲಿ ಅತಿ ಹೆಚ್ಚು ಅಂಕ ಪಡೆದ ದಾಖಲೆ ಜಮ್ಮು ಕಾಶ್ಮೀರದ ಬ್ಯಾಟರ್ ಅಹಮದ್ ಬಂಡೇ ಹೆಸರಿನಲ್ಲಿದೆ. 2018ರ ದೇಶಿಯ ಋತುವಿನ ವೇಳೆ ಅವರು 19.4 ಸ್ಕೋರ್ ಮಾಡಿದ್ದರು.
ಎರಡನೇ ಸ್ಥಾನದಲ್ಲಿ ಮತ್ತೋರ್ವ ದೇಶಿಯ ಆಟಗಾರ ಮಯಾಂಕ್ ಡಗಾರ್ ಇದ್ದಾರೆ. 2018ರ ಐಪಿಎಲ್ ವೇಳೆ ಮಯಾಂಕ್ 19.3 ಅಂಕ ಪಡೆದಿದ್ದರು. ಕನ್ನಡಿಗ ಮನೀಶ್ ಪಾಂಡೆ 2017ರಲ್ಲಿ 19.2 ಅಂಕ ಪಡೆದು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ 19 ಅಂಕಗಳೊಂದಿಗೆ ಇದ್ದಾರೆ.