Advertisement

Udupi ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆ ಹೆಚ್ಚಳ

11:18 PM May 28, 2024 | Team Udayavani |

ಉಡುಪಿ: ಕುಂಜಿಬೆಟ್ಟಿನಲ್ಲಿ ನಡೆದ ಗ್ಯಾಂಗ್‌ವಾರ್‌ ಘಟನೆಯ ಅನಂತರವೂ ಜಿಲ್ಲೆಯ ಜನತೆ ಭಯದಿಂದ ಹೊರಬಂದಿಲ್ಲ. ಕತ್ತಲಿನಲ್ಲಿ ಓಡಾಡಲು ಭಯಪಡುವಂತಹ ಸ್ಥಿತಿ ಜಿಲ್ಲೆಯಲ್ಲಿದೆ.

Advertisement

ಜತೆಗೆ ಹೆಲ್ಮೆಟ್‌ ಇಲ್ಲದೆ ಸಂಚಾರ, ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಸವಾರಿ, ದ್ವಿಚಕ್ರ ವಾಹನದಲ್ಲಿ ಮೂವರು ಸಂಚರಿ ಸುವುದು, ವಿರುದ್ಧ ದಿಕ್ಕಿನಲ್ಲಿ ಸಂಚಾರ, ಕರ್ಕಶ ಹಾರ್ನ್ಗಳು ಸಹಿತ ಹಲವಾರು ನಿಯಮ ಉಲ್ಲಂಘನೆ ಪ್ರಕರಣಗಳು ಜಿಲ್ಲೆಯಲ್ಲಿ ಬೆಳಕಿಗೆ ಬರುತ್ತಿವೆ.ಪೊಲೀಸ್‌ ಇಲಾಖೆ ಬೀಟ್‌ ವ್ಯವಸ್ಥೆ ಯನ್ನು ಸದೃಢಗೊಳಿಸಬೇಕಾಗಿದೆ.

ನೆರೆಯ ದ.ಕ.ದಲ್ಲಿರುವಂತೆ ಟ್ರಾಫಿಕ್‌ ನಿಯಮಾವಳಿಯಲ್ಲಿ ಕಟ್ಟು ನಿಟ್ಟು ಹಾಗೂ ಆಯಕಟ್ಟಿನ ಭಾಗಗಳಲ್ಲಿ ಸಿಸಿಟಿವಿ ವ್ಯವಸ್ಥೆ ಕಲ್ಪಿಸಿದರೆ ಸಾರ್ವಜನಿಕರ ಹಿತ ದೃಷ್ಟಿಯಿಂದಲೂ ಉತ್ತಮ ಎಂಬುದು ಸಾರ್ವಜನಿಕರ ಅನಿಸಿಕೆ.

ಯಾವ ಭಾಗದಲ್ಲಿ ಅಧಿಕ: ಗ್ರಾಮಾಂತರ ಭಾಗದಲ್ಲಿ ದ್ವಿಚಕ್ರ ವಾಹನ ಚಲಾಯಿಸುವವರು ಹೆಲ್ಮೆಟ್‌ ಧರಿಸುವುದೇ ಇಲ್ಲ. ಪೊಲೀಸರ ಭಯ
ದಿಂದ ಆದರೂ ಹೆಲ್ಮೆಟ್‌ ಧರಿಸುವವ ರಿದ್ದರೂ ಈಗ ಗಸ್ತು ಕೂಡ ಇಲ್ಲದ ಕಾರಣ ಎಲ್ಲವೂ ರಾಜಾರೋಷವಾಗಿ ನಡೆಯುತ್ತಿದೆ. ಮುಖ್ಯವಾಗಿ ಉಡುಪಿ ನಗರ ಭಾಗದ ಕಲ್ಸಂಕ, ಕರಾವಳಿ ಬೈಪಾಸ್‌, ಆದಿಉಡುಪಿ, ಬ್ರಹ್ಮಗಿರಿ, ಕಿನ್ನಿಮೂಲ್ಕಿ, ಮಣಿಪಾಲ ಭಾಗದಲ್ಲಿ ಸಂಚಾರ ನಿಯಮಾವಳಿ ಉಲ್ಲಂಘನೆ ಅಧಿಕ ಸಂಖ್ಯೆಯಲ್ಲಿ ನಡೆಯುತ್ತಿದೆ.

ಅಡ್ಡಾದಿಡ್ಡಿ ವಾಹನ ಚಾಲನೆ
ಉಡುಪಿ ಹಾಗೂ ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ವಾಹನ ಚಾಲನೆ ದಿನಂಪ್ರತಿ ಎಂಬಂತೆ ನಡೆಯುತ್ತಿದೆ. ಕರ್ಕಶ ಹಾರ್ನ್ ಬಳಕೆ/ಸೈಲೆನ್ಸರ್‌ಗಳು, ಶಬ್ದಮಾಡಿಕೊಂಡು ವಾಹನ ಸವಾರಿ ಮಾಡುವುದು ಹೀಗೆ ಹಲವು ನಿಯಮಾವಳಿಗಳು ಉಲ್ಲಂಘನೆಯಾಗುತ್ತಿರುವುದು ಕಂಡುಬರುತ್ತಿದೆ. ಗ್ಯಾಂಗ್‌ವಾರ್‌ ನಡೆದ ದಿನದಂದು ಕೂಡ ಆರೋಪಿಗಳು ಉಡುಪಿ-ಮಣಿಪಾಲ ಭಾಗದಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿಕೊಂಡು ಬಂದು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದರು ಎನ್ನಲಾಗಿದೆ. ಇದು ಒಂದು ದಿನದ ಕಥೆಯಲ್ಲ. ಇದರ ಬಗ್ಗೆ ಪೊಲೀಸರು ವಿಶೇಷ ನಿಗಾ ಇರಿಸುವ ಅಗತ್ಯವಿದೆ ಎಂಬುದು
ಜನರ ಒತ್ತಾಯ.

Advertisement

ಶಿಕ್ಷಣ, ವೈದ್ಯಕೀಯ ಸಹಿತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಉಡುಪಿ ಜಿಲ್ಲೆಯಲ್ಲಿ ಕಾನೂನು ಪಾಲನೆ ಕೂಡ ಅಷ್ಟೇ ಕಟ್ಟೆಚ್ಚರವಾಗಿದ್ದರೆ ಮಾತ್ರ ಸಾರ್ವಜನಿಕರು ನೆಮ್ಮದಿ ಯಿಂದ ಇರಲು ಸಾಧ್ಯವಿದೆ. ಅನ್ಯ ಜಿಲ್ಲೆ, ರಾಜ್ಯ ದಿಂದ ವಿದ್ಯಾಭ್ಯಾಸ, ಉದ್ಯೋಗಕ್ಕೆ ಬರುವವರು ಕಾನೂನು ಲೋಪವನ್ನೇ ನೆಪವಾಗಿಸಿಕೊಂಡು ಅನ್ಯ ಜಿಲ್ಲೆಗಳತ್ತ ತೆರಳಿದರೆ ಎಲ್ಲ ಕ್ಷೇತ್ರಗಳಲ್ಲಿಯೂ ಜಿಲ್ಲೆ ಹಿಂದೆ ಹೋಗುವ ಆತಂಕವಿದ್ದು, ಮುಖ್ಯವಾಗಿ ಕಾನೂನು ಪರಿಪಾಲನೆಗೆ ಪೊಲೀ ಸರು ಹೆಚ್ಚಿನ ಆದ್ಯತೆ ನೀಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next