Advertisement

ಗೋವಾದ ಬ್ರಾಹ್ಮಿ ಶಾಸನ: ಹೊಸ ರಾಜ ಮನೆತನ ಪತ್ತೆ

11:34 PM Jun 21, 2024 | Team Udayavani |

ಮಣಿಪಾಲ: ಉತ್ತರ ಗೋವಾದ ಸತ್ತಾರಿ ತಾಲೂಕಿನ ಸತ್ತಾರಿ ಸಮೀಪ ಇರುವ ಪರ್ಯೆಯ ಪಾಳು ಬಿದ್ದಿರುವ ಭೂಮಿಕಾದೇವಿ ದೇವಾಲಯದ ಎದುರು ಕಲ್ಲಿನ ಸ್ತಂಭವೊಂದನ್ನು ನಿಲ್ಲಿಸಲಾಗಿದ್ದು, ಈ ಅಧ್ಯಯನದಲ್ಲಿ ಹೊಸ ರಾಜ ಮನೆತನದ ಬಗ್ಗೆ ತಿಳಿದು ಬಂದಿದೆ ಎಂದು ಶಿರ್ವದ ಮೂಲ್ಕಿ ಸುಂದರ್‌ರಾಮ್‌ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತಣ್ತೀ ಇತಿಹಾಸ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಪ್ರೊ| ಟಿ. ಮುರುಗೇಶಿ ತಿಳಿಸಿದ್ದಾರೆ.

Advertisement

ಕಲ್ಲಿನ ಸ್ತಂಭದ ಮೇಲೆ ಬ್ರಾಹ್ಮಿಲಿಪಿ ಶಾಸನವೊಂದನ್ನು ಇತ್ತೀಚೆಗೆ ಪುರಾತಣ್ತೀ ಅನ್ವೇಷಣೆಯನ್ನು ಕೈಗೊಂಡಿದ್ದು, ಈ ಶಾಸನವನ್ನು ಬ್ರಾಹ್ಮಿಲಿಪಿ ಮತ್ತು ಸಂಸ್ಕೃತ ಭಾಷೆಯಲ್ಲಿ ಬರೆಯಲಾಗಿದೆ. ಕೇವಲ ಎರಡು ಸಾಲಿನ ಈ ಶಾಸನ ಗೋವಾದ ಇತಿಹಾಸ ಮತ್ತು ಸಂಸ್ಕೃತಿಯ ಅಧ್ಯಯನದಲ್ಲಿ ಮಹತ್ವದ್ದಾಗಿದೆ.

ಪ್ರಾಚೀನ ಕಾಲದಲ್ಲಿ ಗೋವಾವನ್ನು ಆಳಿದ್ದ ಹೈಹಯ ಎಂಬ ಒಂದು ಹೊಸ ರಾಜಮನೆತನ ಬೆಳಕಿಗೆ ಬಂದಿತು. ಶಾಸನದ ಪ್ರಕಾರ ಧರ್ಮಯಜೊnà ಎಂಬ ಹೆಸರಿನ ಹೈಹಯ ದೊರೆ ತನ್ನ ಸೈನ್ಯದೊಂದಿಗೆ ಒಂದು ಯಜ್ಞವನ್ನು ನಡೆಸಿದ ವಿಶೇಷ ಮಾಹಿತಿಯನ್ನು ಶಾಸನ ಒಳಗೊಂಡಿದೆ ಹಾಗೂ ಶಾಸನೋಕ್ತ ಈ ಸ್ತಂಭವೇ ಯೂಪಸ್ತಂಭವಾಗಿದೆ.

ಲಿಪಿ ಲಕ್ಷಣದ ಆಧಾರದ ಮೇಲೆ ಶಾಸನದ ಕಾಲವನ್ನು 4 ಅಥವಾ 5ನೇ ಶತಮಾನದ ಶಾಸನವೆಂದು ಗುರುತಿಸಲಾಗಿದೆ. ಪರ್ಯೆ ಭೂಮಿಕಾ ದೇವಾಲಯದ ಪ್ರಾಚೀನತೆಯ ಅಧ್ಯಯನ ದೃಷ್ಟಿಯಿಂದ ಈ ಶಾಸನ ಬಹಳ ಮುಖ್ಯ ದಾಖಲೆಯಾಗಿದೆ. ಭಾರತೀಯ ಪುರಾತಣ್ತೀ ಸರ್ವೆàಕ್ಷಣ ಇಲಾಖೆ ಶಾಸನಶಾಸ್ತ್ರ ವಿಭಾಗದ ನಿರ್ದೇಶಕ ಡಾ| ಮುನಿರತ್ನಂ ರೆಡ್ಡಿ, ಗೋವಾ ಪುರಾತಣ್ತೀ ಸಂಶೋಧಕ ಡಾ| ರಾಜೇಂದ್ರ ಕೇರ್ಕರ್‌, ವಿಟೊuàಬ ಗಾವಡೆ, ಚಂದ್ರಕಾಂತ್‌ ಔಖಲೆ, ಅಮೈ ಕಿಂಜ್‌ವಾಡೇಕರ್‌ ಅಧ್ಯಯನಕ್ಕೆ ಸಹಕಾರ ನೀಡಿದ್ದಾರೆ ಎಂದು ಪ್ರೊ| ಟಿ. ಮುರುಗೇಶಿ ತಿಳಿಸಿದ್ದಾರೆ.

ಹೈಹಯರು ಯಾರು?
ಹೈಹಯರು, ಭಾರತದ ಪುರಾಣಗಳು ಹಾಗೂ ಮಹಾ ಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣಗಳಲ್ಲಿ ಉಲ್ಲೇಖೀತವಾಗಿರುವ ಐದು ಕುಲಗಳನ್ನು ಒಳಗೊಂಡಿರುವ ಪ್ರಾಚೀನ ಒಕ್ಕೂಟ. ವಿತಿಹೋತ್ರ, ಶರ್ಯತ, ಭೋಜ, ಆವಂತಿ ತುಂಡಿಕೇರ ಎಂಬ ಐದು ಹೈಹಯ ಕುಲಗಳನ್ನು ಪುರಾಣ ಗಳಲ್ಲಿ ಹೆಸರಿಸಲಾಗಿದೆ. ಭೋಜರು ಗೋವಾದಲ್ಲಿ ಆಳ್ವಿಕೆ ನಡೆಸುತ್ತಿದ್ದರು ಎಂಬುದಕ್ಕೆ ಇತರ ಐತಿಹಾಸಿಕ ದಾಖಲೆಗಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next