Advertisement

Udupi: ವ್ಯಕ್ತಿಯನ್ನು ಅಪಹರಿಸಿ ಹಣ ಲೂಟಿ

12:22 AM Jun 22, 2024 | Team Udayavani |

ಮಣಿಪಾಲ: ಚಾಕು ತೋರಿಸಿ ವ್ಯಕ್ತಿಯೊಬ್ಬರನ್ನು ಅಪ ಹರಿಸಿ, ಅವರಲ್ಲಿದ್ದ 1 ಲ.ರೂ. ಅನ್ನು ಕಸಿದು ಜೀವಬೆದರಿಕೆ ಹಾಕಿದ ಘಟನೆ ಉಡುಪಿ ನಗರದಲ್ಲಿ ನಡೆದಿದೆ.

Advertisement

ಆತ್ರಾಡಿಯ ಮಹಮ್ಮದ್‌ ನಿಹಾಲ್‌ ಅವರು ಬಸ್‌ನ ಕಲೆಕ್ಷನ್‌ ವ್ಯವಹಾರ ಮಾಡಿಕೊಂಡಿದ್ದು, ಜೂ. 20ರಂದು ಬಸ್‌ನ ಕಲೆಕ್ಷನ್‌ ಹಣ ವನ್ನು ತೆಗೆದುಕೊಂಡು ಉಡುಪಿ ಸರ್ವಿಸ್‌ ಬಸ್‌ ನಿಲ್ದಾಣದ ಬೇಕರಿ ಬಳಿ ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಬಲವಂತವಾಗಿ ಅವರನ್ನು ಕಾರಿನಲ್ಲಿ ಕರೆದೊಯ್ದಿದ್ದಾರೆ.

ಬಳಿಕ ಚಾಕು ತೋರಿಸಿ, ಕೈಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಣವನ್ನು ಕಸಿದು ಜೀವ ಬೆದರಿಕೆ ಹಾಕಿದ್ದಾರೆ.

ಆರೋಪಿಗಳನ್ನು ಶಾರೀಕ್‌, ಇರ್ಫಾನ್‌ ಎಂದು ಗುರುತಿಸಲಾಗಿದೆ. ಇವರ ಜತೆಗೆ ಇನ್ನೂ ಇಬ್ಬರು ಅಪರಿಚಿತರು ಇದ್ದರು ಎಂದು ಮಹಮ್ಮದ್‌ ನಿಹಾಲ್‌ ಉಡುಪಿ ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next