Advertisement

ನೀತಿ ಸಂಹಿತೆ ಉಲ್ಲಂಘನೆ; ಜೆಡಿಎಸ್ ಅಭ್ಯರ್ಥಿ ವಿರುದ್ಧ ದೂರು ದಾಖಲು 

11:16 AM Apr 19, 2023 | Team Udayavani |

ಗಂಗಾವತಿ: ಗಂಗಾವತಿ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮತ್ತು ಜೆಡಿಎಸ್ ಕಾರ್ಯಕರ್ತರ ವಿರುದ್ಧ ಚುನಾವಣಾಧಿಕಾರಿಗಳು ದೂರು ದಾಖಲಿಸಿದ್ದಾರೆ .

Advertisement

ಮಂಗಳವಾರ ಜೆಡಿಎಸ್ ಅಭ್ಯರ್ಥಿ ಎಚ್.ಆರ್.ಚನ್‌ಕೇಶವ ಉಮೇದುವಾರಿಕೆಯ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಮೆರವಣಿಗೆಯಲ್ಲಿ 10 ವರ್ಷಕ್ಕಿಂತ ಕೆಳಗಿರುವ ಮಕ್ಕಳನ್ನು ಬಳಕೆ ಮಾಡಲಾಗಿದೆ ಎಂದು ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ತಂಡದ ಅಧಿಕಾರಿಗಳು ನಗರ ಠಾಣೆಗೆ ದೂರು ಸಲ್ಲಿಸಿ ಆರೋಪಿತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಎಚ್ ಆರ್ ಚನ್ನಕೇಶವವರು ಮಂಗಳವಾರ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಶ್ರೀ ಚನ್ನಬಸವ ಸ್ವಾಮಿ ಗಂಜ್ ಮುಂಭಾಗದ ಗೇಟಿನಿಂದ ಶ್ರೀ ಚನ್ನಬಸವ ಸ್ವಾಮಿ ವೃತ್ತ ಮಹಾವೀರ ವೃತ್ತ ,ಗಾಂಧಿವೃತ್ತ ,ದುರ್ಗಮ್ಮ ದೇವಾಲಯದ ಹತ್ತಿರ ಮೆರವಣಿಗೆ ಸಂದರ್ಭದಲ್ಲಿ 10 ವರ್ಷದ ಒಳಗಿನ ಮಕ್ಕಳನ್ನು ಮೆರವಣಿಗೆಯಲ್ಲಿ ಬಳಸಿದ್ದಕ್ಕಾಗಿ ಚುನಾವಣಾ ಅಧಿಕಾರಿಗಳಾದ ಗುರುಪ್ರಸಾದ,ಶೇಖರಯ್ಯ,ರಾಜಪ್ಪ,ಶಂಕರಗೌಡ ಅಧಿಕಾರಿಗಳ ತಂಡ ಮೆರವಣಿಗೆಯಲ್ಲಿ ಮಕ್ಕಳಿರುವುದನ್ನು ಗಮನಿಸಿ ನಗರ ಠಾಣೆ ಗೆ ದೂರು ಸಲ್ಲಿಸಿದ್ದಾರೆ.

ಮೆರವಣಿಗೆಯ ಪರವಾನಿಗೆಗಾಗಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಶೇಖನಬಿ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಮಕ್ಕಳನ್ನು ಮೆರವಣಿಗೆಯಲ್ಲಿ ಬಳಕೆ ಮಾಡದಂತೆ ನಿರ್ಭಂಧ ವಿಧಿಸಿದ್ದರೂ ನಿಯಮ ಉಲ್ಲಂಘನೆ ಮಾಡಿದ್ದ ರಿಂದ 188 ಐಪಿಸಿ ಮತ್ತು14 ಬಾಲಕಾರ್ಮಿಕ ನಿಷೇಧ ಕಾಯ್ದೆ ಅನ್ವಯ ಜೆಡಿಎಸ್ ಕಾರ್ಯಕರ್ತರ ವಿರುದ್ದ ಕೇಸ್ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next