ಉಡುಪಿ: ಟಿಕೆಟ್ ಸಿಕ್ಕಾಗ ಕೆಲವರು ಪಟಾಕಿ ಹೊಡೆದಿದ್ದಾರೆ. ಅಪ್ಪಿತಪ್ಪಿ ಜಯ ಗಳಿಸಿದರೆ ಬಾಂಬ್ ಬೀಳಬಹುದಾದ ಪ್ರಸಂಗ ಇರಬಹುದು ಎಂದು ಮಾಜಿ ಸಚಿವ, ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಹೇಳಿದರು.
ಉಡುಪಿ ಕ್ಷೇತ್ರದ ಕಾಂಗ್ರೆಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಅಣ್ಣಾಮಲೈ ಮೂಲಕ ಹಣದ ಗಂಟು ಹೆಲಿಕಾಪ್ಟರ್ ಮೂಲಕ ಜಿಲ್ಲೆಗೆ ಬಂದಿದೆ ಎಂದು ಆರೋಪಿಸಿದರು.
ಇದನ್ನೂ ಓದಿ:ಮಂಗಳೂರು: ಕಳೆದುಹೋದ ಮೊಬೈಲ್ ಪತ್ತೆಗಾಗಿ ಸಾರ್ವಜನಿಕರ ನೆರವಿಗೆ ವಾಟ್ಸಪ್ ಸಹಾಯವಾಣಿ ಆರಂಭ
ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಅವರು ಮಾತನಾಡಿ, ಚುನಾವಣೆ ಎದುರಿಸಲು ಸಜ್ಜಾಗಿದ್ದೇವೆ. ಕಾಂಗ್ರೆಸ್ ಪಕ್ಷದ ಕೊಡುಗೆಯಿಂದ ಉಡುಪಿಯಿಂದ ವಿಶ್ವ ಮಟ್ಟದ ಗುರುತಿಸಿಕೊಂಡಿದೆ. ವಿ.ಎಸ್ ಆಚಾರ್ಯ ಅವರ ದೈವಾಧೀನರಾದ ನಂತರ ಬಿಜೆಪಿ ಧೂಳಿಪಟವಾಗಿದೆ. ಕಾರ್ಯಕರ್ತರ ಕಷ್ಟ ಸುಖದಲ್ಲಿ ನಿರಂತರವಾಗಿ ನಿಮ್ಮ ಜತೆಗೆ ಇರುತ್ತೇನೆ ಎಂದರು.
ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಮೀನುಗಾರಿಕೆ ಪ್ರಕೋಷ್ಠದ ಮಂಜುನಾಥ್, ಪ್ರಮುಖರಾದ ಎಂ.ಎ.ಗಫೂರ್, ನಿತ್ಯಾನಂದ ಶೆಟ್ಟಿ, ಕಾಂಚನ್, ಸರಳಾ ಕಾಂಚನ್, ಪ್ರಖ್ಯಾತ್ ಶೆಟ್ಟಿ, ವೆರಿನಿಕಾ ಕರ್ನೆಲಿಯೋ, ಅಮೃತ್ ಶೆಣೈ, ದಿನಕರ ಹೇರೂರು ಮೊದಲಾದವರು ಉಪಸ್ಥಿತರಿದ್ದರು.