Advertisement

ಶಾಂತಿ ನೆಲೆಸಲು ಎಲ್ಲರ ಸಹಕಾರ ಅಗತ್ಯ ವಿನಯಕುಮಾರ್‌ ಸೊರಕೆ

02:20 AM Jul 10, 2017 | Team Udayavani |

ಕಾಪು: ದಕ್ಷಿಣ ಕನ್ನಡ ಜಿಲ್ಲೆ ಶಾಂತಿ-ಸೌಹಾರ್ದಕ್ಕೆ ಹೆಸರುವಾಸಿಯಾಗಿದ್ದು, ಕಳೆದ ಕೆಲವು ದಿನಗಳಿಂದ ಅಲ್ಲಿ ನಡೆಯುತ್ತಿರುವ ಘಟನೆಗಳು ಎಲ್ಲರನ್ನೂ ಹತಾಶೆಗೊಳಗಾಗುವಂತೆ ಮಾಡಿವೆ. ಎಲ್ಲರ ಸಹಕಾರದೊಂದಿಗೆ ಪರಿಸ್ಥಿತಿ ಹತೋಟಿಗೆ ಬಂದು ಅತೀ ಶೀಘ್ರದಲ್ಲಿ ಜಿಲ್ಲೆಯಲ್ಲಿ ಶಾಂತಿ ನೆಲೆಯಾಗಲಿ ಎಂದು ಕಾಪು ಶಾಸಕ ವಿನಯಕುಮಾರ್‌ ಸೊರಕೆ ಹೇಳಿದ್ದಾರೆ.

Advertisement

ಕಾಪುವಿನಲ್ಲಿ ಉದಯವಾಣಿ ಪ್ರತಿನಿಧಿಯೊಂದಿಗೆ ಮಾತ ನಾಡಿದ ಅವರು ದ.ಕ. ಜಿಲ್ಲೆಯಲ್ಲಿ ಯಾವುದೇ ಘಟನೆಗಳು ನಡೆದರೂ ಅದು ಇತರ ಕಡೆಗಳಿಗೂ ಪ್ರಭಾವವನ್ನು ಬೀರುತ್ತವೆ. ಮನುಕುಲವೇ ತಲೆ ತಗ್ಗಿಸುವಂತಹ ಘಟನೆ ಅಲ್ಲಿ ನಡೆದಿದ್ದು, ಜಿಲ್ಲೆಯ ಜನ ಇದರಿಂದಾಗಿ ಭಯದಲ್ಲಿ ದಿನ ಕಳೆಯುವಂತಾಗಿದೆ. ಕೋಮು ದ್ವೇಷದ ಪ್ರಚೋದನೆಯು ಇತರೆಡೆಗಳಿಗೆ ಹರಡದಂತೆ ನೋಡಿಕೊಳ್ಳುವಲ್ಲಿ ಪೊಲೀಸ್‌ ಇಲಾಖೆ ಮುಂದಾಗುವಂತೆ ಅವರು ಆಗ್ರಹಿಸಿದ್ದಾರೆ.

ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಜಾನಪದ, ಔದ್ಯಮಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಗುರುತಿಸ ಲ್ಪಟ್ಟಿರುವ ದ.ಕ. ಜಿಲ್ಲೆಯಲ್ಲಿ ಶಾಂತಿ ಮರುಸ್ಥಾಪನೆಗೆ ಪ್ರತೀಯೋರ್ವರೂ ಕೈ ಜೋಡಿಸಬೇಕು ಮತ್ತು ಇದರಿಂದಾಗಿ ಉಂಟಾಗಬಹುದಾದ ಅನಾಹುತ ಮತ್ತು ತೊಂದರೆಗಳ ಬಗ್ಗೆ ಅರಿತುಕೊಳ್ಳಬೇಕು. ಜಿಲ್ಲೆಯ ಜನತೆ ಶಾಂತಿಪ್ರಿಯರು ಎನ್ನುವುದನ್ನು ಮತ್ತೆ ಜಗತ್ತಿಗೆ ತೋರಿಸಿಕೊಡಬೇಕು ಎಂದು ಶಾಸಕ ಸೊರಕೆ ಜನರಲ್ಲಿ ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next