Advertisement

ದತ್ತಪೀಠದಲ್ಲಿ ಶೌಚಾಲಯಗಳನ್ನು ಕ್ಲೀನ್ ಮಾಡಿದ ವಿನಯ್ ಗುರೂಜಿ

04:44 PM Dec 11, 2021 | Team Udayavani |

ಚಿಕ್ಕಮಗಳೂರು : ದತ್ತಪೀಠ ಪ್ರಾಧಿಕಾರ ಮಾಡಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕು ಎಂದು ಮುಖ್ಯಮಂತ್ರಿ, ಪ್ರವಾಸೋದ್ಯಮ ಸಚಿವರಿಗೆ ಅವಧೂತ ವಿನಯ್ ಗುರೂಜಿ ಶನಿವಾರ ಮನವಿ ಮಾಡಿದ್ದಾರೆ.

Advertisement

ದತ್ತಪೀಠದಲ್ಲಿ ಶೌಚಾಲಯಗಳನ್ನು ತಾವೇ ಸ್ವಚ್ಛ ಮಾಡಿ ಬಳಿಕ ಸುದ್ದಿಗಾರರರೊಂದಿಗೆ ಮಾತನಾಡಿದ ಗುರೂಜಿ, ಇಲ್ಲಿ ವಾರಾಂತ್ಯಕ್ಕೆ 2000ಕ್ಕೂ ಅಧಿಕ ವಾಹನಗಳಲ್ಲಿ ಜನ ಬರುತ್ತಾರೆ. ನಾನು ಗುರು ಅನ್ನೋದಕ್ಕಿಂತ ಜನಸಾಮಾನ್ಯನಾಗಿ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ, ಇಲ್ಲಿ ಮಹಿಳೆಯರಿಗೆ ಇನ್ನೂ ಹೆಚ್ಚು ಶೌಚಾಲಯ ನಿರ್ಮಿಸಿ ಕೊಡಬೇಕು ಎಂದರು.

ದುಡ್ಡಿದ್ದವರು ರೆಸಾರ್ಟ್ ಗೆ ಹೋಗುತ್ತಾರೆ , ಕೂಲಿ ಮಾಡುವವರು ಎಲ್ಲಿ ಹೋಗುತ್ತಾರೆ, ಬಡವರು ಟೂರ್ ಮಾಡಬಾರದು ಎಂದು ರೂಲ್ ಇಲ್ಲವಲ್ಲ ಎಂದರು.

ಸಂಬಂಧಪಟ್ಟವರಿಗೆ ಆಶ್ರಮದ ವತಿಯಿಂದ ಖುದ್ದು ನಾನೇ ಪತ್ರ ಬರೆಯುತ್ತೇನೆ, ಸ್ಪಂದಿಸಿ, ಮುಂದಿನ ವರ್ಷದೊಳಗೆ ಸ್ವಲ್ಪ ವ್ಯವಸ್ಥೆ ಮಾಡಲಿ ಎಂದರು.

ಇನ್ನೂ ಮೂರು-ನಾಲ್ಕು ತಿಂಗಳು ಕೊರೋನಾ ಎಳೆಯಬಹುದು. ಮಾರ್ಚ್-ಮೇನಲ್ಲಿ ಇದರಿಂದ ಹೊರಬರುವ ನಂಬಿಕೆ ಇದೆ. ನಾನು ಮೆಡಿಟೇಷನ್ ಮಾಡಿದಂತೆ ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.

Advertisement

ಮನುಷ್ಯನಿಗೆ ವಿಲ್ ಪವರ್ ದೊಡ್ಡ ಪವರ್, ಜನ ಆತ್ಮ ವಿಶ್ವಾಸ ಕಳೆದುಕೊಳ್ಳುವುದು ಬೇಡ. ಎಲ್ಲವನ್ನೂ ದೇವರು ಮಾಡಲಿ, ಮ್ಯಾಜಿಕ್ ಆಗಲಿ, ಪವಾಡ ಆಗಲಿ ಅಂದರೆ ಆಗುವುದಿಲ್ಲ.ನಮ್ಮ ಪ್ರಯತ್ನವೇ ನಿಜವಾದ ಪವಾಡ ಜನ, ಸರ್ಕಾರ, ಪಕ್ಷಗಳು ಎಲ್ಲರೂ ಒಬ್ಬರನ್ನು ಒಬ್ಬರು ದೂರಿಕೊಳ್ಳುವ ಬದಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಎಲ್ಲಾ ಜನರನ್ನ ರಕ್ಷಿಸಬೇಕು, ಒಮ್ಮತದಿಂದ ಕೆಲಸ ಮಾಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next