Advertisement
ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಯಕೊಂಡ, ಆನಗೋಡು ಹೋಬಳಿಗಳಿವೆ. ಈ ಪೈಕಿ ಮಾಯಕೊಂಡ ಹೊರತುಪಡಿಸಿ ಆನಗೋಡುಹೋಬಳಿಯ 12, ಮಾಯಕೊಂಡ ಹೋಬಳಿಯ 11 ಗ್ರಾಪಂಗಳಿಗೆ ಡಿ. 22 ರಂದು ಚುನಾವಣೆ ನಡೆಯಲಿದೆ.ಕಳೆದ ಅವಧಿಯಲ್ಲಿ ಬೆರಳೆಣಿಕೆ ಕೆಲಸಗಳಾಗಿದ್ದು, ಇನ್ನೂಹಲವಾರು ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ರಾಜೀವ್ ಗಾಂಧಿ ಸಬ್ ಮಿಷನ್ ಬಹು ಗ್ರಾಮ ಯೋಜನೆಯ ಶುದ್ಧ ಕುಡಿಯುವ ನೀರಿನ ಘಟಕ ಕೆಲ ಗ್ರಾಮಗಳ ನೀರಿನ ದಾಹ ತೀರಿಸಿದರೆ,ಇನ್ನುಳಿದ ಗ್ರಾಮಗಳಲ್ಲಿ ನೀರಿನಸಮಸ್ಯೆ ಇನ್ನೂ ಜೀವಂತವಾಗಿದೆ. ಭದ್ರಾನಾಲೆಯಲ್ಲಿ ನೀರು ಹರಿಯುವಾಗ ಮಾತ್ರ ನೀರಿನ ಸಮಸ್ಯೆ ನೀಗುತ್ತದೆ. ಇನ್ನುಳಿದ ದಿನಗಳಲ್ಲಿ ಬೋರ್ ವೆಲ್ ನೀರು ಬಳಕೆ ಮಾಡಬೇಕಾದ ಸ್ಥಿತಿ ಇದೆ.
Related Articles
Advertisement
ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಚರಂಡಿ ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ಕೊಳಚೆ ಸಂಗ್ರಹವಾಗಿಸಮಸ್ಯೆಯಾಗುತ್ತಿದೆ. ಗ್ರಾಮದಲ್ಲಿ ಬ್ಯಾಂಕ್ ಶಾಖೆಆರಂಭವಾಗಬೇಕು. ಶುದ್ಧ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಬೇಕು. ಪ್ರಕಾಶ್, ಹುಚ್ಚವ್ವನಹಳ್ಳಿ ಗ್ರಾಪಂ,1ನೇ ವಾರ್ಡ್ ಅಭ್ಯರ್ಥಿ
ಮತ್ತಿ ಗ್ರಾಮದ ತಿಮ್ಮಪ್ಪನ ಕ್ಯಾಂಪ್‌ನಲ್ಲಿ ಚರಂಡಿ, ರಸ್ತೆ, ನಿರ್ಮಾಣಮಾಡಬೇಕು ಹೂಳು ತುಂಬಿರುವ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ನೂತನ ಪೈಪ್ ಅಳವಡಿಸಬೇಕು. ಗ್ರಾಮದ ಬಸ್ ನಿಲ್ದಾಣದ ಬಳಿ ಶೌಚಾಲಯ ನಿರ್ಮಾಣ ಮಾಡಬೇಕು. – ಕೆ.ಬಿ. ಸತೀಶ್, ಮತ್ತಿ ಗ್ರಾಪಂ, 2ನೇ ವಾರ್ಡ್ ಅಭ್ಯರ್ಥಿ
ಅಣಬೇರು ಗ್ರಾಮದ ಮಧ್ಯ ಭಾಗದಲ್ಲಿ ಪುರಾತನ ಕಾಲದಹೊಂಡದಲ್ಲಿ ಮಳೆ ನೀರು ನಿಂತು ವಾಸನೆ ಬರುತ್ತದೆ. ಸೊಳ್ಳೆಗಳ ಕಾಟದಿಂದ ಜನರು ಬೇಸತ್ತಿದ್ದಾರೆ.ಹೊಂಡ ಮುಚ್ಚಬೇಕು, ಗ್ರಾಮದ ಜನರ ಮನೆಗಳ ಇ-ಸ್ವತ್ತು ಮಾಡಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಬೇಕು. ಬಸ್ ಸಂಚಾರ ಹೆಚ್ಚಿಸಬೇಕು. – ಜಿ.ಎಂ. ಅನಿಲ್‌ಕುಮಾರ್, ಅಣಬೇರು ಗ್ರಾಪಂನ 3ನೇ ವಾರ್ಡ್ ಅಭ್ಯರ್ಥಿ
–ಶಶಿಧರ ಶೇಷಗಿರಿ