Advertisement
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಆಹಾರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಇದಕ್ಕೆ ಕೃಷಿ ಕ್ಷೇತ್ರದಲ್ಲಿ ನಡೆದಿರುವ ಸಂಶೋಧನೆ, ಶಿಕ್ಷಣ, ತಂತ್ರಜ್ಞಾನ ಕಾರಣವೆನ್ನಬಹುದು ಎಂದು ಹೇಳಿದರು. ಕೃಷಿ ತಂತ್ರಜ್ಞಾನ ಅಳವಡಿಕೆ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಶ್ರೀನಾಥ್ ದೀಕ್ಷಿತ್ ಮಾತನಾಡಿ, ಶಿಕ್ಷಣ, ಉದ್ಯೋಗಕ್ಕಾಗಿ ವಲಸೆ ಹೋದರೆ ಒಳ್ಳೆಯದು.
ಆದರೆ, ಬರಗಾಲ, ಕೃಷಿಯಲ್ಲಿ ನಷ್ಟ, ವಾತಾವರಣ ಬದಲಾವಣೆ ಇತ್ಯಾದಿ ನಕಾರಾತ್ಮಕವಾದ ವಲಸೆ ಒಳ್ಳೆಯದಲ್ಲ. ಕೃಷಿಯನ್ನ ಲಾಭದಾಯಕ ಉದ್ಯಮವಾಗಿ ಪರಿವರ್ತಿಸಿಕೊಂಡು ಆರ್ಥಿಕವಾಗಿ ಸಬಲರಾಗುವ ನಿಟ್ಟಿನಲ್ಲಿ ಕೃಷಿ ಸಂಶೋಧನೆ, ತಂತ್ರಜ್ಞಾನಗಳನ್ನು ರೈತರು ಬಳಕೆ ಮಾಡಿಕೊಳ್ಳಬೇಕು ಎಂದರು.
ಕೃಷಿ ವಿವಿ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಶ್ರೀನಿವಾಸ್‌ಗೌಡ ಮಾತನಾಡಿ, ಭಾರತ ಗ್ರಾಮಗಳ ದೇಶ. ಆದರೆ, ಇತ್ತೀಚಿನ ದಿನಗಳಲ್ಲಿ ದೇಶದ ಪಟ್ಟಣಗಳು ಬೆಳೆಯುತ್ತಿರುವ ವೇಗ ಜಾಸ್ತಿ ಇದೆ. ವಿಶ್ವದ ವೇಗ 0.9 ಇದ್ದು, ಭಾರತದಲ್ಲಿ 1.1ರಷ್ಟಿದೆ. 2050ನೇ ಇಸವಿಗೆ ಭಾರತ ಪಟ್ಟಣಗಳ ದೇಶ ಆಗಲಿದೆ.
ಸುಮಾರು 81.4 ಕೋಟಿ ಭಾರತೀಯರು ಪಟ್ಟಣದಲ್ಲಿ ನೆಲೆಸಿದರೆ 80.5 ಕೋಟಿ ಗ್ರಾಮೀಣ ಪ್ರದೇಶದಲ್ಲಿ ನೆಲೆಸುತ್ತಾರೆ ಎಂದು ಹೇಳಿದರು. ಸಮಾರಂಭದಲ್ಲಿ ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ.ಎಂ.ಎಸ್.ನಟರಾಜ್ ಮತ್ತಿತರರು ಉಪಸ್ಥಿತರಿದ್ದರು.